ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಸಿಎಸ್‌ ಟೆನ್‌ ಕೆ ರನ್: ಸಂಚಾರ ದಟ್ಟಣೆ ಸವಾಲು ಎದುರಿಸಲು ಸಿದ್ಧ

Published 17 ಮೇ 2023, 19:57 IST
Last Updated 17 ಮೇ 2023, 19:57 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ನಡೆಯಲಿರುವ ವಿಶ್ವ ಟೆನ್‌ ಕೆ ರಸ್ತೆ ಓಟದ ಸ್ಪರ್ಧೆಗಳಿಗೆ ನೂತನ ಮಾರ್ಗನಕ್ಷೆ ಹಾಗೂ ವೇಳಾಪಟ್ಟಿಯನ್ನು ಸಿದ್ಧಪಡಿಸಲಾಗಿದೆ.

ಸಂಚಾರ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ಈ ವೇಳಾಪಟ್ಟಿ ರೂಪಿಸಲಾಗಿದೆ ಎಂದು ರೇಸ್ ನಿರ್ದೇಶಕ ಹ್ಯುಗ್ ಜೋನಸ್ ತಿಳಿಸಿದ್ದಾರೆ.

‘ಓಟದಿಂದಾಗಿ ವಾಹನ ಸಂಚಾರಕ್ಕೆ ಅಡಚಣೆಯಾಗಿ ದಟ್ಟಣೆಯಾಗದಂತೆ ಎಚ್ಚರಿಕೆ ವಹಿಸಲಾಗಿದೆ. ಅದರಿಂದಾಗಿ ದಟ್ಟಣೆ ಕಡಿಮೆ ಇರುವ ಸಮಯದಲ್ಲಿ ಅಥ್ಲೀಟ್‌ಗಳಿಗೆ ಅನುಕೂಲವಾಗುವಂತೆ ವೇಳಾಪಟ್ಟಿಯನ್ನು ಸಿದ್ಧಪಡಿಸಲಾಗಿದೆ‘ ಎಂದರು.

‘ಅಥ್ಲೀಟ್‌ಗಳ ಓಟ ಮತ್ತು ವಾಹನ ಸಂಚಾರಗಳೆರಡಕ್ಕೂ ಯಾವುದೇ ಅಡಚಣೆಯಾಗದಂತೆ ಮಾರ್ಗವನ್ನು ಅಚ್ಚುಕಟ್ಟಾಗಿ ಗುರುತಿಸಲಾಗಿದೆ. 15ನೇ ಬಾರಿ ಈ ಓಟವು ಸಂಘಟನೆಯಾಗುತ್ತಿದೆ. ಅದರಿಂದಾಗಿ ಈ ಹಿಂದಿನ ಓಟಗಳಲ್ಲಿ ಆಗಿರುವ ಅನುಭವದ ಆಧಾರದಲ್ಲಿ ವೇಳಾಪಟ್ಟಿ ಹಾಗೂ ಮಾರ್ಗ ರೂಪಿಸಲಾಗಿದೆ‘ ಎಂದರು.

ಮೇ 21ರಂದು ಕಂಠೀರವ ಕ್ರೀಡಾಂಗಣದಲ್ಲಿ ಸ್ಪರ್ಧೆಯು ಆರಂಭಗೊಳ್ಳುವುದು. ನಗರದ ಪ್ರಮುಖ ರಸ್ತೆಗಳ ಮೂಲಕ ಓಟಗಾರರು ಸಾಗುವರು. 27 ಸಾವಿರ ಓಟಗಾರರು ಸ್ಪರ್ಧಿಸಲಿದ್ದಾರೆ.

ರೊನೆಕ್ಸ್ ಸ್ಪರ್ಧೆ ಇಲ್ಲ: ಉದ್ದೀಪನ ಮದ್ದು ಸೇವನೆ ನಿಯಮ ಉಲ್ಲಂಘನೆಗಾಗಿ ತಾತ್ಕಾಲಿಕವಾಗಿ ಅಮಾನತುಗೊಂಡಿರುವ ರೊನೆಕ್ಸ್ ಕಿಪ್ರುಟೊ ಅವರು ಇದೇ ಭಾನುವಾರ ನಗರದಲ್ಲಿ ನಡೆಯಲಿರುವ ಟಿಸಿಎಸ್ ಟೆನ್‌ ಕೆ ಓಟದಲ್ಲಿ ಭಾಗವಹಿಸುವುದಿಲ್ಲ ಎಂದು ಸಂಘಟಕರು ಖಚಿತಪಡಿಸಿದ್ದಾರೆ.

ಅವರು ಈ ಓಟದಲ್ಲಿ ಪ್ರಮುಖ ಆಕರ್ಷಣೆಯಾಗಿದ್ದರು. ಆದರೆ ಬುಧವಾರ ಅವರ ಅಮಾನತು ಕುರಿತು ವರದಿಯಾಗಿದೆ.

ರೇಸ್ ವಿಭಾಗಗಳು

ವಿಭಾಗ;ಆರಂಭ ಸಮಯ(ಬೆಳಿಗ್ಗೆ)

ಓಪನ್ 10ಕೆ: 5.30

ವಿಶ್ವ 10ಕೆ ಮಹಿಳೆಯರು; 7.10

ವಿಶ್ವ 10ಕೆ ಪುರುಷರು; 8

ಅಂಗವಿಕಲರು, ಚಾಂಪಿಯನ್ಸ್‌ ಹಾಗೂ ಹಿರಿಯ ನಾಗರಿಕರು; 8.05

ಮಜಾ ರನ್; 8.50

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT