ಬಟುಮಿ (ಪಿಟಿಐ): ಭಾರತದ ಐಎಂ ಆಟಗಾರ್ತಿ ದಿವ್ಯಾ ದೇಶಮುಖ್ ಅವರು ತಮಗಿಂತ ಉನ್ನತ ರೇಟಿಂಗ್ ಪಡೆದಿರುವ ಚೀನಾದ ಗ್ರ್ಯಾಂಡ್ಮಾಸ್ಟರ್ ಝು ಜಿನೆರ್ ಅವರನ್ನು ಟೈಬ್ರೇಕರ್ನಲ್ಲಿ ಸೋಲಿಸಿ ಫಿಡೆ ಮಹಿಳಾ ವಿಶ್ವಕಪ್ನಲ್ಲಿ ಶುಕ್ರವಾರ ಕ್ವಾರ್ಟರ್ಫೈನಲ್ ತಲುಪಿದರು. ಗ್ರ್ಯಾಂಡ್ಮಾಸ್ಟರ್ಗಳಾದ ಹಂಪಿ ಮತ್ತು ಹಾರಿಕಾ ಅವರೂ ಸಹ ಎಂಟರ ಘಟ್ಟ ಪ್ರವೇಶಿಸಿದರು.

ದಿವ್ಯಾ 25+10 ನಿಮಿಷಗಳ ರ್ಯಾಪಿಡ್ ಟೈಬ್ರೇಕ್ನ ಮೊದಲ ಆಟ ಗೆದ್ದು ಮಾನಸಿಕ ಮೇಲುಗೈ ಪಡೆದರು. ನಂತರ ಎರಡನೇ ಆಟವನ್ನು ಡ್ರಾ ಮಾಡಿಕೊಂಡು 1.5–0.5 (ಒಟ್ಟಾರೆ 2.5–1.5) ರಲ್ಲಿ ಜಯಗಳಿಸಿದರು. ಇವರಿಬ್ಬರ ನಡುವಣ ಎರಡು ಪಂದ್ಯಗಳ ಕ್ಲಾಸಿಕಲ್ ಸುತ್ತಿನಲ್ಲಿ ಇಬ್ಬರೂ ಒಂದೊಂದು ಪಂದ್ಯ ಗೆದ್ದು ಸ್ಕೋರ್ ಸಮನಾದ ಕಾರಣ ಟೈಬ್ರೇಕ್ ಆಡಿಸಲಾಗಿತ್ತು.

ಇನ್ನೊಂದು ಪ್ರಿಕ್ವಾರ್ಟರ್ಫೈನಲ್ನ ಟೈಬ್ರೇಕ್ನಲ್ಲಿ ಹಂಪಿ 1.5–0.5 ರಿಂದ ಸ್ವಿಟ್ಜರ್ಲೆಂಡ್ನ ಅಲೆಕ್ಸಾಂಡ್ರಾ ಕೊಸ್ಟಾನಿಯುಕ್ ಅವರನ್ನು ಸೋಲಿಸಿದರು. ಮೊದಲ ರ್ಯಾಪಿಡ್ ಆಟವನ್ನು ಹಂಪಿ ಗೆದ್ದರು. ಎರಡನೇ ಆಟ ಡ್ರಾ ಆಗಿದ್ದರಿಂದ ಹಂಪಿ ಮುನ್ನಡೆದರು. ಇವರಿಬ್ಬರ ನಡುವೆ ಕ್ಲಾಸಿಕಲ್ ಸುತ್ತಿನ ಎರಡೂ ಪಂದ್ಯಗಳು ಡ್ರಾ ಆಗಿದ್ದವು.

ಭಾರತದಲ್ಲಿ ಗ್ರ್ಯಾಂಡ್ ಮಾಸ್ಟರ್ ಪಟ್ಟ ಪಡೆದ ಎರಡನೇ ಆಟಗಾರ್ತಿ ಡಿ.ಹಾರಿಕಾ ಇನ್ನೊಂದು ಪ್ರಿಕ್ವಾರ್ಟರ್ಫೈನಲ್ನಲ್ಲಿ ರಷ್ಯಾದ ಗ್ರ್ಯಾಂಡ್ಮಾಸ್ಟರ್ ಕ್ಯಾಥರಿನಾ ಲಾಗ್ನೊ ಅವರನ್ನು 3.5–2.5 ರಿಂದ ಸೋಲಿಸಿದರು. ಇವರಿಬ್ಬರ ನಡುವೆ ಕ್ಲಾಸಿಕಲ್ ಪಂದ್ಯಗಳು ಡ್ರಾ ಆಗಿದ್ದವು. ಟೈಬ್ರೇಕ್ನ ಮೊದಲ ಪಂದ್ಯವನ್ನು ಲಾಗ್ನೊ ಗೆದ್ದರೆ, ಎರಡನೇ ಪಂದ್ಯದಲ್ಲಿ ಹಾರಿಕಾ ತಿರುಗೇಟು ನೀಡಿದರು. ಹೀಗಾಗಿ ಮತ್ತೆರಡು ಪಂದ್ಯ ಆಡಿಸಲಾಯಿತು. ಮೂರನೇ ಪಂದ್ಯ ಡ್ರಾ ಆಯಿತು. ನಾಲ್ಕನೇ ಪಂದ್ಯದಲ್ಲಿ ಹಾರಿಕಾ ಜಯಗಳಿಸಿ ಟೈಬ್ರೇಕರ್ನಲ್ಲಿ ಒಟ್ಟು 2.5–1.5ರಲ್ಲಿ ಗೆಲುವು ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.