ಶುಕ್ರವಾರ, 14 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಸ್ತಿ: ಫೈನಲ್‌ಗೆ ಅಮನ್ ಸೆಹ್ರಾವತ್

Published 7 ಜೂನ್ 2024, 0:05 IST
Last Updated 7 ಜೂನ್ 2024, 0:05 IST
ಅಕ್ಷರ ಗಾತ್ರ

ಬುಡಾ‍ಪೆಸ್ಟ್‌: ಭಾರತದ ಕುಸ್ತಿಪಟು ಅಮನ್ ಸೆಹ್ರಾವತ್ ಗುರುವಾರ ಬುಡಾಪೆಸ್ಟ್ ರ್‍ಯಾಂಕಿಂಗ್ ಸರಣಿಯ 57 ಕೆ.ಜಿ ಫ್ರೀಸ್ಟೈಲ್ ವಿಭಾಗದಲ್ಲಿ ರಷ್ಯಾ-ಬೆಲಾರಸ್‌ನ ಆರ್ಯನ್ ಸಿಯುಟ್ರಿನ್ ಅವರನ್ನು 14-4 ತಾಂತ್ರಿಕ ಶ್ರೇಷ್ಠತೆ ಆಧಾರದಲ್ಲಿ ಸೋಲಿಸಿ ಫೈನಲ್ ಪ್ರವೇಶಿಸಿದರು.

ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿರುವ ಅಮನ್ ಅವರು ಚಿನ್ನದ ಪದಕಕ್ಕಾಗಿ ವಿಶ್ವ ಚಾಂಪಿಯನ್‌ಷಿಪ್ ಬೆಳ್ಳಿ ಪದಕ ವಿಜೇತ ಜಪಾನ್‌ನ ರೇ ಹಿಗುಚಿ ಅವರನ್ನು ಎದುರಿಸಲಿದ್ದಾರೆ.

ಈ ಟೂರ್ನಿಯು ಅಮನ್ ತನ್ನ ರ್‍ಯಾಂಕಿಂಗ್‌ ಸುಧಾರಿಸಲು ಮತ್ತು  ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಉತ್ತಮ ಡ್ರಾ ಪಡೆಯಲು ಸಹಾಯ ಮಾಡುತ್ತದೆ.

ಬುಡಾಪೆಸ್ಟ್ ರ್‍ಯಾಂಕಿಂಗ್ ಸರಣಿಯು ಪೊಲಿಯಾಕ್ ಇಮ್ರೆ ಮತ್ತು ವರ್ಗಾ ಜಾನೋಸ್ ಸ್ಮಾರಕ ಟೂರ್ನಿ ಎಂದೂ ಕರೆಯಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT