ಅಖಿಲ ಭಾರತ ಅಂತರ ಸಂಸ್ಥೆಗಳ ಟೇಬಲ್‌ ಟೆನಿಸ್‌: ಅರ್ಚನಾಗೆ ಮೂರು ಚಿನ್ನ

7

ಅಖಿಲ ಭಾರತ ಅಂತರ ಸಂಸ್ಥೆಗಳ ಟೇಬಲ್‌ ಟೆನಿಸ್‌: ಅರ್ಚನಾಗೆ ಮೂರು ಚಿನ್ನ

Published:
Updated:
Deccan Herald

ಬೆಂಗಳೂರು: ಕರ್ನಾಟಕದ ಅರ್ಚನಾ ಕಾಮತ್‌, ಕೊಯಮತ್ತೂರಿನಲ್ಲಿ ನಡೆದ ಅಖಿಲ ಭಾರತ ಅಂತರ ಸಂಸ್ಥೆಗಳ ಟೇಬಲ್‌ ಟೆನಿಸ್‌ ಚಾಂಪಿಯನ್‌ಷಿಪ್‌ನಲ್ಲಿ ಮೂರು ಚಿನ್ನ ಮತ್ತು ಒಂದು ಬೆಳ್ಳಿಯ ಪದಕಕ್ಕೆ ಕೊರಳೊಡ್ಡಿದ್ದಾರೆ.

ಪೆಟ್ರೋಲಿಯಂ ಸ್ಪೋರ್ಟ್ಸ್‌ ಪ್ರೊಮೋಷನ್‌ ಬೋರ್ಡ್‌ (ಪಿಎಸ್‌ಪಿಬಿ) ತಂಡವನ್ನು ಪ್ರತಿನಿಧಿಸಿದ್ದ ಬೆಂಗಳೂರಿನ ಅರ್ಚನಾ ಮಹಿಳೆಯರ ಡಬಲ್ಸ್‌, ಮಿಶ್ರ ಡಬಲ್ಸ್‌ ಮತ್ತು ಯೂತ್‌ ಬಾಲಕಿಯರ ತಂಡ ವಿಭಾಗಗಳಲ್ಲಿ ಚಿನ್ನದ ಸಾಧನೆ ಮಾಡಿದರು. ಮಹಿಳಾ ಸಿಂಗಲ್ಸ್‌ನಲ್ಲಿ ಅವರು ಬೆಳ್ಳಿಯ ಪದಕಕ್ಕೆ ತೃಪ್ತಿಪಟ್ಟರು.

ಯೂತ್‌ ಬಾಲಕಿಯರ ವಿಭಾಗದ ಫೈನಲ್‌ನಲ್ಲಿ ಅರ್ಚನಾ, ಪ್ರಾಪ್ತಿ ಸೇನ್‌, ಯಾಶಿನಿ ಶಿವಶಂಕರ್‌ ಮತ್ತು ಸೃಷ್ಠಿ ಹಳೆಂಗಡಿ ಅವರಿದ್ದ ತಂಡ 3–0ರಿಂದ ರೈಲ್ವೇಸ್‌ ಸ್ಪೋರ್ಟ್ಸ್‌ ಪ್ರೊಮೋಷನ್‌ ಬೋರ್ಡ್‌ (ಆರ್‌ಎಸ್‌ಪಿಬಿ) ಎದುರು ಗೆದ್ದಿತು.

ಮಹಿಳೆಯರ ಡಬಲ್ಸ್‌ ವಿಭಾಗದ ಪ್ರಶಸ್ತಿ ಸುತ್ತಿನಲ್ಲಿ ಅರ್ಚನಾ ಮತ್ತು ಮೌಮಾ ದಾಸ್‌ 3–2ರಿಂದ ಆರ್‌ಬಿಐ ತಂಡದ ಅಹಿಕಾ ಮುಖರ್ಜಿ ಮತ್ತು ಪ್ರಿಯದರ್ಶಿನಿ ದಾಸ್‌ ಅವರನ್ನು ಸೋಲಿಸಿದರು.

ಮಿಶ್ರ ಡಬಲ್ಸ್‌ ವಿಭಾಗದ ಫೈನಲ್‌ನಲ್ಲಿ ಅರ್ಚನಾ ಮತ್ತು ಮಾನವ್‌ ಟಕ್ಕರ್‌ 3–2ರಿಂದ ಪಿಎಸ್‌ಪಿಬಿಯ ರೀತ್‌ ರಿಷ್ಯಾ ಮತ್ತು ಸನಿಲ್‌ ಶೆಟ್ಟಿ ವಿರುದ್ಧ ವಿಜಯಿಯಾದರು.

ಮಹಿಳಾ ಸಿಂಗಲ್ಸ್‌ ವಿಭಾಗದ ಅಂತಿಮ ಘಟ್ಟದ ಹಣಾಹಣಿಯಲ್ಲಿ ಅರ್ಚನಾ 8–11, 6–11, 11–7, 11–3, 11–13, 11–5, 5–11ರಲ್ಲಿ ಪಿಎಸ್‌ಪಿಬಿಯ ದಿವ್ಯಾ ದೇಶಪಾಂಡೆ ಎದುರು ಸೋತರು.

ಇದಕ್ಕೂ ಮುನ್ನ ನಡೆದಿದ್ದ ಸೆಮಿಫೈನಲ್‌ನಲ್ಲಿ ಬೆಂಗಳೂರಿನ ಆಟಗಾರ್ತಿ 11–7, 11–6, 11–7, 11–9ರಲ್ಲಿ ಪಿಎಸ್‌ಪಿಬಿಯ ಪ್ರಾಪ್ತಿ ಸೇನ್‌ ಎದುರು ಗೆದ್ದಿದ್ದರು.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !