ಮೆಲ್ಬರ್ನ್: ಇಲ್ಲಿ ನಡೆಯುತ್ತಿರುವ ವಿಶ್ವ ಟೇಬಲ್ ಟೆನಿಸ್ ಓಪನ್ ಟೂರ್ನಿಯಲ್ಲಿ ಭಾರತದ ಆಟಗಾರರು ನಿರಾಸೆ ಅನುಭವಿಸಿದ್ದಾರೆ.

ಪುರುಷರ ಸಿಂಗಲ್ಸ್ ವಿಭಾಗದ ಮೊದಲ ಪಂದ್ಯದಲ್ಲಿ ಜ್ಞಾನಶೇಖರನ್ ಸತ್ಯನ್ ಅವರು ಗೆಲುವು ಅನುಭವಿಸಿದರು. ಭಾರತದ ಆಟಗಾರ 11–8, 7–11, 11–9, 7–11, 5–11, 11–6, 11–8ರಿಂದ ಜಪಾನ್‌ನ ಮಸಾಕಿ ಯೋಶಿದಾ ಅವರನ್ನು ಮಣಿಸಿದರು. ಆದರೆ, ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಜ್ಞಾನಶೇಖರನ್, 3–11, 12–14, 10–12, 5–11ರಿಂದ ಚೀನಾದ ಯು ಜೌ ವಿರುದ್ಧ ಸೋತರು.

ಇನ್ನೊಂದು ಪಂದ್ಯದಲ್ಲಿ ಅಚಂತಾ ಶರತ್ ಕಮಲ್, 6–11, 11–7, 11–7, 11–8, 7–11, 11–4ರಿಂದ ಫ್ರಾನ್ಸ್‌ನ ಸಿಮನ್ ಗೌಜಿ ಎದುರು ಗೆದ್ದರು. ಆದರೆ, ಕ್ವಾರ್ಟರ್ ಫೈನಲ್ ಹಣಾಹಣಿಯಲ್ಲಿ ಅವರು 14–21, 11–9, 9–11, 3–11, 11–7, 7–11, 8–11ರಿಂದ ಜರ್ಮನಿಯ ಪ್ಯಾಟ್ರಿಕ್ ಫ್ರಂಜಿಸ್ಕಾ ಅವರ ಸವಾಲು ಮೀರಲು ವಿಫಲವಾದರು.

ಪುರುಷರ ಡಬಲ್ಸ್ ವಿಭಾಗದ ಹದಿನಾರರ ಘಟ್ಟದ ಪಂದ್ಯದಲ್ಲಿ ಅಚಂತಾ ಶರತ್ ಕಮಲ್ ಹಾಗೂ ಜ್ಞಾನಶೇಖರನ್ ಸತ್ಯನ್ ಜೋಡಿಯು 7–11, 14–16, 4–11ರಿಂದ ದಕ್ಷಿಣ ಕೊರಿಯಾದ ಯಂಗ್ಸುಕ್ ಜಿಯೊಂಗ್ ಹಾಗೂ ಸಂಗ್ಸು ಲೀ ಜೋಡಿಯ ಎದುರು ಸೋತಿತು.

ಮಹಿಳೆಯರ ಡಬಲ್ಸ್ ವಿಭಾಗದ ಹದಿನಾರರ ಘಟ್ಟದ ಹಣಾಹಣಿಯಲ್ಲಿ ಮಣಿಕಾ ದಾಸ್ ಹಾಗೂ ಮೌಮಾ ದಾಸ್ ಜೋಡಿಯು 7–11, 6–11, 10–12ರಿಂದ ಸಿಂಗಪುರದ ಯೀ ಲೆನ್ ಹಾಗೂ ಜಿಯಾನ್ ಲಿಂಗ್ ಜೋಡಿಯ ಎದುರು ಪರಾಭವಗೊಂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.