ಬುಧವಾರ, ಆಗಸ್ಟ್ 4, 2021
27 °C

ಎಮ್‌ಬಿಎಲ್‌ ಟೂರ್ನಿಯಲ್ಲಿ ಆಡುವ 31 ಬೇಸ್‌ಬಾಲ್‌ ಆಟಗಾರರಲ್ಲಿ ಕೋವಿಡ್‌ ದೃಢ

ಎಪಿ Updated:

ಅಕ್ಷರ ಗಾತ್ರ : | |

Prajavani

ನ್ಯೂಯಾರ್ಕ್‌: ಮೇಜರ್‌ ಲೀಗ್‌ ಬೇಸ್‌ಬಾಲ್‌ (ಎಮ್‌ಬಿಎಲ್‌) ಟೂರ್ನಿಯಲ್ಲಿ ಆಡುವ 31 ಆಟಗಾರರು ಹಾಗೂ ಏಳು ಸಿಬ್ಬಂದಿಯಲ್ಲಿ ಕೋವಿಡ್‌–19 ದೃಢಪಟ್ಟಿದೆ. 

ಕೊರೊನಾ ವೈರಸ್‌ ಹಾವಳಿಯ ಹಿನ್ನೆಲೆಯಲ್ಲಿ ಮಾರ್ಚ್‌ 12ರಿಂದ ಸ್ಥಗಿತಗೊಳಿಸಲಾಗಿದ್ದ ಬೇಸ್‌ಬಾಲ್‌ ತರಬೇತಿಯನ್ನು ಪುನರಾರಂಭಿಸಲಾಗಿದೆ. ಈ ಸಂದರ್ಭದಲ್ಲಿ ಆಟಗಾರರ ತಪಾಸಣೆ ನಡೆಸಲಾಗಿದ್ದು, ಶುಕ್ರವಾರ ಇದರ ಫಲಿತಾಂಶ ಬಂದಿದೆ. ಎರಡು ವಾರಗಳ ಬಳಿಕ ಅಂದರೆ ಇದೇ 23ರಿಂದ ಟೂರ್ನಿ ಆರಂಭವಾಗಬೇಕಿದೆ.

ಇದೇ ಮೊದಲ ಬಾರಿಗೆ ಟೂರ್ನಿಯನ್ನು ಕೇವಲ 60 ಪಂದ್ಯಗಳಿಗೆ ಸೀಮಿತಗೊಳಿಸಲಾಗಿದೆ.

ಆಟಗಾರರ ಮಾದರಿಯನ್ನು ಪರೀಕ್ಷೆ ನಡೆಸಿರುವ ಉತಾಹ್‌ನ ಕ್ರೀಡಾ ವೈದ್ಯಕೀಯ ಸಂಶೋಧನೆ ಹಾಗೂ ಪರೀಕ್ಷಾ ಪ್ರಯೋಗಾಲಯದ ವರದಿಯ ಪ್ರಕಾರ 30 ತಂಡಗಳ ಪೈಕಿ 19 ತಂಡಗಳ ಆಟಗಾರರಲ್ಲಿ ಸೋಂಕು ಕಾಣಿಸಿಕೊಂಡಿದೆ.

ಸೋಂಕು ದೃಢಪಟ್ಟ ಆಟಗಾರರ ಹೆಸರುಗಳನ್ನು ಎಮ್‌ಎಲ್‌ಬಿ ಅಥವಾ ಯೂನಿಯನ್‌ ಬಹಿರಂಗಪಡಿಸಿಲ್ಲ. ಆದರೆ ಕ್ಲೇವ್‌ ಲ್ಯಾಂಡ್‌ ತಂಡದ ಆಟಗಾರ ಡೆಲಿನೊ ಡಿ ಶೀಲ್ಡ್‌ ಜೂನಿಯರ್ ಅವರು‌ ತನ್ನಲ್ಲಿ ಕೋವಿಡ್‌ ಖಚಿತಪಟ್ಟಿರುವುದಾಗಿ ಹೇಳಿಕೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು