ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ಓವರ್‌ನಲ್ಲೇ ಮೂರು ನೋ ಬಾಲ್: ಮ್ಯಾಚ್‌ ಫಿಕ್ಸಿಂಗ್ ಆರೋಪ ನಿರಾಕರಿಸಿದ ಶೋಯೆಬ್

Published 26 ಜನವರಿ 2024, 20:19 IST
Last Updated 26 ಜನವರಿ 2024, 20:19 IST
ಅಕ್ಷರ ಗಾತ್ರ

ಢಾಕಾ: ಬಾಂಗ್ಲಾದೇಶ ಪ್ರೀಮಿಯರ್ ಲೀಗ್‌ನಲ್ಲಿ ಮ್ಯಾಚ್‌ ಫಿಕ್ಸಿಂಗ್‌ ಆರೋಪ ಹಾಗೂ ಫಾರ್ಚೂನ್ ಬರಿಶಾಲ್ ಜೊತೆಗಿನ  ಒಪ್ಪಂದವನ್ನು ರದ್ದುಗೊಳಿಸಲಾಗಿದೆ ಎಂಬ ಆಧಾರರಹಿತ ಹೇಳಿಕೆಗಳನ್ನು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಶೋಯೆಬ್‌ ಮಲಿಕ್ ನಿರಾಕರಿಸಿದ್ದಾರೆ. ‌‌

ಜನವರಿ 22 ರಂದು ಖುಲ್ನಾ ಟೈಗರ್ಸ್ ವಿರುದ್ಧದ ಪಂದ್ಯದ ಆರಂಭಿಕ ಓವರ್‌ನಲ್ಲಿ ಅವರು ಮೂರು ನೋ ಬಾಲ್‌ಗಳನ್ನು ಎಸೆದ ನಂತರ ಈ ಊಹಾಪೋಹಗಳು ಹುಟ್ಟಿಕೊಂಡಿದ್ದವು.

ಮ್ಯಾಚ್ ಫಿಕ್ಸಿಂಗ್‌ನ ಅನುಮಾನದ ಕಾರಣ ಫ್ರಾಂಚೈಸಿಯೊಂದಿಗೆ ಮಲಿಕ್ ಅವರ ಒಪ್ಪಂದವನ್ನು ಕೊನೆಗೊಳಿಸಲಾಗಿದೆ ಎಂದು ವದಂತಿಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡತೊಡಗಿವೆ. ಆರೋಪಗಳ ಹೊರತಾಗಿಯೂ, ಬಿಪಿಎಲ್ 2024ರ ಢಾಕಾ ಲೆಗ್ ಮುಗಿಯುವ ಮೊದಲು ಮಲಿಕ್ ಫ್ರಾಂಚೈಸಿಗಾಗಿ ಮತ್ತೊಂದು ಪಂದ್ಯ ಆಡಿದರು. 

‘ವದಂತಿಗಳ ವಿಷಯಕ್ಕೆ ಬಂದಾಗ ಎಚ್ಚರಿಕೆ ವಹಿಸುವ ಮಹತ್ವವನ್ನು ಒತ್ತಿ ಹೇಳಲು ಬಯಸುತ್ತೇನೆ. ಈ ಆಧಾರರಹಿತ ವದಂತಿಗಳನ್ನು ಬಲವಾಗಿ ನಿರಾಕರಿಸುತ್ತೇನೆ. ಪ್ರತಿಯೊಬ್ಬರೂ ಮಾಹಿತಿಯನ್ನು ನಂಬುವ ಮತ್ತು ಹರಡುವ ಮೊದಲು ಅದನ್ನು ಪರಿಶೀಲಿಸುವುದು ಬಹಳ ಮುಖ್ಯ’ ಎಂದು ಮಲಿಕ್  'ಎಕ್ಸ್' ನಲ್ಲಿ ಬರೆದಿದ್ದಾರೆ. 

‘ಸುಳ್ಳುಗಳು ಅನಗತ್ಯ ಗೊಂದಲ ಸೃಷ್ಟಿಸಬಹುದು. ವಾಸ್ತವಾಂಶಗಳನ್ನು ಖಚಿತಪಡಿಸಿಕೊಳ್ಳಲು ವಿಶ್ವಾಸಾರ್ಹ ಮೂಲಗಳನ್ನು ಅವಲಂಬಿಸಬೇಕು. ತಂಡದ ನಾಯಕ ತಮೀಮ್ ಇಕ್ಬಾಲ್ ಅವರೊಂದಿಗೆ ಚರ್ಚಿಸಿದ್ದೇನೆ’ ಎಂದು ಹೇಳಿದ್ದಾರೆ. 

‘ದುಬೈನಲ್ಲಿ ಪೂರ್ವನಿಯೋಜಿತ ಮಾಧ್ಯಮ ಕಾರ್ಯಕ್ರಮಕ್ಕಾಗಿ ಬಾಂಗ್ಲಾದೇಶವನ್ನು ತೊರೆಯಬೇಕಾಯಿತು. ಮುಂಬರುವ ಪಂದ್ಯಗಳಿಗಾಗಿ ನಾನು ಫಾರ್ಚೂನ್ ಬಾರಿಶಾಲ್‌ಗೆ ಶುಭಾಶಯಗಳನ್ನು ತಿಳಿಸುತ್ತೇನೆ ಮತ್ತು ಅಗತ್ಯವಿದ್ದರೆ ಅವರನ್ನು ಬೆಂಬಲಿಸಲು  ಲಭ್ಯ’ ಎಂದು ತಿಳಿಸಿದ್ದಾರೆ. 

ಫಾರ್ಚೂನ್ ಬರಿಶಾಲ್ ಮಾಲೀಕ ಮಿಜಾನುರ್ ರೆಹಮಾನ್ ಮ್ಯಾಚ್ ಫಿಕ್ಸಿಂಗ್ ವರದಿಗಳನ್ನು ತಳ್ಳಿಹಾಕಿರುವ ವಿಡಿಯೊವನ್ನು ಸಹ ಮಲಿಕ್ ಪೋಸ್ಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT