ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೆ ಉತ್ತರ

Last Updated 6 ಜುಲೈ 2014, 19:30 IST
ಅಕ್ಷರ ಗಾತ್ರ

ವೀರೇಶ್ ಟಿ.ಎ., ತುಮಕೂರು
ನಾನು 72%ನೊಂದಿಗೆ ಪ್ರಥಮ ಪಿ.ಯು.ಸಿ.ಯಲ್ಲಿ ಉತ್ತೀರ್ಣನಾಗಿದ್ದೇನೆ. ಮುಂದೆ ಏರೋನಾಟಿಕಲ್ ಇಂಜನಿಯರಿಂಗ್ ಮಾಡಬೇಕೆಂದಿದ್ದೇನೆ. ಇದಕ್ಕಾಗಿ ದ್ವಿತೀಯ ಪಿ.ಯು.ನಲ್ಲಿ ಎಷ್ಟು ಅಂಕಗಳಿಸಬೇಕು ಮತ್ತು ಸಿ.ಇ.ಟಿ.ಯಲ್ಲಿ ಎಷ್ಟು ರ್‌್ಯಾಂಕ್ ಗಳಿಸಬೇಕು. ಕರ್ನಾಟಕದ ಯಾವ ಯಾವ ಕಾಲೇಜಿನಲ್ಲಿ ಏರೋನಾಟಿಕಲ್ ವಿಭಾಗ ಇದೆ? ಉತ್ತಮ ಅಂಕ ಮತ್ತು ರ್‌್ಯಾಂಕ್ ಗಳಿಸಲು ಹೇಗೆ ತಯಾರಿ ನಡೆಸಬೇಕು? ದಯಮಾಡಿ ಸೂಕ್ತ ಸಲಹೆ ಮತ್ತು ಮಾರ್ಗದರ್ಶನ ಕೊಡಿ?

–ಏರೋನಾಟಿಕಲ್ ವಿಷಯದಲ್ಲಿ ಬಿ.ಇ ಪದವಿಗೆ ಪ್ರವೇಶ ಪಡೆಯಲು ನೀವು ದ್ವಿತೀಯ ಪಿ.ಯು. ಮತ್ತು ಸಿ.ಇ.ಟಿಯಲ್ಲಿ ಪಿ.ಸಿ.ಎಂ ವಿಷಯಗಳಲ್ಲಿ ಗಳಿಸುವ ಅಂಕಗಳ ಆಧಾರದ ಮೇಲೆ ಪಡೆಯುವ ಜೇಷ್ಠತೆ (ರ್‌್ಯಾಂಕ್) ಆಧಾರವಾಗಿರುತ್ತದೆ. ಎಷ್ಟು ಜೇಷ್ಠತೆ ಇರಬೇಕು ಎನ್ನುವುದು ವರ್ಷದಿಂದ ವರ್ಷಕ್ಕೆ ಮತ್ತು ಒಂದು ಕಾಲೇಜಿನಿಂದ ಮತ್ತೊಂದು ಕಾಲೇಜಿಗೆ ಬದಲಾಗುತ್ತಾ ಇರುತ್ತದೆ. ಉತ್ತಮ ಅಂಕ ಮತ್ತು ರ್‌್ಯಾಂಕ್ ಗಳಿಸಲು ವಾರ್ಷಿಕ ಪರೀಕ್ಷೆ ಮತ್ತು ಸಿ.ಇ.ಟಿ ಪರೀಕ್ಷೆಗೆ ಪ್ರಾರಂಭದಿಂದಲೂ ಜೊತೆ ಜೊತೆಗೆ ತಯಾರಿ ನಡೆಸಬೇಕು. ಸಿ.ಇ.ಟಿ ಪರೀಕ್ಷೆಯಲ್ಲಿ ಪ್ರಥಮ ಪಿ.ಯು. ಪಠ್ಯದಿಂದಲೂ ಪ್ರಶ್ನೆಗಳು ಇರುತ್ತವೆ. ಏರೋನಾಟಿಕಲ್ ಇಂಜಿನಿಯರಿಂಗ್ ಇರುವ ಕಾಲೇಜುಗಳೆಂದರೆ
Nitte Meenakshi Institute of Technology, Bangalore - www.nmit.ac.in
SCT Institute of Technology, Bangalore - http://sctengineering.in/
Siddhartha College Of Aeronautical Engineering And Technology, Bangalore - http://www.siaeit.com/
Institute of Aeronautical And Marine Engineering (IAME), Bangalore
MVJ College of Engineering, Bangalore - http://www.mvjce.edu.in
Acharya Institute of Technology, Bangalore - www.acharya.ac.in
Dayananda Sagar College of Engineering, Bangalore - http://www.dayanandasagar.edu
ACS College of Engineering, Bangalore – http://acsce.edu.in
V.S.M.Institute of Aerospace Engineering and Technology, Bangalore - http://www.agragami.in

ಅಜಿತ್ ವರ್ಗೀಸ್
ನಾನು ಪ್ರಥಮ ಪಿ.ಯು. ಮುಗಿಸಿದ್ದೇನೆ. ಆದರೆ ನನಗೆ ಭೌತಶಾಸ್ತ್ರ ಮತ್ತು ಗಣಿತ ವಿಷಯಗಳು ಕಷ್ಟವೆನಿಸುತ್ತಿವೆ. ನನಗೆ ವೈದ್ಯಕೀಯ ವಿಭಾಗದಲ್ಲಿ ಆಸಕ್ತಿ ಇದೆ. ಇದಕ್ಕೆ ತಯಾರಿ ಹೇಗೆ? ಎಷ್ಟು ರ್‌್ಯಾಂಕ್‌ ಪಡೆಯಬೇಕು? ಸೂಕ್ತ ಸಲಹೆ ಮತ್ತು ಮಾರ್ಗದರ್ಶನ ಕೊಡಿ?

–ವೈದ್ಯಕೀಯ ಪದವಿಗೆ ಪ್ರವೇಶ ಪಡೆಯಲು ಪಿ.ಸಿ.ಬಿ ವಿಷಯಗಳಲ್ಲಿ ಸಿ.ಇ.ಟಿ ಪರೀಕ್ಷೆಯಲ್ಲಿ ಗಳಿಸುವ ಅಂಕಗಳ ಆಧಾರದ ಮೇಲೆ ನೀವು ಪಡೆಯುವ ಜೇಷ್ಠತೆ ಮತ್ತು ಪ್ರವೇಶವನ್ನು ಯಾವ ವರ್ಗದಲ್ಲಿ ಪ್ರವೇಶ ಗಳಿಸುತ್ತೀರಾ ಎನ್ನುವುದನ್ನು ಅವಲಂಬಿಸಿರುತ್ತದೆ. ಸಿ.ಇ.ಟಿ ಪರೀಕ್ಷೆಗೆ ಪ್ರಶ್ನೆಗಳು ಪ್ರಥಮ ಮತ್ತು ದ್ವಿತೀಯ ಪಿ.ಯು. ಪಠ್ಯಗಳೆರಡರಿಂದಲೂ ಇರುವುದರಿಂದ ವ್ಯವಸ್ಥಿತವಾಗಿ ಪ್ರಾರಂಭದಿಂದಲೇ ಸಿದ್ಧತೆಯನ್ನು ಮಾಡಿಕೊಳ್ಳಬೇಕು. ಎಷ್ಟು ರ್‌್ಯಾಂಕ್ ಪಡೆಯಬೇಕು ಎನ್ನುವುದು ನೀವು ಬಯಸುವ ಕಾಲೇಜು ಮತ್ತು ನೀವು ಯಾವ ವರ್ಗದ ಅಡಿಯಲ್ಲಿ ಬರುತ್ತೀರಾ ಎನ್ನುವುದನ್ನು ಅವಲಂಬಿಸಿರುತ್ತದೆ. ಭೌತಶಾಸ್ತ್ರ ಮತ್ತು ಗಣಿತ ವಿಷಯಗಳನ್ನು ಕ್ರಮವಾಗಿ ಅಂದಿನ ಪಾಠವನ್ನು ಅಂದೇ ಅಭ್ಯಾಸ ಮಾಡಿ ಬರೆದು ಮತ್ತು ಅಧ್ಯಾಪಕರು ಕಾಲೇಜಿನಲ್ಲಿ ಬಿಡಿಸುವ ಲೆಕ್ಕಗಳ ಜೊತೆಗೆ ಪಠ್ಯಪುಸ್ತಕಗಳಿಂದ ಅದೇ ರೀತಿಯ ಲೆಕ್ಕಗಳನ್ನು ಆಯ್ಕೆ ಮಾಡಿಕೊಂಡು ಸ್ವತಂತ್ರವಾಗಿ ಬಿಡಿಸಿ ಅನುಮಾನಗಳಿದ್ದರೆ ಅಧ್ಯಾಪಕರಿಂದ ಸಲಹೆಗಳನ್ನು ಪಡೆಯಬೇಕು.

ಸ್ವಪ್ನ
ನಾನು ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಲ್ಲಿ ಬಿ.ಟೆಕ್. (ಏರೋನಾಟಿಕ್ಸ್) 4ನೇ ಸೆಮಿಸ್ಟರ್‌ನಲ್ಲಿ ಓದುತ್ತಿದ್ದೇನೆ. ಮುಂದೆ ಟೋಫೆಲ್ ಪರೀಕ್ಷೆ ತೆಗೆದುಕೊಳ್ಳಬೇಕೆಂದುಕೊಂಡಿದ್ದೇನೆ. ಕ್ಯಾಲಿಫೋರ್ನಿಯದಲ್ಲಿ ಓದಲು ಚಿಂತಿಸಿದ್ದೇನೆ. ಸೂಕ್ತ ಸಲಹೆ ಮತ್ತು ಮಾರ್ಗದರ್ಶನ ನೀಡಿ?

–ಬಿ.ಟೆಕ್ ಪದವಿಯ ನಂತರ ಉನ್ನತ ವ್ಯಾಸಂಗವನ್ನು ಕ್ಯಾಲಿಫೋರ್ನಿಯಾದಲ್ಲಿ (ಯು.ಎಸ್.ಎ) ಮಾಡುವ ಯೋಚನೆ ಇದ್ದರೆ ಜಿ.ಆರ್.ಇ ಮತ್ತು ಟೋಫೆಲ್ ಪ್ರವೇಶ ಪರೀಕ್ಷೆಯನ್ನು ತೆಗೆದುಕೊಳ್ಳಬೇಕು. ಈ ಎರಡು ಪರೀಕ್ಷೆಗಳಲ್ಲಿ ನೀವು ಪಡೆಯುವ ಅಂಕಗಳ ಆಧಾರದ ಮೇಲೆ ಎಂ.ಎಸ್ ಪದವಿಗೆ ಪ್ರವೇಶವನ್ನು ಪಡೆದು ವಿದ್ಯಾಭ್ಯಾಸವನ್ನು ಮುಂದುವರೆಸಬಹುದು.

ಬಸವರಾಜು
ಕ್ಲಿನಿಕಲ್ ನ್ಯೂಟ್ರಿಷಿಯನ್ ಮತ್ತು ಡಯಟಿಕ್ಸ್ ವಿಷಯದಲ್ಲಿ ಎಂ.ಎಸ್ಸಿ. ಮುಗಿಸಿದ್ದೇನೆ. ಈಗ ನನಗೆ ಸರ್ಕಾರಿ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳಿವೆಯೇ? ದಯಮಾಡಿ ತಿಳಿಸಿ?

–ನಿಮ್ಮ ವಿದ್ಯಾರ್ಹತೆಗೆ ಸಿ.ಎಫ್.ಟಿ.ಆರ್.ಐ (ಮೈಸೂರು) ಇಂತಹ ಸರಕಾರಿ ಸಂಸ್ಥೆಗಳಲ್ಲಿ ಉದ್ಯೋಗವಕಾಶಗಳು ಇರುತ್ತವೆ. ಅಲ್ಲದೆ ಇಂತಹುದೇ ಖಾಸಗೀ ಸಂಸ್ಥೆಗಳು ಪ್ರಮುಖವಾಗಿ ದಿನ ನಿತ್ಯ ಬಳಸುವ ಆಹಾರ ವಸ್ತುಗಳಾದ ಬಿಸ್ಕೆಟ್, ಹಣ್ಣಿನ ರಸ ಇತ್ಯಾದಿ ವಸ್ತುಗಳನ್ನು ಉತ್ಪಾದಿಸುವ ಸಂಸ್ಥೆಗಳಲ್ಲಿ ಉದ್ಯೋಗವಕಾಶಗಳು ಇರುತ್ತವೆ.

ಮೇಘ, ಬೆಂಗಳೂರು
ನಾನು ಪಿ.ಯು.ಸಿ. ಮುಗಿಸಿದ್ದೇನೆ. ಮುಂದೆ ಸಿ.ಪಿ.ಟಿ. ಪರೀಕ್ಷೆ ತೆಗೆದುಕೊಳ್ಳಬೇಕೆಂದಿದ್ದೇನೆ. ಅಲ್ಲದೆ ನನಗೆ ಕಾಲೇಜಿಗೆ ಹೋಗುವ ಮನಸ್ಸಿಲ್ಲ. ಆದ್ದರಿಂದ ನಾನು ದೂರಶಿಕ್ಷಣದಲ್ಲಿ ಬಿ.ಕಾಂ. ಮಾಡಬಹುದೇ? ಅದಕ್ಕೆ ಬೆಲೆ ಇದೆಯೇ? ಯಾವ ವಿಶ್ವವಿದ್ಯಾಲಯ ಉತ್ತಮ? ಅದಕ್ಕೆ ಸೇರಲು ಬೇಕಾದ ಅರ್ಹತೆಗಳೇನು? 

–ಪಿ.ಯು.ಸಿ ನಂತರ ಸಿ.ಪಿ.ಟಿ ಪರೀಕ್ಷೆಯನ್ನು ಖಾಸಗಿಯಾಗಿ ತೆಗೆದುಕೊಳ್ಳಬಹುದು ಅಲ್ಲದೆ ದೂರಶಿಕ್ಷಣದಲ್ಲಿ ನೀವು ಬಿ.ಕಾಂ ಪದವಿಗೆ ಅಭ್ಯಾಸ ಮಾಡಿ ಈ ಪದವಿಯನ್ನು ಗಳಿಸಬಹುದು. ವಿಶ್ವವಿದ್ಯಾಲಯ ಆಯೋಗದಿಂದ ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದ ಪದವಿಗೆ ಮಾನ್ಯತೆ ಇರುತ್ತದೆ. ಈ ಪದವಿಗೆ ನೀವು ಇಂದಿರಾಗಾಂಧಿ ಮುಕ್ತ ವಿಶ್ವವಿದ್ಯಾಲಯವನ್ನು ಆಯ್ಕೆ ಮಾಡಿಕೊಳ್ಳಬಹುದು. ಈ ಪದವಿ ಪ್ರವೇಶಕ್ಕೆ ಪಿ.ಯು.ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರೆ ಸಾಕು.

ಗಿರೀಶ್‌ಗೌಡ
ಸ್ನಾತಕೋತ್ತರ ಪದವಿ ಎಂ.ಸಿ.ಎ. ಎರಡು ವರ್ಷದ ಕೋರ್ಸಾಗಿ ಬದಲಾಗಿದೆ ಎನ್ನುತ್ತಿದ್ದಾರೆ. ಇದು ನಿಜವೇ? 

–ಸ್ನಾತಕೋತ್ತರ ಎಂ.ಸಿ.ಎ ಎರಡು ವರ್ಷದ ಕಲಿಕೆಯಾಗಿ ಬದಲಾಗಿರುವುದು ನಿಜ. ಇದಕ್ಕೆ ಸಂಬಂಧಪಟ್ಟ ಹೆಚ್ಚಿನ ವಿವರಗಳು ಯಾವುದೇ ವಿಶ್ವವಿದ್ಯಾಲಯದ ಅಂತರ್ಜಾಲದಲ್ಲಿ ಪಡೆಯಬಹುದು.

ದರ್ಶನ್, ಬೆಂಗಳೂರು
ನಾನು ದ್ವಿತೀಯ ಪಿ.ಯು. (ಪಿ.ಸಿ.ಎಂ.ಬಿ) ಓದುತ್ತಿದ್ದೇನೆ. ಪ್ರಥಮ ಪಿ.ಯು.ನಲ್ಲಿ ಉತ್ತಮ ಅಂಕಗಳೇನೂ ಲಭಿಸಿಲ್ಲ. ನನಗೆ ಮುಂದೆ ವೈದ್ಯನಾಗಬೇಕೆಂಬ ಹಂಬಲ ಇದೆ. ಹಾಗಾಗಿ ಎಂ.ಬಿ.ಬಿ.ಎಸ್. ಓದಬೇಕೆಂಬ ಆಭಿಲಾಷೆ ಇದೆ. ಮಾಹಿತಿ ಕೊಡಿ.

–ವೈದ್ಯಕೀಯ ಪದವಿಗೆ ಪ್ರವೇಶ ಪಡೆಯಲು ನೀವು ಸಿ.ಇ.ಟಿ ಪರೀಕ್ಷೆಯಲ್ಲಿ ಪಿ.ಸಿ.ಬಿ ವಿಷಯಗಳಲ್ಲಿ ಪಡೆಯುವ ಅಂಕಗಳ ಆಧಾರದ ಮೇಲೆ ಗಳಿಸುವ ಜೇಷ್ಠತೆ (ರ್‌್ಯಾಂಕ್) ಆಧಾರವಾಗಿರುತ್ತದೆ. ನೀವು ಪ್ರಥಮ ಮತ್ತು ದ್ವಿತೀಯ ವಾರ್ಷಿಕ ಪರೀಕ್ಷೆಯಲ್ಲಿ ಪಡೆಯುವ ಅಂಕಗಳಿಗೆ ಪ್ರಾಮುಖ್ಯತೆ ಇಲ್ಲ. ಆದ್ದರಿಂದ ನೀವು ಸಿ.ಇ.ಟಿ ಪರೀಕ್ಷೆಗೆ ಈ ವಿಷಯಗಳಲ್ಲಿ ಸಿದ್ಧತೆಯನ್ನು ಈಗಿನಿಂದಲೇ ಪ್ರಾರಂಭಿಸಿ. ಸಿ.ಇ.ಟಿ ಪರೀಕ್ಷೆಯಲ್ಲಿ ಪ್ರಥಮ (25%) ಮತ್ತು ದ್ವಿತೀಯ (75%) ವರ್ಷದಲ್ಲಿ ಇರುವ ಎಲ್ಲಾ ಪಾಠಗಳಿಂದಲೂ ಪ್ರಶ್ನೆಗಳು ಇರುತ್ತವೆ.

ರಾಜೇಶ್.ಕೆ, ಬಾಗಲಕೋಟೆ
ನಾನು ಬಿ.ಎಸ್ಸಿ. ಓದುತ್ತಿದ್ದೇನೆ. ಈ ಪದವಿಯ ನಂತರ ನಾನು ಎಂ.ಬಿ.ಬಿ.ಎಸ್. ಪದವಿಗೆ ಪ್ರವೇಶ ಪಡೆದು ಓದು ಮುಂದುವರೆಸಬಹುದೇ? 

–ಬಿ.ಎಸ್ಸಿ. ಪದವಿಯ ಆಧಾರದ ಮೇಲೆ ಎಂ.ಬಿ.ಬಿ.ಎಸ್ ಪದವಿಗೆ ಪ್ರವೇಶ ಪಡೆಯಲು ಸಾಧ್ಯವಿಲ್ಲ. ಆದರೆ ಪಿ.ಯು. ಅಂಕಗಳ ಆಧಾರದ ಮೇಲೆ ಮತ್ತು ಸಿ.ಇ.ಟಿ. ಬರೆದು ಉತ್ತಮ ರ್‌್ಯಾಂಕ್ ಪಡೆದು ವೈದ್ಯಕೀಯ ಪ್ರವೇಶಕ್ಕೆ ಪ್ರಯತ್ನಿಸಬಹುದು.

ಗುಣ ಹಿರೇಮಠ
ನಾನು ಕಂಪ್ಯೂಟರ್ ವಿಜ್ಞಾನದಲ್ಲಿ ದ್ವಿತೀಯ ಬಿ.ಎಸ್ಸಿ. ಓದುತ್ತಿದ್ದೇನೆ. ಮುಂದೆ ಕಂಪ್ಯೂಟರ್ ವಿಷಯದಲ್ಲಿ ಎಂ.ಎಸ್ಸಿ. ಮಾಡಲು ಎಷ್ಟು ಅಂಕಗಳಿಸಬೇಕು?

–ಗಣಕ ಯಂತ್ರ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆಯಲು ನೀವು ಬಿ.ಎಸ್ಸಿ ಪದವಿಯ ಮೂರು ವರ್ಷದಲ್ಲಿ ಈ ವಿಷಯದಲ್ಲಿ ಪಡೆಯುವ ಅಂಕಗಳು ಮತ್ತು ವಿಶ್ವವಿದ್ಯಾಲಯವು ಈ ಪ್ರವೇಶಕ್ಕೆ ನಡೆಸುವ ಪ್ರವೇಶ ಪರೀಕ್ಷೆಯ ಅಂಕಗಳು ಆಧಾರವಾಗಿರುತ್ತವೆ. ಆದ್ದರಿಂದ ಬಿ.ಎಸ್ಸಿ ಪದವಿಯ ಅಂಕಗಳನ್ನಷ್ಟೆ ಆಧಾರವಾಗಿಟ್ಟು ಪ್ರವೇಶ ದೊರೆಯುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT