ಕಾಮನ್‌ವೆಲ್ತ್ ಗೇಮ್ಸ್ ಕಂಚಿನ ಪದಕ ವಿಜೇತರಾದ ಟ್ರಿಸಾ ಮತ್ತು ಗಾಯತ್ರಿ ಮೊದಲ ಗೇಮ್‌ನಲ್ಲಿ 5-10 ರಿಂದ ಹಿನ್ನಡೆ ಅನುಭವಿಸಿ, ಬಳಿಕ ಚೇತರಿಸಿಕೊಂಡು 16-16 ರಲ್ಲಿ ಮುನ್ನಡೆ ಸಾಧಿಸಿದರು. ಆದರೆ, ಮತ್ಸುಯಾಮಾ ಮತ್ತು ಶಿಡಾ ಪ್ರಾಬಲ್ಯ ಮುಂದುವರಿಸಿ ಮೊದಲ ಗೇಮ್ ಗೆದ್ದರು. ಎರಡನೇ ಗೇಮ್‌ನಲ್ಲಿ ಜಪಾನಿಯರು 20-6 ರಿಂದ ಮುನ್ನಡೆ ಸಾಧಿಸಿ, ಎದುರಾಳಿಗೆ ಪುಟಿದೇಳಲು ಅವಕಾಶ ನೀಡಲಿಲ್ಲ.