ದಾವಣಗೆರೆ: ಇಲ್ಲಿನ ಧನುಷ್ ಜೆ. ಹಾಗೂ ಛಾಣಸ್ಯ ಡಿ. ಅವರು ವಾಲ್ ಕ್ಲೈಂಬಿಂಗ್ ಸ್ಪರ್ಧೆಯ ಸಬ್ ಜೂನಿಯರ್ ವಿಭಾಗದಲ್ಲಿ ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ಗೆದ್ದುಕೊಂಡು, ಏಷ್ಯನ್ ಚಾಂಪಿಯನ್‌ಷಿಪ್‌ಗೆ ಅರ್ಹತೆ ಪಡೆದುಕೊಂಡಿದ್ದಾರೆ.

ಉತ್ತರಕಾಶಿಯಲ್ಲಿ ಈಚೆಗೆ ಮುಕ್ತಾಯಗೊಂಡ 26ನೇ ರಾಷ್ಟ್ರೀಯ ಸ್ಪೋರ್ಟ್ಸ್ ಕ್ಲೈಂಬಿಂಗ್‌ನಲ್ಲಿ 13 ವರ್ಷದೊಳಗಿನ ವಿಭಾಗದಲ್ಲಿ ಧನುಷ್ 2 ನಿಮಿಷ ಹಾಗೂ ಛಾಣಸ್ಯ 2.30 ನಿಮಿಷಗಳಲ್ಲಿ 50 ಅಡಿಯ ಗೋಡೆ ಏರುವ ಮೂಲಕ ಸಾಧನೆ ಮಾಡಿದ್ದಾರೆ.

ಛಾಣಸ್ಯ ಎಸ್.ವಿ.ಎಸ್ ಕಾನ್ವೆಂಟ್‌ನ ವಿದ್ಯಾರ್ಥಿನಿ, ಧನುಷ್ ತರಳಬಾಳು ಶಾಲೆಯ ವಿದ್ಯಾರ್ಥಿ. ಇವರು ದಾವಣಗೆರೆಯ ಜನರಲ್ ತಿಮ್ಮಯ್ಯ ಸಾಹಸ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದಾರೆ.

‘ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗೆ ದಾವಣಗೆರೆಯಿಂದ 8 ಕ್ರೀಡಾಪಟುಗಳು ಭಾಗವಹಿಸಿದ್ದು, ದಕ್ಷಿಣ ವಲಯದಲ್ಲಿ ದಾವಣಗೆರೆಗೆ ಪಾರಿತೋಷಕ ದೊರೆತಿದೆ. ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿಯಿಂದ ಎರಡೂವರೆ ತಿಂಗಳ ತರಬೇತಿ ನೀಡಲಾಗಿತ್ತು’ ಎಂದು ವಾಲ್ ಕ್ಲೈಂಬಿಂಗ್‌ನ ತರಬೇತುದಾರ ಪಿ.ಎಲ್.ಕೆ. ಅಶ್ಮತ್ ಉಲ್ಲಾ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ
ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.