ಹೊಸಪೇಟೆ (ವಿಜಯನಗರ): ಹಂಪಿ ಉತ್ಸವದ ಅಂಗವಾಗಿ ಹಂಪಿಯ ಮಾತಂಗ ಪರ್ವತ ಮೈದಾನದಲ್ಲಿ ಆಯೋಜಿಸಿದ ಫಲಪುಷ್ಪ ಪ್ರದರ್ಶನ ಜನಮನ ಸೂರೆಗೊಳ್ಳುತ್ತಿದೆ. ಪುಷ್ಪಲೋಕದಲ್ಲಿ ಅರಳಿದ ಬೃಹತ್ ಬಡವಿ ಶಿವಲಿಂಗ, ಸಾಸಿವೆಕಾಳು ಗಣಪತಿ ಪ್ರಮುಖ ಆಕರ್ಷಣೆ ಎನಿಸಿವೆ.

ಬಿಳಿ, ಕೆಂಪು, ನೇರಳೆ, ಹಳದಿ ಬಣ್ಣದ ಸೇವಂತಿ, ಗುಲಾಬಿ, ಚಂಡು ಹೂಗಳಿಂದ ಬಡವಿ ಶಿವಲಿಂಗ ಹಾಗೂ ಸಾಸಿವೆ ಕಾಳು ಗಣಪ ನಿರ್ಮಿಸಲಾಗಿದೆ. ಬಡವಿ ಶಿವಲಿಂಗ ನಿರ್ಮಾಣಕ್ಕೆ 10 ಸಾವಿರ ಹಾಗೂ ಸಾಸಿವೆ ಕಾಳು ಗಣಪತಿ ನಿರ್ಮಾಣಕ್ಕೆ 5 ಸಾವಿರ ಹೂಗಳು ಬಳಕೆಯಾಗಿವೆ. ಎರಡೂ ಕಲಾಕೃತಿಗಳು ಹೊಸಪೇಟೆ ಕಲಾವಿದ ಜಗದೀಶ್ ಕೈಚಳದಲ್ಲಿ ಮೂಡಿಬಂದಿದೆ.

ಇದರೊಂದಿಗೆ ವಿಜಯನಗರ ಸಾಮ್ರಾಜ್ಯದ ಸುವರ್ಣಯುಗ ನೆನಪಿಸುವ ಮುತ್ತು, ವಜ್ರ, ವೈಢೂರ್ಯ, ಸ್ವರ್ಣಗಳ ಮಾರಾಟ ರಾಜಬೀದಿ ನಾಡಿನ ಗತವೈಭವ ಸಾರುತ್ತಿವೆ. ಹೂಗಳಿಂದ ನಿರ್ಮಿತವಾದ ರಾಯರರಾಯ, ಯವನರಾಜ್ಯಪ್ರತಿಷ್ಠಾಪನಾಚಾರ್ಯ ಕೃಷ್ಣದೇವರಾಯರ ಪ್ರತಿಮೆ ಗಾಂಭೀರ್ಯ ಮೆಚ್ಚುವಂತಿದೆ. ಸಿರಿಧಾನ್ಯಗಳಲ್ಲಿ ಮೂಡಿಬಂದ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ವಿನೀತಳಾಗಿ ಕೈಮುಗಿದು ನಿಂತ ಪ್ರತಿಮೆ, ಪರಿಸರ ರಕ್ಷಣೆ ನೋಡುಗರನ್ನು ಸೆಳೆಯುತ್ತಿದೆ. ಕುಬ್ಜಮರಗಳ ಬೆಳಸುವ ಬೋನ್ಸಾಯ್ ಕಲೆ, ಜಿಲ್ಲೆಯ ತೋಟಗಾರಿಕೆ ಬೆಳೆಗಳ ಪರಿಚಯ ಪಲಫುಷ್ಪ ಪ್ರದರ್ಶನ ದೊರೆಯುತ್ತಿದೆ.

ಕಲ್ಲಂಗಡಿ ಹಣ್ಣಿನಲ್ಲಿ ಕೆತ್ತಿರುವ ಬುದ್ಧ ಬಸವ, ಅಂಬೇಡ್ಕರ್, ಶ್ರೀ ಕೃಷ್ಣ ದೇವರಾಯ, ನಂದಿ, ಅಂಜನೇಯ ಈಶ್ವರ ಹಾಗೂ ಹಗಲ ಕಾಯಿಯಲ್ಲಿ ಸಿದ್ದಪಡಿರುವ ನವಿಗಳು ಆಕರ್ಷಣಿಯವಾಗಿದ್ದರೆ

ಮತ್ಸ್ಯ ಮೇಳ: ಅಪರೂಪದ ಮೀನುಗಳ ಪ್ರದರ್ಶನ ಮೇಳದಲ್ಲಿ ಬಣ್ಣದ ಬಣ್ಣದ ಅಲಂಕಾರಿಕ ಮೀನುಗಳನ್ನು ಒಳಗೊಂಡ 40ಕ್ಕೂ ಹೆಚ್ಚು ಪ್ರದರ್ಶನದಲ್ಲಿರಿಸಲಾಗಿತ್ತು. ಮಾದರಿ ತುಂಗಾಭದ್ರ ಡ್ಯಾಂ, ಮತ್ಸ್ಯೆ ಕನ್ಯ, ಹಾಯಿ ದೋಣಿ, ಮೀನು ಸಾಕಾಣಿಕೆ ತೊಟ್ಟಿ ನಿರ್ಮಾಣದೊಂದಿಗೆ ಇಲಾಖೆಯ ವಿವಿಧ ಯೋಜನೆಗಳ ಹಾಗೂ ಮೀನುಗಾರಿಕೆ ಕುರಿತು ಮಾಹಿತಿ ನೀಡುವ ಫಲಕಗಳನ್ನು ಅಳವಡಿಸಲಾಗಿತ್ತು.

ಕೃತಕ ಅರಣ್ಯ: ಆರಣ್ಯ ಇಲಾಖೆಯ ಪ್ರದರ್ಶನ ಮಳಿಗೆಯಲ್ಲಿ ದರೋಜಿ ಹಾಗೂ ಗುಡೇಕೋಟೆ ಕರಡಿ ದಾಮ, ಅಂಕ ಪಕ್ಷಿ ದಾಮ ಪ್ರತಿಕೃತಿಗಳೊಂದಿಗೆ ಗೀಜಗದ ಗೂಡು ಹಾಗೂ ವಿವಿಧ ಪಕ್ಷಿಗಳ ಗೂಡು, ಅದರಲ್ಲಿ ಮೊಟ್ಟೆ ಹುಲಿ, ಕರಡಿ, ನರಿ ಸೇರಿದಂತೆ ವಿವಿಧ ಬಗೆಯ ಪ್ರಾಣಿಗಳ ಪ್ರತಿ ಕೃತಿಗಳು ನೋಡುಗರನ್ನು ಸೆಳೆಯುತ್ತಿದ್ದರೆ, ಪ್ರಾಣಿ ಪಕ್ಷಿಗಳ ದ್ವನಿಗಳು ಎಲ್ಲೆಡೆ ಕೇಳಿ ಬರುವಂತೆ ಮಾಡಲಾಗಿತ್ತು.

ರೋಣದ ಮಲ್ಲಜ್ಜಯ್ಯ ಗುರುಬಸಪ್ಪಜ್ಜ ಅವರು ಕೂರಿಗೆ, ಕುಂಟೆ, ಬಾರಿಕೋಲು, ಕುಡಗಳು, ಚಲಕ, ಕಡಗೋಲು, ಮುರಗುಂಟೆ, ಅಳತೆ ಶೇರು, ಕಿರುಕುಂಟೆ, ಹೆಡೆಕುಂಟೆ, ಅಕ್ಕಡಿ ಶೆಡ್ಡಿ, ತಬ್ಬಿ ಮಣೆ, ಕೂರಿಗೆ ಬಟ್ಟಲು ಹೀಗೆ ಹಲವು ದೇಶಿ ಕೃಷಿ ಉಪಕರಣಗಳನ್ನು ಇಲ್ಲಿ ಜೋಡಿಸಸಿದ್ದು ಮರೆತು ಹೋದ ಕೃಷಿ ಉಪಕರಣಗಳನ್ನು ನೋಡಲು ಸಿಗುವಂತೆ ಮಾಡಿದ್ದು, 500ಕ್ಕೂ ಅಧಿಕ ಕೃಷಿ ಉಪಕರಣ, ಮಕ್ಕಳ ಆಟಿಕೆ ಸಾಮಾನು, ಮನುಷ್ಯರ ಗುಣ ಓದಿಸುವ ಕಟ್ಟಿಗೆಯಿಂದ ತಯಾರಿಸಿದ ಸಂದೂಕ ಪೆಟ್ಟಿಗೆ ಆಕರ್ಷಿಸುತ್ತಿವೆ.

ವಸ್ತು ಪ್ರದರ್ಶನ ಉದ್ಘಾಟಿಸಿದ ಜಿಲ್ಲಾಧಿಕಾರಿ: ಹಂಪಿ ಉಸ್ತವದ ಅಂಗವಾಗಿ ಮಾತಂಗ ವರ್ವತ ಮೈದಾನದಲ್ಲಿ ಹಂಮ್ಮಿಕೊಂಡಿರುವ ಫಲಪುಷ್ಫ ಪ್ರದರ್ಶನಕ್ಕೆ ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ ಚಾಲನೆ ನೀಡಿದರು. ನಂತರ ಅವರು ವಿವಿಧ ಮಳಿಗೆಗಳಿಗೆ ಭೇಟಿ ನೀಡಿ ವಿಕ್ಷಣೆ ಮಾಡಿದರು. ಈ ವೇಳೆ ಕೃಷಿ ಇಲಾಖೆಯ ಪ್ರದರ್ಶನದಲ್ಲಿ ಹಾಡು ಹೇಳುತ್ತ ಬೀಸುವ ಕಲ್ಲಿನಲ್ಲಿ ಬೀಸುತ್ತಿದ್ದ ಮಹಿಳೆರೊಂದಿಗೆ ಸೇರಿಕೊಂಡು ತಾವು ಬೀಸುವ ಕಲ್ಲಿನ ಗೂಟ ಹಿಡಿದು ಕಲ್ಲನ್ನು ತಿರುಗಿಸಿದರು. ನಂತರ ಸಿರಿ ಧಾನ್ಯದ ರಾಶಿಗೆ ಪೂಜೆ ಸಲ್ಲಿಸಿದರು.

ಕೃಷಿ ಮಹಿಳೆಯರ ಬದುಕು

ಕೃಷಿ ಇಲಾಖೆಯ ಪ್ರದರ್ಶನಕ್ಕೆ ಪ್ರವೇಶ ನೀಡಿದರೆ ಸಿರಿ ಧಾನ್ಯಗಳ ರಾಶಿ ಪಕದಲ್ಲಿಯೇ ಬೀಸುತ್ತ ಕುಳಿತಿರುವ ಮಹಿಳೆಯರು ಎತ್ತಿನ ಗಾಡಿ ಸಿರಿ ಧಾನ್ಯಗಳನ್ನು ಬಳಿಸಿ ನಿರ್ಮಿಸಿರುವ ಗಣಪತಿ ನಂದಿ ಆಕರ್ಷಣೀಯವಾಗಿದ್ದವೆ. ಇವುಗಳ ಜೊತೆಗೆ ರೇಷ್ಮೇ ಇಲಾಖೆಯ ಹುಳು ಸಾಕಾಣಿಗೆ ರೇಷ್ಮ ಗೂಡಿನಿಂದ ತಯಾರಿಸಿದ ಹೂವುಗಳು ಅಲಂಕಾರಿಕ ವಸ್ತುಗಳು ಉತ್ತಮವಾಗಿವೆ. ದೇಶಿ ಪಾರಂಪರಿಕ ಕೃಷಿ ಉತ್ಪನ್ನಗಳು ರೈತರ ಜೀವನ ತೆರೆದಿಡುತ್ತಿವೆ.

ಕುಲಾಂತರಿ ಹಾಗೂ ವಿದೇಶಿ ಬೀಜಗಳ ನಡುವೆಯೂ ಜವಾರಿ ಹಾಗೂ ನಾಟಿ ಬೀಜ ಸಂಪತ್ತು ಜೀವ ಹಾಗೂ ಸಸ್ಯ ವೈವಿಧ್ಯತೆ ಕಾಪಾಡುವ ಮಹತ್ವ ಸಾರುತ್ತಿವೆ. ಸಿರಿಧಾನ್ಯಗಳಲ್ಲಿ ಮೂಡಿಬಂದ ಗಣಪತಿ ಕೆ.ಎಸ್.ಡಿ.ಎ ಲಾಂಛನ ಹಾಗೂ ನಂದಿ ಜನರನ್ನು ಸಳೆಯುತ್ತಿವೆ. ಇದರೊಂದಿಗೆ ಕೃಷಿಯಲ್ಲಿ ಡ್ರೋನ್ ಬಳಕೆ ಟ್ರ್ಯಾಕ್ಟರ್ ಪಶುಪಾಲನೆಯೊಂದಿಗೆ ಸಮಗ್ರ ಕೃಷಿ ಪದ್ಧತಿ ಬಗ್ಗೆ ತಿಳಿಸುವ ಕೃಷಿ ಬ್ರಹ್ಮಾಂಡ ರೇಷ್ಮೆ ಕೃಷಿ ಸಿರಿಧಾನ್ಯಗಳ ಖಾದ್ಯಗಳ ಹಾಗೂ ಸಾವಯವ ಕೃಷಿ ಉತ್ಪನ್ನ ಮಾರಾಟ ಈ ಬಾರಿಯ ಕೃಷಿ ಪ್ರದರ್ಶನದಲ್ಲಿ ಪ್ರಮುಖವಾಗಿ ಗಮನ ಸೆಳೆಯುತ್ತಿವೆ. ಆರೋಗ್ಯ ಇಲಾಖೆ ಶಿಕ್ಷಣ ಇಲಾಖೆಯಿಂದ ವಸ್ತು ಪ್ರದರ್ಶನದ ಮೂಲಕ ಜಾಗೃತಿ ಮೂಡಿಸುವ ಕೆಲಸ ಕೂಡ ಇಲ್ಲಿ ನಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.