ಶಿಕ್ಷಕರಿಗೆ ತರಬೇತಿ
ಬೇಸ್ ಸಂಸ್ಥೆಯು ಫೆಬ್ರುವರಿ 15ರಿಂದ ಆರಂಭವಾಗಲಿರುವ `ಫಿನಿಷಿಂಗ್ ಸ್ಕೂಲ್ ಫಾರ್ ಟೀಚರ್ಸ್~ ತರಬೇತಿಗಾಗಿ ಪ್ರವೇಶ ಪ್ರಕ್ರಿಯೆಯನ್ನು ನಡೆಸಿದೆ.

ಈ ತರಬೇತಿ ಕಾರ್ಯಕ್ರಮವು ವಿಷಯವೊಂದರಲ್ಲಿ ಶಿಕ್ಷಕರ ಬೋಧನಾ ಸಾಮರ್ಥ್ಯವನ್ನು ಹೆಚ್ಚಿಸುವುದರ ಜೊತೆಗೆ ಕಲಿಸುವಿಕೆಯಲ್ಲಿನ ಇತರ ಅಂಶಗಳೆಡೆಗೂ ಗಮನ ನೀಡುವ ರೀತಿಯಲ್ಲಿ ವಿನ್ಯಾಸಗೊಂಡಿದೆ. 0-5 ವರ್ಷ ಅನುಭವವುಳ್ಳ ಯುವ ಪದವೀಧರರು/ಸ್ನಾತಕೋತ್ತರ ಪದವೀಧರರು ಹಾಗೂ ಅನುಭವಿ ಶಿಕ್ಷಕರಿಗೆ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶವಿದೆ.

ಎಫ್‌ಎಸ್‌ಟಿ ಕಾರ್ಯಕ್ರಮವು ಬಸವನಗುಡಿಯಲ್ಲಿರುವ ಬೇಸ್ ಕೇಂದ್ರದಲ್ಲಿ ಆರಂಭಗೊಳ್ಳಲಿದ್ದು, 3 ತಿಂಗಳು ಮತ್ತು 5ತಿಂಗಳ ಅವಧಿಯ ವಾರಾಂತ್ಯದ ತರಬೇತಿ ಕಾರ್ಯಕ್ರಮಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಪ್ರವೇಶದ ಆಯ್ಕೆ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಸಂಪರ್ಕ: ದೂರವಾಣಿ ಸಂಖ್ಯೆ 080 - 4260 4600 ಅಥವಾ ಇ-ಮೇಲ್ info@base-edu.in`ಅಕಾಡೆಮಿ ಫಾರ್ ಕ್ರಿಯೇಟಿವ್ ಟೀಚಿಂಗ್~ನಿಂದ ತರಬೇತಿ

ಶಿಕ್ಷಕರ ವೃತ್ತಿಪರತೆ ಹೆಚ್ಚಿಸುವ ಉದ್ದೇಶದಿಂದ ಅಕಾಡೆಮಿ ಫಾರ್ ಕ್ರಿಯೇಟಿವ್ ಟೀಚಿಂಗ್ ಕೇಂದ್ರವು ಶಿಕ್ಷಕರಿಗಾಗಿ ತರಬೇತಿ ಯೋಜನೆಯೊಂದನ್ನು ಆರಂಭಿಸಿದೆ.

ಹೊಸದಾಗಿ ಶಿಕ್ಷಕ ವೃತ್ತಿಯನ್ನು ಆರಂಭಿಸುವವರಿಗೆ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಅನುಭವವಿರುವವರಿಗೂ ತಮ್ಮ ಕೌಶಲ್ಯಗಳನ್ನು ಪುನಶ್ಚೇತನಗೊಳಿಸಿಕೊಳ್ಳಲು ಹಾಗೂ ಹೆಚ್ಚಿನ ಸೃಜನಶೀಲತೆಯನ್ನು ಬೆಳೆಸಿಕೊಳ್ಳಲು ಈ ತರಬೇತಿ ಸಹಾಯಕವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.

ಎಫ್‌ಎಸ್‌ಟಿ ತರಬೇತಿಯಲ್ಲಿ ಶಿಕ್ಷಣ ಸಂಬಂಧಿಯಾದ ಮೌಲ್ಯಗಳು, ಸೃಜನಶೀಲತೆ, ತಂಡ ನಿರ್ವಹಣ ಕೌಶಲ, ಪ್ರಾಯೋಗಿಕ ಶಿಕ್ಷಣ ಮುಂತಾದ ವಿಷಯಗಳಲ್ಲಿ ಪ್ರಶಿಕ್ಷಣ ನೀಡಲಾಗುತ್ತದೆ. ಶಿಕ್ಷಕರ ಮಾತುಗಾರಿಕೆ, ವಿವರಣ ಸಾಮರ್ಥ್ಯ, ವಿಷಯಾಧಾರಿತ ಪಾಠ ಕ್ರಮ ಹಾಗೂ ಇತರ ಕೌಶಲಗಳನ್ನು ಈ ತರಬೇತಿಯಲ್ಲಿ ಕಲಿಸಲಾಗುತ್ತದೆ.

ವಿದ್ಯಾರ್ಥಿಗಳ ಮೌಲ್ಯಮಾಪನದಲ್ಲಿ ನಿಯುಕ್ತ (ಗೃಹಕಾರ್ಯ) ಯೋಜನೆಗಳು, ಆಂತರಿಕ ಪರೀಕ್ಷೆಗಳಲ್ಲದೆ ವಿಚಾರಗೋಷ್ಠಿಗಳು, ಪತ್ರಿಕಾಮಂಡನ ಹಾಗೂ ವಿದ್ಯಾರ್ಥಿಯ ನಡವಳಿಕೆಯೂ ಸೇರಿವೆ. ಶಿಕ್ಷಣದಲ್ಲಿ ತಂತ್ರಜ್ಞಾನವನ್ನು ಬಳಸುವ ವಿಷಯದಲ್ಲೂ ತರಬೇತಿ ನೀಡಲಾಗುವುದು. ಇದಲ್ಲದೆ ಎಸಿಟಿ ಸಂಬಂಧಿತ ಶಾಲೆಗಳಲ್ಲಿ ಪ್ರಯೋಗ ಶಿಕ್ಷಣ ಹಾಗೂ ಯೋಜನೆಗಳಲ್ಲಿ ಭಾಗವಹಿಸುವ ಅವಕಾಶವಿರುತ್ತದೆ.

ವಿವರಗಳಿಗಾಗಿ ಸಂಪರ್ಕಿಸಿ: ದೂರವಾಣಿ- 080-41697855/41697866 ಅಥವಾ ಇಮೇಲ್- contact@actedu.in
ವೆಬ್‌ಸೈಟ್- www.actedu.in

ಎಂಜಿನಿಯರಿಂಗ್ ಕ್ರಿಟಿಕಲ್ ಥಿಂಕಿಂಗ್
ಇಂದಿನ ಎಂಜಿನಿಯರಿಂಗ್ ವಿದ್ಯಾರ್ಥಿಗಳು ದಿನ ನಿತ್ಯ ಎದುರಿಸುವ ಸಮಸ್ಯೆಗಳನ್ನು ಪರಿಹರಿಸುವ ಕೌಶಲಗಳನ್ನು ಕಲಿಸುವ ಕೈಪಿಡಿಯಾದ `ಎಂಜಿನಿಯರಿಂಗ್ ಕ್ರಿಟಿಕಲ್ ಥಿಂಕಿಂಗ್~ ಎಂಬ ಪುಸ್ತಕವನ್ನು ಬೆಂಗಳೂರಿನ `ಇನ್ನೋವೆಂಟ್~ ಸಂಸ್ಥೆಯು ಬಿಡುಗಡೆ ಮಾಡಿದೆ. ಸಂಸ್ಥೆಯ ಸಿ ಟಿ ಓ ಗಣೇಶ ಎಚ್ ಎನ್ ಬರೆದಿರುವ ಈ ಪುಸ್ತಕ ಎಂಜಿನಿಯರಿಂಗ್ ಶಿಕ್ಷಕ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಗೆ ಉಪಯುಕ್ತವಾಗಿದೆ ಎಂದು ಪ್ರಕಟಣೆ ತಿಳಿಸಿದೆ.
್ಝ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.