ಸೋಮವಾರ, 2 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ | ಫ್ರೀಸ್ಟೈಲ್‌: ಭಾರತದ ಕುಸ್ತಿಪಟುಗಳ ಶುಭಾರಂಭ

ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌: ಉಕ್ರೇನ್‌ ಪೈಲ್ವಾನ್‌ಗೆ ಆಘಾತ ನೀಡಿದ ಅಭಿಮನ್ಯು
Published 16 ಸೆಪ್ಟೆಂಬರ್ 2023, 13:29 IST
Last Updated 16 ಸೆಪ್ಟೆಂಬರ್ 2023, 13:29 IST
ಅಕ್ಷರ ಗಾತ್ರ

ಬೆಲ್ಗ್ರೇಡ್‌ (ಪಿಟಿಐ): ಭಾರತದ ನಾಲ್ಕೂ ಮಂದಿ ಫ್ರೀಸ್ಟೈಲ್‌ ಕುಸ್ತಿಪಟುಗಳೂ ಶನಿವಾರ ಆರಂಭವಾದ ವಿಶ್ವ ಚಾಂಪಿಯನ್‌ಷಿಪ್‌ನ ಮೊದಲ ಸುತ್ತಿನಲ್ಲಿ ತಮ್ಮ ಸೆಣಸಾಟಗಳಲ್ಲಿ ಜಯ ಸಾಧಿಸಿದರು. 70 ಕೆ.ಜಿ. ವಿಭಾಗದಲ್ಲಿ ಅಭಿಮನ್ಯು, ವಿಶ್ವದ ಏಳನೇ ಕ್ರಮಾಂಕದ ಇಹೋರ್ ನಿಕಿಫೋರಕ್ ಅವರ ಮೇಲೆ ಅಚ್ಚರಿಯ ಜಯಗಳಿಸಿದರು.

ವಿಶ್ವ 23 ವರ್ಷದೊಳಗಿನವರ ವಿಭಾಗದ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದ ಅಭಿಮನ್ಯು 19–9 ರಿಂದ ಉಕ್ರೇನ್‌ನ ನಿಕಿಫೋರಕ್ ಅವರನ್ನು ಮಣಿಸಿದರು. ಹೋರಾಟದ ಕೊನೆಯಲ್ಲಿ ಎದುರಾಳಿಯನ್ನು ಚಿತ್‌ ಮಾಡಿದರು. ಭಾರತದ ಪೈಲ್ವಾನ್‌,  ವಿಶ್ವ ಕ್ರಮಾಂಕದಲ್ಲಿ 26ನೇ ಸ್ಥಾನದಲ್ಲಿದ್ದಾರೆ.

ಅವರು ಪ್ರೀಕ್ವಾರ್ಟರ್‌ಫೈನಲ್‌ನಲ್ಲಿ ಮಾಲ್ಡೋವಾದ ನಿಕೊಲಾಯ್ ಗ್ರಾಮೆಝ್ ಅವರನ್ನು ಎದುರಿಸುವರು.

ಆಕಾಶ್ ದಹಿಯಾ ತಮ್ಮ ಮೊದಲ ಸುತ್ತಿನ ಪಂದ್ಯದಲ್ಲಿ ಮಾಲ್ಡೋವಾದ ಎದುರಾಳಿ ಲಿಯೊಮಿಡ್ ಕೊಲೆಸ್ನಿಕ್ ಅವರನ್ನು 10–5 ರಿಂದ ಸೋಲಿಸಿದರು. 21ನೇ ಕ್ರಮಾಂಕದಲ್ಲಿರುವ ದಹಿಯಾ, ಮುಂದಿನ ಸುತ್ತಿನಲ್ಲಿ ಉಜ್ಬೇಕಿಸ್ತಾನದ ಜಹಾಂಗಿರ್ ಮಿರ್ಜಾ ತುರಬೋವ್ ಅವರನ್ನು ಎದುರಿಲಿದ್ದಾರೆ. ತುರಬೋವ್ ಅವರು ಇಲ್ಲಿ ಆರನೇ ಶ್ರೇಯಾಂಕ ಪಡೆದಿದ್ದು, 2021ರ ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದಿದ್ದರು

ಮೊದಲ ಸುತ್ತಿನ ಇನ್ನೊಂದು ಪಂದ್ಯದಲ್ಲಿ ಸಂದೀಪ್‌ ಮಾನ್ ಅವರು 86 ಕೆ.ಜಿ. ವಿಭಾಗದಲ್ಲಿ ಉತ್ತರ ಮ್ಯಾಸಿಡೋನಿಯಾದ ಡೆಜಾನ್ ಮಿಟ್ರೋವ್ ಅವರನ್ನು ತಾಂತ್ರಿಕ ಶ್ರೇಷ್ಠತೆಯ ಆಧಾರದಲ್ಲಿ  ಸೋಲಿಸಿದರು. ಅವರು ಎರಡನೇ ಕ್ವಾಲಿಫಿಕೇಷನ್ ಸುತ್ತಿನಲ್ಲಿ ಚೀನಾದ ಲಿನ್‌ ಝುಷೆನ್ ಅವರನ್ನು ಎದುರಿಸುವರು.

125 ಕೆ.ಜಿ. ವಿಭಾಗದಲ್ಲಿ ಸುಮಿತ್‌ ಅವರೂ ಸುಲಭ ಜಯ ಸಾಧಿಸಿದರು. ಅವರು ಜಪಾನ್‌ನ ತೈಕಿ ಯಮಾಮಟೊ ಅವರನ್ನು ಸೋಲಿಸಿದರು. ವಿಶ್ವ ಕ್ರಮಾಂಕದಲ್ಲಿ ಸುಮಿತ್‌ 29ನೇ ಸ್ಥಾನದಲ್ಲಿದ್ದರೆ, ತೈಕಿ ಅವರು 30ನೇ ಸ್ಥಾನದಲ್ಲಿದ್ದಾರೆ. ಭಾರತದ ಕುಸ್ತಿಪಟು, ಪ್ರಿಕ್ವಾರ್ಟರ್‌ಫೈನಲ್‌ನಲ್ಲಿ ಪೋಲೆಂಡ್‌ನ ರಾಬರ್ಟ್‌ ಬರನ್ ಅವರನ್ನು ಎದುರಿಸಲಿದ್ದಾರೆ.  ಏಳನೇ ಶ್ರೇಯಾಂಕ ಪಡೆದಿರುವ ಬರನ್, ಯುರೋಪಿಯನ್ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಕ ವಿಜೇತ ಆಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT