ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಷ್ಟ್ರೀಯ ಥ್ರೋಗಳ ಸ್ಪರ್ಧೆ: ಮೂರು ಕೂಟ ದಾಖಲೆ

ಕರ್ನಾಟಕದ ಇಬ್ಬರಿಗೆ ಬೆಳ್ಳಿ
Published 22 ಮಾರ್ಚ್ 2024, 16:25 IST
Last Updated 22 ಮಾರ್ಚ್ 2024, 16:25 IST
ಅಕ್ಷರ ಗಾತ್ರ

ಪಟಿಯಾಲಾ: ಮೂರು ಕೂಟ ದಾಖಲೆಗಳು, ಶುಕ್ರವಾರ ಇಲ್ಲಿ ನಡೆದ ಇಂಡಿಯನ್ ಓಪನ್ ಥ್ರೋಗಳ ಸ್ಪರ್ಧೆಯಲ್ಲಿ ಮೂಡಿಬಂದವು.

ಮಹಾರಾಷ್ಟ್ರದ ಅಭಾ ಖತುವಾ ಮಹಿಳೆಯರ ವಿಭಾಗದ ಶಾಟ್‌ಪಟ್‌ ಚಿನ್ನ ಗೆಲ್ಲುವ ಹಾದಿಯಲ್ಲಿ 17.56 ಮೀ. ಎಸೆತ ದಾಖಲಿಸಿ ತಮ್ಮದೇ ಹಳೆಯ ದಾಖಲೆಯನ್ನು (17.09 ಮೀ.) ಸುಧಾರಿಸಿದರು. ಈ ಸ್ಪರ್ಧೆಯಲ್ಲಿ ರಾಷ್ಟ್ರೀಯ ದಾಖಲೆ (2022ರಲ್ಲಿ 18.06 ಮೀ) ಮನ್‌ಪ್ರೀತ್‌ ಕೌರ್‌ ಹೆಸರಿನಲ್ಲಿದೆ.

ಹರಿಯಾಣದ ನಿರ್ಭಯ್ ಸಿಂಗ್, ಪುರುಷರ ಡಿಸ್ಕಸ್‌ ಥ್ರೋ ಸ್ಪರ್ಧೆಯಲ್ಲಿ 54.89 ಮೀ. ದಾಖಲಿಸುವ ಮೂಲಕ, 2022ರಲ್ಲಿ ಅರ್ಜುನ್‌ ಹೆಸರಿನಲ್ಲಿದ್ದ 53.28 ಮೀ. ದಾಖಲೆಯನ್ನು ಮುರಿದರು.

ಸ್ಥಳೀಯ ಅಥ್ಲೀಟ್‌ ದಮನೀತ್‌ ಸಿಂಗ್ ಹ್ಯಾಮರ್‌ ಥ್ರೋ ಸ್ವರ್ಣ ಗೆಲ್ಲುವ ಹಾದಿಯಲ್ಲಿ 65.82 ಮೀ ಎಸೆತ ದಾಖಲಿಸಿದರು. ಈ ಹಿಂದಿನ ದಾಖಲೆ ಮಹಿಪಾಲ್ ಸಿಂಗ್ ಯಾದವ್‌ (2022ರಲ್ಲಿ 54.80 ಮೀ.) ಹೆಸರಿನಲ್ಲಿತ್ತು. ಪಂಜಾಬ್‌ನ ಗುರುದೇವ್ ಸಿಂಗ್‌ ಎರಡನೇ (61.87) ಮತ್ತು ಉತ್ತರ ಪ್ರದೇಶದ ಮುಕುಲ್‌ (61.61 ಮೀ.) ಮೂರನೇ ಸ್ಥಾನ ಪಡೆದರು.

ಕರಿಷ್ಮಾಗೆ ಬೆಳ್ಳಿ:

ಮಹಿಳೆಯರ ಜಾವೆಲಿನ್ ಥ್ರೊ ಸ್ಪರ್ಧೆಯಲ್ಲಿ ಹರಿಯಾಣದ ಜ್ಯೋತಿ (51.55 ಮೀ.) ಸ್ವರ್ಣ ಗೆದ್ದರು. ಕರ್ನಾಟಕದ ಕರಿಷ್ಮಾ ಎಸ್‌.ಸನಿಲ್‌ (51.02 ಮೀ.) ಬೆಳ್ಳಿ ಗೆದ್ದರು.

20 ವರ್ಷದೊಳಗಿನವರ ವಿಭಾಗದ ಜಾವೆಲಿನ್‌ನಲ್ಲಿ ಕರ್ನಾಟಕದ ರಮ್ಯಶ್ರೀ ಜೈನ್ (46.37 ಮೀ.) ಬೆಳ್ಳಿ ಗೆದ್ದರು. ಹರಿಯಾಣದ ದೀಪಿಕಾ (49.75 ಮೀ.) ಚಿನ್ನ ಗೆದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT