ರಾಂಚಿ: ಭಾರತದ ಉದಯೋನ್ಮುಖ ಶಾಟ್ಪಟ್ ಸ್ಪರ್ಧಿ ಸಮರ್ದೀಪ್ ಸಿಂಗ್ ಗಿಲ್ ಅವರು ಶುಕ್ರವಾರ ಇಲ್ಲಿ ಆರಂಭವಾದ ದಕ್ಷಿಣ ಏಷ್ಯಾ ಅಥ್ಲೆಟಿಕ್ಸ್ ಫೆಡರೇಷನ್ ಸೀನಿಯರ್ ಚಾಂಪಿಯನ್ಷಿಪ್ನಲ್ಲಿ ಕೂಟ ದಾಖಲೆಯೊಂದಿಗೆ ಚಿನ್ನ ಗೆದ್ದರು.

ಉದ್ಘಾಟನಾ ಸಮಾರಂಭದಲ್ಲಿ ಭಾರತ ತಂಡದ ಧ್ವಜಧಾರಿಯಾಗಿದ್ದ ಗಿಲ್ ಅವರು ಪುರುಷರ ಶಾಟ್ಪಟ್ ಸ್ಪರ್ಧೆಯಲ್ಲಿ 19.59 ಮೀಟರ್ ಸಾಧನೆ ಮೆರೆದರು. 2008ರ ಆವೃತ್ತಿಯಲ್ಲಿ ಎಸ್. ಕುಮಾರ್ ಸಿಂಗ್ ಸ್ಥಾಪಿಸಿದ (17.71 ಮೀಟರ್) ದಾಖಲೆಯನ್ನು ಮುರಿದರು. ಭಾರತದವರೇ ಆದ ರವಿ ಕುಮಾರ್ (17.95 ಮೀ) ಬೆಳ್ಳಿ ಗೆದ್ದರೆ, ಶ್ರೀಲಂಕಾದ ಮಿಥುನ್ರಾಜ್ ಕಂಚಿನ ಪದಕ ಪಡೆದರು.

5000 ಮೀಟರ್ ಓಟದಲ್ಲಿ ಭಾರತದ ಅಥ್ಲೀಟ್ಗಳು ಪಾರಮ್ಯ ಮೆರೆದರು. ಪುರುಷರ ವಿಭಾಗದಲ್ಲಿ ಪ್ರಿನ್ಸ್ ಕುಮಾರ್ 14 ನಿಮಿಷ 22.17 ಸೆಕೆಂಡುಗಳಲ್ಲಿ ಗುರಿ ತಲುಪಿ ಚಿನ್ನ ಗೆದ್ದರು. ಶ್ರೀಲಂಕಾದ ವಕ್ಷನ್ ವಿಕ್ನರಾಜ್ (14:23.21) ಬೆಳ್ಳಿ ಪದಕ ಗೆದ್ದರು. ಮಹಿಳೆಯರ ವಿಭಾಗದಲ್ಲಿ ಸಂಜನಾ ಸಿಂಗ್ ಚಿನ್ನ, ಸೀಮಾ ಬೆಳ್ಳಿ ಪದಕವನ್ನು ಗೆದ್ದರು.

ಪುರುಷರ 100 ಮೀಟರ್ ಓಟದಲ್ಲಿ ಶ್ರೀಲಂಕಾದ ಯೊಡಸಿಂಘೆ ಚಾಮೊ (10.30ಸೆ) ಚಿನ್ನ ಗೆದ್ದರು. ಭಾರತದ ಪ್ರಣವ್ ಗುರವ್ (10.32) ಮತ್ತು ಹರ್ಷ್ ರಾವತ್ (10.42) ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.