ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

BCCI ಮಹಿಳೆಯರ ಏಕದಿನ ಟ್ರೋಫಿ ಕ್ರಿಕೆಟ್‌: ಕರ್ನಾಟಕಕ್ಕೆ ಮಣಿದ ಪಾಂಡಿಚೇರಿ

Published 30 ಜನವರಿ 2024, 15:47 IST
Last Updated 30 ಜನವರಿ 2024, 15:47 IST
ಅಕ್ಷರ ಗಾತ್ರ

ಬೆಂಗಳೂರು: ರೋಶನಿ ಕಿರಣ್ ಅವರ ಭರ್ಜರಿ ಶತಕ ಮತ್ತು ಅನನ್ಯಾ ಹೆಗ್ಡೆ ಅವರ ಪರಿಣಾಮಕಾರಿ ಬೌಲಿಂಗ್‌ ದಾಳಿಯ ಬಲದಿಂದ ಕರ್ನಾಟಕ ತಂಡವು ಬಿಸಿಸಿಐ ಮಹಿಳೆಯರ 23 ವರ್ಷದೊಳಗಿನವರ ಏಕದಿನ ಟ್ರೋಫಿ ಕ್ರಿಕೆಟ್‌ ಟೂರ್ನಿಯಲ್ಲಿ ಪಾಂಡಿಚೇರಿ ತಂಡವನ್ನು 213 ರನ್‌ಗಳಿಂದ ಮಣಿಸಿತು.

ಪಶ್ಚಿಮ ಬಂಗಾಲದ ಸಾಲ್ಟ್ ಲೇಕ್‌ನ 22 ಯಾರ್ಡ್ಸ್ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಕರ್ನಾಟಕ ತಂಡವು ರೋಶನಿ (119; 125ಎ, 4x16) ಮತ್ತು ನಿಕಿ ಪ್ರಸಾದ್‌ (65; 73ಎ, 4x5, 6x1) ಅವರ ಬ್ಯಾಟಿಂಗ್‌ ನೆರವಿನಿಂದ 50 ಓವರ್‌ಗಳಲ್ಲಿ 6 ವಿಕೆಟ್‌ಗೆ 292 ರನ್‌ ಗಳಿಸಿತು. ಪಾಂಡಿಚೇರಿ ತಂಡದ ಅಭಿರಾಮೆ ಆರ್. ಮೂರು ವಿಕೆಟ್‌ ಪಡೆದರು.

ಗುರಿಯನ್ನು ಬೆನ್ನಟ್ಟಿದ ಪಾಂಡಿಚೇರಿ ತಂಡವನ್ನು ಕರ್ನಾಟಕದ ಬೌಲರ್‌ಗಳು ಕಾಡಿದರು. ಹೀಗಾಗಿ, ತಂಡವು 47 ಓವರ್‌ಗಳಲ್ಲಿ 79 ರನ್‌ಗೆ ಕುಸಿಯಿತು. 21 ರನ್‌ ಗಳಿಸಿದ ಸುಷ್ಮಿತಾ ಗರಿಷ್ಠ ಸ್ಕೋರರ್‌ ಎನಿಸಿಕೊಂಡರು. ಕರ್ನಾಟಕದ ಅನನ್ಯಾ ನಾಲ್ಕು ವಿಕೆಟ್‌ ಪಡೆದರು.

ಸಂಕ್ಷಿಪ್ತ ಸ್ಕೋರ್‌: ಕರ್ನಾಟಕ 50 ಓವರ್‌ಗಳಲ್ಲಿ 6 ವಿಕೆಟ್‌ಗೆ 292 (ರೋಶನಿ ಕಿರಣ್‌ 119, ನಿಕಿ ಪ್ರಸಾದ್‌ 65, ಶಿಶಿರಾ ಎ. ಗೌಡ 42; ಅಭಿರಾಮೆ ಆರ್‌. 35ಕ್ಕೆ 3. ಪಾಂಡಿಚೇರಿ 47 ಓವರ್‌ಗಳಲ್ಲಿ 79 (ಸುಶ್ಮಿತಾ 21, ಅನನ್ಯಾ ಹೆಗ್ಡೆ 8ಕ್ಕೆ 4)

ಫಲಿತಾಂಶ: ಕರ್ನಾಟಕಕ್ಕೆ 213 ರನ್‌ಗಳ ಜಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT