ನವದೆಹಲಿ: ಮುಂದಿನ ತಿಂಗಳಲ್ಲಿ ನಡೆಯಲಿರುವ ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ಸ್ ವಿಶ್ವ ಚಾಂಪಿಯನ್ಷಿಪ್ಗೆ ಜಿಮ್ನಾಸ್ಟ್ಗಳನ್ನು ಆಯ್ಕೆ ಮಾಡಲು ಭಾರತ ಒಲಿಂಪಿಕ್ ಸಂಸ್ಥೆಗೆ (ಐಒಸಿ) ಅನುಮತಿ ನೀಡುವಂತೆ ಕೋರಿ ಕ್ರೀಡಾ ಸಚಿವಾಲಯವು ಅಂತರರಾಷ್ಟ್ರೀಯ ಜಿಮ್ನಾಸ್ಟಿಕ್ಸ್ ಫೆಡರೇಷನ್ಗೆ (ಎಫ್ಐಜಿ) ಪತ್ರ ಬರೆದಿದೆ.

ಅಕ್ಟೋಬರ್ 4ರಿಂದ 13ರ ವರೆಗೆ ಜರ್ಮನಿಯಲ್ಲಿ ವಿಶ್ವ ಚಾಂಪಿಯನ್ಷಿಪ್ ನಡೆಯಲಿದ್ದು ಭಾರತದ ಆರು ಮಂದಿಯನ್ನು ಆರಿಸಲು ಸೆಪ್ಟೆಂಬರ್ ಮೊದಲ ವಾರದಲ್ಲಿ ಭಾರತ ಜಿಮ್ನಾಸ್ಟಿಕ್ಸ್ ಫೆಡರೇಷನ್ (ಜಿಎಫ್ಐ) ಸಿದ್ಧತೆ ನಡೆಸಿತ್ತು. ಆದರೆ ಆಯ್ಕೆ ಪ್ರಕ್ರಿಯೆ ನಡೆಸಲು ಅವಕಾಶ ನೀಡಬೇಕು ಎಂದು ಕೋರಿ ಭಾರತ ಕ್ರೀಡಾ ಪ್ರಾಧಿಕಾರ (ಸಾಯ್) ಅಂತರರಾಷ್ಟ್ರೀಯ ಒಲಿಂಪಿಕ್ ಸಂಸ್ಥೆಯನ್ನು ಕೋರಿದ್ದರಿಂದ ಆಯ್ಕೆ ಪ್ರಕ್ರಿಯೆಯನ್ನು ಮುಂದೂಡಲಾಗಿತ್ತು.

ಕಳೆದ 11ರಂದು ಎಫ್ಐಜಿಗೆ ಪತ್ರ ಬರೆದಿರುವ ಕ್ರೀಡಾ ಸಚಿವಾಲಯ ‘ಜಿಎಫ್ಐ ಆಡಳಿತ ಹದಗೆಟ್ಟಿದ್ದು ಪಕ್ಷಪಾತಿತನ ಹೆಚ್ಚಾಗಿದೆ. ಮುಖ್ಯಸ್ಥ ಸುಧಾಕರ್ ಶೆಟ್ಟಿ ಜಿಮ್ನಾಸ್ಟ್ಗಳ ಆಯ್ಕೆಗೆ ಹಣ ಪಡೆಯುತ್ತಿದ್ದಾರೆ. ಆದ್ದರಿಂದ ಜಿಎಫ್ಐಯನ್ನು ಮಾನ್ಯ ಮಾಡಬಾರದು’ ಎಂದು ಕೋರಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.