ನವದೆಹಲಿ: ಒಲಿಂಪಿಕ್ಸ್ ಟೆಸ್ಟ್‌ಗೆ ಹಾಕಿ ಇಂಡಿಯಾ ಶುಕ್ರವಾರ 18 ಸದಸ್ಯರ ಮಹಿಳಾ ತಂಡವನ್ನು ಪ್ರಕಟಿಸಿದೆ. ರಾಣಿ ರಾಂಪಾಲ್ ತಂಡದ ನಾಯಕಿಯ ಜವಾಬ್ದಾರಿ ನಿಭಾಯಿಸಲಿದ್ದಾರೆ. ಆಗಸ್ಟ್ 17ರಿಂದ 21ರವರೆಗೆ ಈ ಟೂರ್ನಿ ನಡೆಯಲಿದೆ.

ಎಫ್‌ಐಎಚ್ ಸಿರೀಸ್ ಫೈನಲ್ಸ್‌ನಲ್ಲಿ ಆಡಿದಬಹುತೇಕ ತಂಡವನ್ನೇ ಉಳಿಸಿಕೊಳ್ಳಲಾಗಿದ್ದು, ಕೇವಲ ಎರಡು ಬದಲಾ ವಣೆಗಳನ್ನು ಮಾಡಲಾಗಿದೆ. ಯುವ ಆಟಗಾರ್ತಿ ಶರ್ಮಿಳಾ ದೇವಿ ಹಾಗೂ ರೀನಾ ಕೋಕರ್ ಅವರು ಸುನೀತಾ ಲಾಕ್ರಾ ಹಾಗೂ ಜ್ಯೋತಿ ಬದಲು ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಗೋಲ್‌ಕೀಪರ್ ಸವಿತಾ ಉಪನಾಯಕಿಯಾಗಿದ್ದಾರೆ.

ಎಫ್‌ಐಎಚ್ ಸಿರೀಸ್ ರ‍್ಯಾಂಕಿಂಗ್ ನಲ್ಲಿ ಭಾರತ 10ನೇ ಸ್ಥಾನದಲ್ಲಿದೆ. ವಿಶ್ವ ಕ್ರಮಾಂಕದಲ್ಲಿ ಎರಡನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾ, ಚೀನಾ (11ನೇ ಸ್ಥಾನ) ಹಾಗೂ ಆತಿಥೇಯ ಜಪಾನ್ (14ನೇ ಸ್ಥಾನ) ತಂಡಗಳಿಂದ ಕಠಿಣ ಹೋರಾಟವನ್ನು ಒಲಿಂಪಿಕ್ ಟೆಸ್ಟ್‌ನಲ್ಲಿ ಭಾರತ ಎದುರಿಸಲಿದೆ.

ತಂಡ: ಗೋಲ್‌ಕೀಪರ್ಸ್: ಸವಿತಾ (ಉಪನಾಯಕಿ), ರಜನಿ ಎತಿಮರ್ಪು; ಡಿಫೆಂಡರ್ಸ್: ದೀಪ್ ಗ್ರೇಸ್ ಎಕ್ಕಾ, ರೀನಾ ಕೋಕರ್, ಗುರ್ಜಿತ್ ಕೌರ್, ಸಲೀಮಾ ಟೇಟ್ ಮತ್ತು ನಿಶಾ; ಮಿಡ್‌ಫೀಲ್ಡರ್ಸ್: ಸುಶೀಲಾ ಚಾನು ಪುಖ್ರಂಬಮ್, ನಿಕ್ಕಿ ಪ್ರಧಾನ್, ಮೋನಿಕಾ, ಲಿಲಿಮಾ ಮಿನ್ಜ್ ಮತ್ತು ನೇಹಾ ಗೋಯಲ್; ಫಾರ್ವಡ್ಸ್: ರಾಣಿ ರಾಂಪಾಲ್ (ನಾಯಕಿ), ನವನೀತ್ ಕೌರ್, ವಂದನಾ ಕಟಾರಿಯಾ, ಲಾಲ್‌ರೆಮ್ಸಿಯಾಮಿ, ನವಜೋತ್ ಕೌರ್ ಮತ್ತು ಶರ್ಮಿಳಾ ದೇವಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.