ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಕಪ್‌ ಸ್ಕ್ವಾಷ್‌: ಸೆಮಿಯಲ್ಲಿ ಎಡವಿದ ಆತಿಥೇಯರು- ಭಾರತಕ್ಕೆ ಮಲೇಷ್ಯಾ ಆಘಾತ

Published 16 ಜೂನ್ 2023, 16:16 IST
Last Updated 16 ಜೂನ್ 2023, 16:16 IST
ಅಕ್ಷರ ಗಾತ್ರ

ಚೆನ್ನೈ: ಭಾರತ ತಂಡದವರು ವಿಶ್ವಕಪ್‌ ಸ್ಕ್ವಾಷ್‌ ಟೂರ್ನಿಯ ಸೆಮಿಫೈನಲ್‌ನಲ್ಲಿ ಮಲೇಷ್ಯಾ ತಂಡದ ಕೈಯಲ್ಲಿ ಆಘಾತ ಅನುಭವಿಸಿ ಹೊರಬಿದ್ದರು.

ಟೂರ್ನಿಯಲ್ಲಿ ಎರಡನೇ ಶ್ರೇಯಾಂಕ ಹೊಂದಿದ್ದ ಭಾರತ, ಶುಕ್ರವಾರ ನಡೆದ ಹಣಾಹಣಿಯಲ್ಲಿ ನಾಲ್ಕನೇ ಶ್ರೇಯಾಂಕದ ಎದುರಾಳಿಗಳಿಗೆ 0–3 ರಲ್ಲಿ ಮಣಿಯಿತು.

ಶನಿವಾರ ನಡೆಯಲಿರುವ ಫೈನಲ್‌ನಲ್ಲಿ ಮಲೇಷ್ಯಾ ತಂಡ ಹಾಲಿ ಚಾಂಪಿಯನ್‌ ಈಜಿಪ್ಟ್‌ ತಂಡವನ್ನು ಎದುರಿಸಲಿದೆ. ದಿನದ ಮತ್ತೊಂದು ನಾಲ್ಕರಘಟ್ಟದ ಪಂದ್ಯದಲ್ಲಿ ಈಜಿಪ್ಟ್‌ 4–0 ರಲ್ಲಿ ಜಪಾನ್‌ ವಿರುದ್ಧ ಗೆದ್ದಿತು.

ಸೆಮಿಫೈನಲ್‌ನ ಮೊದಲ ಪಂದ್ಯದಲ್ಲಿ ಸೆ ಹುಂಗ್‌ ಆಂಗ್ 7-4, 5-7, 1-7, 7-1, 7-6 ರಿಂದ ಅಭಯ್‌ ಸಿಂಗ್‌ ಅವರನ್ನು ಮಣಿಸಿ ಮಲೇಷ್ಯಾಕ್ಕೆ ಮುನ್ನಡೆ ತಂದಿತ್ತರು. ಈ ಜಿದ್ದಾಜಿದ್ದಿನ ಸೆಣಸಾಟ 37 ನಿಮಿಷ ನಡೆಯಿತು.

ಎರಡನೇ ಪಂದ್ಯದಲ್ಲಿ ಅನುಭವಿ ಆಟಗಾರ್ತಿ ಜೋಶ್ನಾ ಚಿಣ್ಣಪ್ಪ 3–7, 3–7, 7–5, 4–7 ರಿಂದ ಐರಾ ಅಜ್ಮಾನ್‌ ಎದುರು ಪರಾಭವಗೊಂಡರು. 18 ವರ್ಷದ ಐರಾ 21 ನಿಮಿಷಗಳಲ್ಲಿ ಗೆದ್ದರು. ಮೊದಲ ಎರಡು ಗೇಮ್‌ಗಳಲ್ಲಿ ಸೋತ ಜೋಶ್ನಾ, ಮರುಹೋರಾಟ ನಡೆಸಿ ಮೂರನೇ ಗೇಮ್‌ ಗೆದ್ದರು. ಆದರೆ ನಾಲ್ಕನೇ ಗೇಮ್‌ನಲ್ಲಿ ಅವರು ಎದುರಾಳಿಯ ಚುರುಕಿನ ಆಟಕ್ಕೆ ಸಾಟಿಯಾಗಲು ವಿಫಲರಾದರು.

ಮೂರನೇ ಪಂದ್ಯದಲ್ಲಿ ವಿಶ್ವ ರ‍್ಯಾಂಕಿಂಗ್‌ನಲ್ಲಿ 134ನೇ ಸ್ಥಾನದಲ್ಲಿರುವ ಡರೆನ್ ಪ್ರಗಾಸಂ 7-5, 2-7, 7-6, 7-5 ರಿಂದ 19ನೇ ರ್‍ಯಾಂಕ್‌ನ ಆಟಗಾರ ಸೌರವ್‌ ಘೋಷಾಲ್‌ ಅವರಿಗೆ ಆಘಾತ ನೀಡಿದರಲ್ಲದೆ, ಮಲೇಷ್ಯಾ ತಂಡಕ್ಕೆ ಫೈನಲ್‌ನಲ್ಲಿ ಸ್ಥಾನ ದೊರಕಿಸಿಕೊಟ್ಟರು.

ಇನ್ನೊಂದು ಸೆಮಿಫೈನಲ್‌ನಲ್ಲಿ ಈಜಿಪ್ಟ್‌ ತಂಡಕ್ಕೆ ಸಾಟಿಯಾಗಲು ಜಪಾನ್‌ ವಿಫಲವಾಯಿತು. ಕರೀಂ ಎಲ್ ಹಮಾಮಿ, ಫೈರೋಜ್ ಅಬುಲ್‌ಖೈರ್‌, ಅಲಿ ಅಬೌ ಎಲೀನೆನ್ ಮತ್ತು ಕೆನ್ಜಿ ಐಮನ್‌ ಅವರು ಜಪಾನ್‌ನ ಎದುರಾಳಿಗಳನ್ನು ಪರಾಭವಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT