ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿನಿಂದ ಟೇಕ್‌ ಸೊಲ್ಯೂಷನ್ಸ್‌ ಮಾಸ್ಟರ್ಸ್‌

Last Updated 8 ಆಗಸ್ಟ್ 2018, 18:24 IST
ಅಕ್ಷರ ಗಾತ್ರ

ಬೆಂಗಳೂರು: ‘ತವರಿನ ಅಂಗಳದಲ್ಲಿ ಆಡುವಾಗ ಸಹಜವಾಗಿಯೇ ವಿಶ್ವಾಸ ಹೆಚ್ಚಿರುತ್ತದೆ. ಹಾಗಾಗಿ ಹಿಂದಿನ ಬಾರಿಗಿಂತ ಈ ಸಲ ಉತ್ತಮ ಆಟವಾಡುವ ನಿರೀಕ್ಷೆ ಇದೆ’ ಎಂದು ಸ್ಥಳೀಯ ಗಾಲ್ಫರ್‌ ಖಾಲಿನ್‌ ಜೋಷಿ ಹೇಳಿದರು.

ಬುಧವಾರ ಇಲ್ಲಿನ ಕರ್ನಾಟಕ ಗಾಲ್ಫ್‌ ಅಸೊಸಿಯೇಷನ್‌ (ಕೆಜಿಎ) ಕೇಂದ್ರದಲ್ಲಿ ನಡೆದ ಎರಡನೇ ಆವೃತ್ತಿಯ ಟೇಕ್‌ ಸೊಲ್ಯೂಷನ್ಸ್‌ ಮಾಸ್ಟರ್ಸ್‌ ಗಾಲ್ಫ್‌ ಟೂರ್ನಿಯ ಟ್ರೋಫಿ ಅನಾವರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅವರು ಹಿಂದಿನ ಆವೃತ್ತಿಯಲ್ಲಿ ರನ್ನರ್‌ ಅಪ್‌ ಆಗಿದ್ದರು.

ಏಷ್ಯನ್‌ ಟೂರ್‌ ಹಾಗೂ ಪ್ರೊಫೆಷನಲ್‌ ಗಾಲ್ಫ್‌ ಟೂರ್ ಆಫ್‌ ಇಂಡಿಯಾ (ಪಿಜಿಟಿಐ) ಸಹಯೋಗದಲ್ಲಿ ನಡೆಯುತ್ತಿರುವ ಈ ಟೂರ್ನಿಯು ಇಂದಿನಿಂದ ಆರಂಭವಾಗಲಿದೆ. ದೇಶ–ವಿದೇಶಗಳ ಒಟ್ಟು 156 ಗಾಲ್ಫರ್‌ಗಳು ಪ್ರಶಸ್ತಿಗಾಗಿ ಸೆಣಸಲಿದ್ದಾರೆ. ಟೂರ್ನಿಯ ಒಟ್ಟು ಪ್ರಶಸ್ತಿ ಮೊತ್ತ ₹2.40 ಕೋಟಿ (3.5 ಲಕ್ಷ ಅಮರಿಕನ್‌ ಡಾಲರ್‌).ಜಿಂಬಾಬ್ವೆಯ ಸ್ಕಾಟ್‌ ವಿನ್ಸೆಂಟ್‌ ಅವರು ಅಗ್ರಶ್ರೇಯಾಂಕ ಗಳಿಸಿದ್ದಾರೆ.

‘ಈ ಹಿಂದೆ ಇಲ್ಲಿ ನಡೆದಿದ್ದ ಅಮೆಚೂರ್‌ ಟೂರ್ನಿಯಲ್ಲಿ ನಾನು ವೈಯಕ್ತಿಕ ಶ್ರೇಷ್ಠ ಸಾಧನೆ ಮಾಡಿದ್ದೆ. ಜೊತೆಗೆ, ಹಿಂದಿನ ಬಾರಿ ರನ್ನರ ಅಪ್‌ ಆಗಿದ್ದ ಕಾರಣ ನನ್ನ ಮೇಲೆ ನಿರೀಕ್ಷೆಯ ಭಾರ ಹೆಚ್ಚಿದೆ’ ಎಂದು ಖಾಲಿನ್‌ ಹೇಳಿದರು.

ಅವರೊಂದಿಗೆ ಮತ್ತೊಬ್ಬ ಸ್ಥಳೀಯ ಆಟಗಾರ ಎಸ್‌. ಚಿಕ್ಕರಂಗಪ್ಪ ಅವರು ಟೂರ್ನಿಯಲ್ಲಿ ಸ್ಪರ್ಧಿಸಲಿದ್ದಾರೆ. ಆರು ಬಾರಿ ಏಷ್ಯನ್‌ ಟೂರ್‌ ಚಾಂಪಿಯನ್‌ ಆಗಿದ್ದ ಎಸ್‌ಎಸ್‌ಪಿ ಚೌರಾಸಿಯಾ ಇದರ ಪ್ರಮುಖ ಆಕರ್ಷಣೆ. ಭಾರತದ ಇನ್ನಿತರ ಆಟಗಾರರಾದ ಚಿರಾಗ್‌ ಕುಮಾರ್‌, ಜೀವ್‌ ಮಿಲ್ಖಾ ಸಿಂಗ್‌, ರೇಹನ್‌ ಥಾಮಸ್‌, ಆದಿಲ್‌ ಬೇಡಿ ಹಾಗೂ ಹರಿಮೋಹನ್‌ ಸಿಂಗ್‌ ಅವರೂ ಇದರಲ್ಲಿ ಪಾಲ್ಗೊಳ್ಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT