`ಶ್ರದ್ಧಾವಾನ್ ಲಭತೇ ಜ್ಞಾನಂ' ಎಂಬುವುದು ಸರ್ವಕಾಲಕ್ಕೂ ಸಮ್ಮತವಾದ ಲೋಕೋಕ್ತಿ. ವಿದ್ಯಾರ್ಥಿಗಳಲ್ಲಿ, ಜ್ಞಾನಾಭಿಲಾಷಿಗಳಲ್ಲಿ ಶ್ರಮ ಮತ್ತು ಶ್ರದ್ಧೆ ಇದ್ದರೆ ನಿರೀಕ್ಷಿತ ಫಲಿತಾಂಶ ಸಿಗುವುದರಲ್ಲಿ ಸಂದೇಹವೇ ಇಲ್ಲ.

ಮಕ್ಕಳೇ ಓದುವ ಸಂದರ್ಭದಲ್ಲಿ ನಿಮಗಾಗಿ ಮಾಹಿತಿ:
ನೀವು ಓದುವ ಸ್ಥಳ ಸ್ವಚ್ಛವಾಗಿರಲಿ, ಎಲ್ಲೆಂದರಲ್ಲಿ ಪುಸ್ತಕ, ಪೆನ್ನು, ಪೇಪರ್‌ಗಳು ಹರಡಿಕೊಂಡಿದ್ದರೆ ಮನಸ್ಸಿಗೆ ಕಿರಿಕಿರಿ ಆಗಬಹುದು. ಓದಿನ ಕಡೆ ಗಮನಹರಿಸಲು ಸಾಧ್ಯವಾಗದೇ ಹೋಗಬಹುದು.

ಪಠ್ಯಪುಸ್ತಕದಲ್ಲಿ ಅರ್ಥವಾಗದೇ ಇರುವ ವಿಷಯಗಳನ್ನು ತಕ್ಷಣ ಗುರುಗಳಲ್ಲಿ ಕೇಳಿ ತಿಳಿದುಕೊಳ್ಳಿ. ಪರೀಕ್ಷೆ ಬರೆಯುವಾಗ ಗೊಂದಲ ಉಂಟಾಗುವುದು ಬೇಡ.

ಮೊಬೈಲ್ ಬಳಕೆ ಹಿತಮಿತವಾಗಿರಲಿ. ಓದಿನ ಮಧ್ಯೆ ಬೇಸರವಾದಾಗ ಅದರಲ್ಲೇ ಇಂಪಾದ ಹಾಡು ಕೇಳಿ. ಮನಸ್ಸು ಉಲ್ಲಾಸಗೊಳ್ಳುತ್ತದೆ.

ದೇಹವನ್ನು ಆದಷ್ಟು ತಂಪಾಗಿರಿಸಿಕೊಳ್ಳಿ. ದೇಹದಲ್ಲಿ ಉಷ್ಣ ಹೆಚ್ಚಾದರೆ ಆರೋಗ್ಯದ ಸಮಸ್ಯೆ ಆಗಬಹುದು.

ಸಾಧ್ಯವಾದಷ್ಟು ಮನೆಯ ಊಟವನ್ನೇ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ.

ಮುಖ್ಯವಾದ ವಿಷಯಗಳನ್ನು ಒಂದು ಕಾರ್ಡ್‌ಬೋರ್ಡ್‌ನಲ್ಲಿ ಬರೆದು ಯಾವಾಗಲೂ ಅದು ನಿಮಗೆ ಕಾಣುವಂತೆ ಇಟ್ಟುಕೊಳ್ಳಿ. ಕೆಲವೊಮ್ಮೆ ಚಿಕ್ಕ ಚಿಕ್ಕ ಉತ್ತರಗಳು, ಫಾರ್ಮುಲಾಗಳೂ ಮರೆತುಹೋಗಬಹುದು.

ಬರೆಯುವಾಗ ಯಾವಾಗಲೂ ಟೇಬಲ್ ಬಳಸಿ. ಸದಾ ಬಾಗುವುದರಿಂದ ತಲೆನೋವು ಕಾಣಿಸಿಕೊಳ್ಳಬಹುದು.

ಓದಿನ ಮಧ್ಯೆ ಮಧ್ಯೆ ಕಣ್ಣುಗಳಿಗೆ, ಮನಸ್ಸಿಗೆ `ವಿಶ್ರಾಂತಿ' ಕೊಡಿ. ಆಗ ಓದಿನಲ್ಲಿ ಆಸಕ್ತಿ, ಲವಲವಿಕೆ ಹೆಚ್ಚಾಗುತ್ತದೆ.

ಪೋಷಕರಿಗೆ ಒಂದು ಕಿವಿ ಮಾತು- ಮಕ್ಕಳಿಗೆ ಹೆಚ್ಚಿನ ಒತ್ತಡ ಹೇರಬೇಡಿ. ಅವರನ್ನು ಗಮನಿಸುತ್ತಲೇ ಪ್ರೋತ್ಸಾಹಿಸಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.