ಮುಂಬೈ: ಭಾರತದ ಉದಯೋನ್ಮುಖ ಷಟ್ಲರ್ ರಕ್ಷಾ ಕಂದಸಾಮಿ, ಕ್ರೊವೇಷ್ಯಾ ಇಂಟರ್‌ನ್ಯಾಷನಲ್ ಮತ್ತು ಬೆಲ್ಜಿಯಂ ಜೂನಿಯರ್ ಬ್ಯಾಡ್ಮಿಂಟನ್ ಟೂರ್ನಿಗಳಲ್ಲಿ ಪ್ರಶಸ್ತಿಗಳನ್ನು ಗೆದ್ದುಕೊಂಡು ಯಶಸ್ಸಿನ ಓಟ ಮುಂದುವರಿಸಿದ್ದಾರೆ.
16 ವರ್ಷ ವಯಸ್ಸಿನ ರಕ್ಷಾ ಎರಡೂ ಟೂರ್ನಿಗಳಲ್ಲಿ ಅಜೇಯರಾಗುಳಿದರು. ಸೊಮೊಬೊರ್‌ನಲ್ಲಿ ಭಾನುವಾರ ನಡೆದ ಕ್ರೊವೇಷ್ಯನ್ ಇಂಟರ್‌ನ್ಯಾಷನಲ್ ಟೂರ್ನಿಯ ಫೈನಲ್‌ನಲ್ಲಿ ಇಂಗ್ಲೆಂಡ್‌ನ ಲಿಯೊನಾ ಲೀ ವಿರುದ್ಧ ಗೆಲುವು ಪಡೆದರು. ಇದಕ್ಕೆ ಮೊದಲು ಸೆಮಿಫೈನಲ್‌ನಲ್ಲಿ 21–14, 21–23ರಲ್ಲಿ ಬಲ್ಗೇರಿಯಾದ ಸ್ಟೆಫಾನಿ ಸ್ಟೊಯೆವಾ ವಿರುದ್ಧ ಮತ್ತು ಕ್ವಾರ್ಟರ್‌ಫೈನಲ್‌ನಲ್ಲಿ 21–11, 21–8ರಲ್ಲಿ ಪೋಲೆಂಡ್‌ನ ಜೊವೊನಾ ರುದ್ನಾ ವಿರುದ್ಧ ಜಯಗಳಿಸಿದ್ದರು.
ಹರ್ಸ್ಟೆಲ್‌ನಲ್ಲಿ ಕಳೆದ ವಾರ ನಡೆದ ಬೆಲ್ಜಿಯಂ ಟೂರ್ನಿಯ ಫೈನಲ್‌ನಲ್ಲಿ ರಕ್ಷಾ 21–14, 10–21, 22–20ರಲ್ಲಿ ಜರ್ಮನಿಯಾ ಗ್ಲೋರಿಯಾ ಪೊಲ್ಯುಕ್ಟೊವ್ ಅವರ ತೀವ್ರ ಪೈಪೋಟಿ ಬದಿಗೊತ್ತಿದರು.
ಸೆಮಿಫೈನಲ್ ಕೂಡ ತೀವ್ರ ಪೈಪೋಟಿಯಿಂದ ಕೂಡಿದ್ದು ರಕ್ಷಾ 21–8, 19–21, 25–23 ರಿಂದ ಸಿಯೊಫ್ರಾ ಫ್ಲಿನ್ ಮೇಲೆ ಗೆಲುವು ದಾಖಲಿಸಿದ್ದರು.