ಸಾಮಗ್ರಿಗಳು: ಮೋಂಬತ್ತಿ, ಬೆಂಕಿ ಪೆಟ್ಟಿಗೆ, ಚಿಮ್ಮಟ.
ವಿಧಾನ:
1) ಒಂದು ಹೊಸ ಮೋಂಬತ್ತಿಯನ್ನು ತೆಗೆದುಕೊಂಡು ಅದನ್ನು ಬೆಂಕಿಕಡ್ಡಿಯಿಂದ ಉರಿಸಿರಿ.
2) ಕನಿಷ್ಟ ಐದು ನಿಮಿಷ ಮೋಂಬತ್ತಿ ಉರಿಯುವುದನ್ನು ಸರಿಯಾಗಿ ವೀಕ್ಷಿಸಿರಿ.
3) ಐದು ನಿಮಿಷಗಳ ನಂತರ ಚಿಮ್ಮಟದ ಸಹಾಯದಿಂದ ಮೋಂಬತ್ತಿಯ ಉರಿಯುತ್ತಿರುವ ಬತ್ತಿಯ (ದಾರ) ತಳಭಾಗನ್ನು ಗಟ್ಟಿಯಾಗಿ ಚಿವುಟಿ ಹಿಡಿಯಿರಿ.

ಪ್ರಶ್ನೆ:
1) ಮೋಂಬತ್ತಿಯ ಮೇಣವನ್ನಷ್ಟೇ ತೆಗೆದುಕೊಂಡು ಅದನ್ನು ಉರಿಸಿದರೆ ಅದು ಉರಿಯುತ್ತಿದೆಯೇ? ಯಾಕೆ ?
2) ಕೇವಲ ಮೋಂಬತ್ತಿಯ ಬತ್ತಿ (ದಾರ)ಯನ್ನು ಉರಿಸಿದರೆ ಅದು ಉರಿಯುತ್ತಿದೆಯೇ? ಯಾಕೆ ?
3) ಚಿಮ್ಮಟದ ಸಹಾಯದಿಂದ ಮೋಂಬತ್ತಿಯ ‘ಬತ್ತಿ’ಯನ್ನು ಗಟ್ಟಿಯಾಗಿ ಚಿವುಟಿ ಬಿಟ್ಟಾಗ ಮೋಂಬತ್ತಿ
ಉರಿಯುತ್ತದೆಯೇ. ಯಾಕೆ ?
4) ಮೋಂಬತ್ತಿ ಉರಿಯುವ ಕ್ರಿಯೆಯನ್ನು ವಿವರಿಸಿರಿ.

ಉತ್ತರ:
1) ಮೋಂಬತ್ತಿಯ ಮೇಣವನ್ನಷ್ಟೇ ತೆಗೆದುಕೊಂಡು ಉರಿಸಿದರೆ ಅದು ಉರಿಯುವುದಿಲ್ಲ.

2) ಮೋಂಬತ್ತಿಯ ಬತ್ತಿಯನ್ನಷ್ಟೇ

ತೆಗೆದುಕೊಂಡು ಉರಿಸಿದರೆ ಅದು ಉರಿಯುವುದಿಲ್ಲ. ಅದು ಸುಟ್ಟು ಹೋಗುತ್ತದೆ.

3) ಚಿಮ್ಮಟದ ಸಹಾಯದಿಂದ ಬತ್ತಿಯನ್ನು ಹಿಚುಕಿದರೆ ಮೋಂಬತ್ತಿ ನಂದುತ್ತದೆ. ಯಾಕೆಂದರೆ ಮೋಂಬತ್ತಿ ಉರಿಯುವಾಗ ಅದು ಘನ ಮೇಣವನ್ನು ಕರಗಿಸುತ್ತದೆ. ದ್ರವ ಮೇಣವು ಬತ್ತಿಯ ಮುಖಾಂತರ ಲೋಮನಾಳ ತತ್ವದಿಂದ ಮೇಲೆ ಏರಿ ಜ್ವಾಲೆಯ ಸಂಪರ್ಕದಿಂದ ಕಾಯ್ದು ಮೇಣ ಆವಿಯಾಗಿ, ಈ ಬಿಸಿಮೇಣದ ಆವಿ ಬತ್ತಿಯ ಸುತ್ತಲೂ ಉರಿಯುತ್ತದೆ. ಉರಿಯುತ್ತಿರುವ ಬತ್ತಿಯ ತಳಭಾಗವನ್ನು ಹಿಚುಕಿದಾಗ ದ್ರವ ಮೇಣವು ಮೇಲೇರುವುದು ನಿಂತು ಜ್ವಾಲೆ ನಂದುತ್ತದೆ.

4) ಮೋಂಬತ್ತಿಯ ಬತ್ತಿಗೆ ಬೆಂಕಿ ಕಡ್ಡಿಯಿಂದ ಬೆಂಕಿ ಹಚ್ಚಿದಾಗ ಬತ್ತಿಯು ಲಗುಬಗೆಯಿಂದ ಉರಿಯುತ್ತ, ‘ಬತ್ತಿ’ಯ ಕೆಳಗೆ ಚಲಿಸುತ್ತದೆ. ಅದು ಉರಿಯುವುದು ಸ್ವಲ್ಪ ನಿಲ್ಲುತ್ತದೆ ಹಾಗೂ ಅದರ ಸುತ್ತಲೂ ಚಿಕ್ಕ ಜ್ವಾಲೆ ಕಾಣಿಸುತ್ತದೆ. ಆ ನಂತರ ಅದು ದೊಡ್ಡದಾಗಿ ಸ್ಥಿರವಾಗಿ ಉರಿಯುತ್ತದೆ. ‘ಬತ್ತಿ’ಯ ಜ್ವಾಲೆ, ಕರಗಿದ ಹಾಗೂ ಘನ ಮೇಣದ ಮಧ್ಯ ನೇರವಾದ ಸಂಪರ್ಕವಿಲ್ಲ. ಜ್ವಾಲೆ ಹಾಗೂ ಕರಗಿದ ಮೇಣದ ಮಧ್ಯ ‘ಬತ್ತಿ’ಯ ಸ್ವಲ್ಪ ಭಾಗ ಉರಿಯುತ್ತಿಲ್ಲ. ಜ್ವಾಲೆಯು ಕೆಳಮುಖವಾಗಿ ಚಲಿಸಿ ಘನ ಮತ್ತು ದ್ರವ ಮೇಣವನ್ನು ಸುಡುವುದಿಲ್ಲ. ಕರಗಿದ ಮೇಣದ ಸುತ್ತಲು ಘನ ಮೇಣವನ್ನು ಗಮನಿಸಿ. ಮೋಂಬತ್ತಿ ಜ್ವಾಲೆಯಲ್ಲಿ ವಿವಿಧ ಬಣ್ಣಗಳನ್ನು ಕಾಣುವಿರಲ್ಲವೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.