ಸಿಂಗಪುರ: ಭಾರತದ ಡಬಲ್ಸ್ ಆಟಗಾರರಾದ ಟ್ರಿಸಾ ಜೋಳಿ ಮತ್ತು ಗಾಯತ್ರಿ ಗೋಪಿಚಂದ್ ಅವರು ಶುಕ್ರವಾರ ಸಿಂಗಪುರ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಆರನೇ ಶ್ರೇಯಾಂಕದ ಜೋಡಿ ದಕ್ಷಿಣ ಕೊರಿಯಾದ ಕಿಮ್ ಸೋ ಯೊಂಗ್ ಮತ್ತು ಕಾಂಗ್ ಹೀ ಯಾಂಗ್ ಸೋಲಿಸಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.

ಒಂದು ಗಂಟೆ 19 ನಿಮಿಷಗಳ ಕಾಲ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತದ ಜೋಡಿ 18-21, 21-19, 24-22 ಅಂತರದಲ್ಲಿ ಜಯ ಸಾಧಿಸಿತು.

ವಿಶ್ವದ 30ನೇ ರ್ಯಾಂಕ್ನ ಭಾರತದ ಜೋಡಿ ಕಳೆದ ವರ್ಷ ಏಷ್ಯನ್ ಕ್ರೀಡಾಕೂಟದಲ್ಲಿ ಇದೇ ಎದುರಾಳಿಗಳ ವಿರುದ್ಧ ಅನುಭವಿಸಿದ ಸೋಲಿಗೆ ಇಲ್ಲಿ ಮುಯ್ಯಿ ತೀರಿಸಿಕೊಂಡಿತು.

ಕಾಮನ್ವೆಲ್ತ್ ಗೇಮ್ಸ್ ಕಂಚಿನ ಪದಕ ವಿಜೇತರಾದ ಟ್ರಿಸಾ ಮತ್ತು ಗಾಯತ್ರಿ ಗುರುವಾರ ನಡೆದ ಪ್ರಿ ಕ್ವಾರ್ಟರ್ ಫೈನಲ್ನಲ್ಲಿ ವಿಶ್ವದ ಎರಡನೇ ಸ್ಥಾನದ ಕೊರಿಯಾದ ಬೇಕ್ ಹಾ ನಾ ಮತ್ತು ಲೀ ಸೋ ಹೀ ಅವರನ್ನು ಸೋಲಿಸಿದ್ದರು.

ಟ್ರಿಸಾ ಮತ್ತು ಗಾಯತ್ರಿ ಶನಿವಾರ ನಡೆಯಲಿರುವ ಸೆಮಿಫೈನಲ್ನಲ್ಲಿ ನಾಲ್ಕನೇ ಶ್ರೇಯಾಂಕದ ಜಪಾನಿನ ನಮಿ ಮತ್ಸುಯಾಮಾ ಮತ್ತು ಚಿಹಾರು ಶಿಡಾ ಅವರನ್ನು ಎದುರಿಸಲಿದ್ದಾರೆ. ಈ ಟೂರ್ನಿಯ ಕಣದಲ್ಲಿರುವ ಏಕೈಕ ಭಾರತೀಯ ಜೋಡಿ ಇದಾಗಿದೆ.

ಪಿ.ವಿ.ಸಿಂಧು ಮತ್ತು ಎಚ್.ಎಸ್.ಪ್ರಣಯ್ ಗುರುವಾರ ಕ್ರಮವಾಗಿ ಮಹಿಳಾ ಮತ್ತು ಪುರುಷರ ಸಿಂಗಲ್ಸ್ ಪಂದ್ಯಗಳಲ್ಲಿ ಸೋತಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.