ಪ್ರಶಸ್ತಿಗಳು:
ಮೇರಿ ಕೋಮ್ ಅವರ ಸಾಧನೆಯನ್ನು ಅರಸಿ ಅನೇಕ ಪ್ರಶಸ್ತಿಗಳು ಬಂದಿವೆ. 2020ರಲ್ಲಿ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾದ ಪದ್ಮವಿಭೂಷಣ, 2013ರಲ್ಲಿ ಪದ್ಮಭೂಷಣ, 2009ರಲ್ಲಿ ಮೇಜರ್ ಧ್ಯಾನ ಚಂದ್ ಖೇಲ್ ರತ್ನ ಅವಾರ್ಡ್, 2006ರಲ್ಲಿ ಪದ್ಮಶ್ರೀ ಮತ್ತು 2003ರಲ್ಲಿ ಅರ್ಜನ್ ಅವಾರ್ಡ್ ಅವರಿಗೆ ಸಂದಿವೆ.