ಶುಕ್ರವಾರ, 22 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಸ್ಕೆಟ್‌ಬಾಲ್‌: ಮಂಗಳೂರು ತಂಡಕ್ಕೆ ಜಯ

Published 16 ಆಗಸ್ಟ್ 2023, 22:11 IST
Last Updated 16 ಆಗಸ್ಟ್ 2023, 22:11 IST
ಅಕ್ಷರ ಗಾತ್ರ

ಬೆಂಗಳೂರು: ಗಣೇಶ್‌ ಮತ್ತು ಪ್ರದ್ಯುಮ್ನ ಅವರ ಆಟದ ಬಲದಿಂದ ಮಂಗಳೂರು ಬಿ.ಸಿ ತಂಡವು ಪ್ರೊ.ಎನ್‌.ಸಿ. ಪರಪ್ಪ ಸ್ಮಾರಕ ಎವರ್ ರೋಲಿಂಗ್ ಟ್ರೋಫಿಯ ರಾಜ್ಯ ‘ಎ’ ಡಿವಿಷನ್‌ ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌ ಪಂದ್ಯದಲ್ಲಿ 74–63ರಿಂದ ಡಿವೈಇಎಸ್‌ ಬೆಂಗಳೂರು ತಂಡವನ್ನು ಮಣಿಸಿತು.

ಕಂಠೀರವ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಮಂಗಳೂರು ತಂಡ 11 ಪಾಯಿಂಟ್‌ಗಳ ಅಂತರದಿಂದ ಜಯ ಸಾಧಿಸಿತು. ‌‌ಮಧ್ಯಂತರದ ವರೆಗೆ ಸಮಬಲದ (35–35) ಹೋರಾಟ ನಡೆಸಿದ ಮಂಗಳೂರು ತಂಡದವರು ನಂತರ ಪುಟಿದೆದ್ದರು. ತಂಡದ ಗಣೇಶ್‌ (18), ಪ್ರದ್ಯುಮ್ನ (17) ಮಿಂಚಿದರು. ಡಿವೈಇಎಸ್‌ ತಂಡದ ಮನೋಜ್‌ (43) ಗಮನ ಸೆಳೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT