ಬೆಳಗಾವಿ: ಅಭಿನವ್ ಕೆ ಮೂರ್ತಿ ಮತ್ತು ದೇಶ್ನಾ ಎಂ ವಂಶಿಕಾ ಅವರು ಬೆಳಗಾವಿ ಕ್ಲಬ್‌ನಲ್ಲಿ ನಡೆಯುತ್ತಿರುವ ಐದನೇ ರಾಜ್ಯ ರ‍್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ 19 ವರ್ಷದೊಳಗಿನವರ ಬಾಲಕ ಮತ್ತು ಬಾಲಕಿಯರ ವಿಭಾಗದ ಪ್ರಶಸ್ತಿ ಜಯಿಸಿದರು.
ಬೆಳಗಾವಿ ಜಿಲ್ಲಾ ಟೇಬಲ್ ಟೆನಿಸ್ ಸಂಸ್ಥೆ (ಬಿಡಿಟಿಟಿಎ) ಆಶ್ರಯದಲ್ಲಿ ಆಯೋಜನೆಯಾಗಿರುವ ಟೂರ್ನಿಯ ಬಾಲಕರ ವಿಭಾಗದ ಫೈನಲ್‌ನಲ್ಲಿ ಅಭಿನವ್ 7-11, 11-9, 11-9, 11-5, 11 - 8ರಿಂದ ವಿ.ಜಿ. ವಿಭಾಸ್ ವಿರುದ್ಧ ಜಯಿಸಿದರು.