ಹೊಸಪೇಟೆ: ತನಿಷ್ಕಾ ಕಪಿಲ್ ಕಾಲಭೈರವ ಅವರು ರಾಜ್ಯ ರ್‍ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯ 17 ಮತ್ತು 15 ವರ್ಷದೊಳಗಿನ ಬಾಲಕಿಯರ ವಿಭಾಗಗಳ ಪ್ರಶಸ್ತಿಯನ್ನು ಗೆದ್ದುಕೊಂಡರು.
ಇಲ್ಲಿನ ಟಿ.ಬಿ.ಡ್ಯಾಮ್ ರಿಕ್ರಿಯೇಷನ್ ಕ್ಲಬ್‌ನಲ್ಲಿ ವಿಜಯನಗರ ಜಿಲ್ಲಾ ಟೇಬಲ್ ಟೆನಿಸ್ ಸಂಸ್ಥೆ ಆಶ್ರಯದಲ್ಲಿ ಟೂರ್ನಿ ನಡೆಯುತ್ತಿದೆ. ತನಿಷ್ಕಾ ಅವರಿಗೆ ಇಲ್ಲಿ ಇದು ಮೂರನೇ ಪ್ರಶಸ್ತಿಯಾಗಿದೆ. ಶುಕ್ರವಾರ 13 ವರ್ಷದೊಳಗಿನ ವಿಭಾಗದಲ್ಲೂ ಚಾಂಪಿಯನ್ ಆಗಿದ್ದರು.
ಶನಿವಾರ ನಡೆದ 17 ವರ್ಷದೊಳಗಿನವರ ಫೈನಲ್‌ನಲ್ಲಿ ತನಿಷ್ಕಾ 11-9, 11-8, 5-11, 11-4ರಿಂದ ಹಿಮಾಂಶಿ ಚೌಧರಿ ಅವರನ್ನು ಮಣಿಸಿದರು. ಇದಕ್ಕೂ ಮೊದಲು ಸೆಮಿಫೈನಲ್‌ನಲ್ಲಿ ತನಿಷ್ಕಾ 11-2 , 16-14, 11-5ರಿಂದ ಪ್ರಣವಿ ಅವರನ್ನು; ಹಿಮಾಂಶಿ 11-7, 11-7, 11-4ರಿಂದ ಪ್ರೇಕ್ಷಾ ತಿಲಾವತ್ ಅವರನ್ನು ಸೋಲಿಸಿದ್ದರು.
15 ವರ್ಷದೊಳಗಿವನರ ಫೈನಲ್‌ನಲ್ಲಿ ತನಿಷ್ಕಾ 11-8, 2-11, 7-11, 11-2, 11-9ರಿಂದ ಹಿಯಾ ಸಿಂಗ್ ಅವರನ್ನು ಮಣಿಸಿದರು. ಸೆಮಿಫೈನಲ್‌ನಲ್ಲಿ ತನಿಷ್ಕಾ 11-9, 11-9, 11-9ರಿಂದ ಶಿವಾನಿ ಮಹೇಂದ್ರನ್ ಅವರನ್ನು; ಹಿಯಾ 11-2, 11-6, 11-4ರಿಂದ ಕೈರಾ ಬಾಳಿಗಾ ಅವರನ್ನು ಅವರನ್ನು ಹಿಮ್ಮೆಟ್ಟಿಸಿದ್ದರು.
ಗೌರವ್‌ಗೆ ಪ್ರಶಸ್ತಿ: 17 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಬಿ.ಆರ್. ಗೌರವ್ 8-11, 12-10, 11-9, 13-15, 11-9ರಿಂದ ಅರ್ಣವ್ ಎನ್. ಅವರನ್ನು ಮಣಿಸಿ ಪ್ರಶಸ್ತಿಯನ್ನು ಗೆದ್ದುಕೊಂಡರು.