ಶನಿವಾರ, ನವೆಂಬರ್ 28, 2020
22 °C

ಸೌದಿ ಗಾಲ್ಫ್‌ ಟೂರ್ನಿಯಲ್ಲಿ ದೀಕ್ಷಾ, ತ್ವೇಷಾ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕೀಸ್‌ (ಸೌದಿ ಅರೇಬಿಯಾ): ಕರ್ನಾಟಕದ ಅದಿತಿ ಅಶೋಕ್‌ ಮತ್ತು ತ್ವೇಷಾ ಮಲಿಕ್‌ ಅವರು ಮೊದಲ ಬಾರಿ ನಡೆಯುತ್ತಿರುವ ಆರಾಮ್ಕೊ ಸೌದಿ ಲೇಡೀಸ್‌ ಅಂತರರಾಷ್ಟ್ರೀಯ ಗಾಲ್ಫ್‌ ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದಾರೆ. ಗುರುವಾರ ಇಲ್ಲಿ ಆರಂಭವಾಗಲಿರುವ ಟೂರ್ನಿಯಲ್ಲಿ ಭಾರತದ ದೀಕ್ಷಾ ದಾಗರ್‌ ಹಾಗೂ ಆಸ್ತಾ ಮದನ್‌ ಕೂಡ ಆಡಲಿದ್ದಾರೆ.

ದುಬೈನಲ್ಲಿ ಕಳೆದ ವಾರ ನಡೆದ ಟೂರ್ನಿಯಲ್ಲಿ ಅದಿತಿ ಆರನೇ ಸ್ಥಾನಗಳಿಸಿದ್ದರೆ, ತ್ವೇಷಾ 27ನೇ ಸ್ಥಾನ ಗಳಿಸಿದ್ದರು. ಸೌದಿಯಲ್ಲಿ ನಡೆಯುವ ಟೂರ್ನಿಗೆ ಇರುವ ಒಟ್ಟು ಬಹುಮಾನ ಮೊತ್ತ ₹ 8.50 ಕೋಟಿ.

ಮೊರೊಕ್ಕೊದ ಮಹಾ ಹದ್ದಿಯು ಅವರು ಸೌದಿ ಅರೇಬಿಯಾ ಟೂರ್ನಿಯೊಂದರಲ್ಲಿ ಪಾಲ್ಗೊಳ್ಳಲಿರುವ ಮೊದಲ ಅರೇಬಿಕ್‌ ಮಹಿಳೆಯಾಗಿ ಇಲ್ಲಿ ಇತಿಹಾಸ ಬರೆಯಲಿದ್ದಾರೆ.

ಅದಿತಿ ಅವರು ಟೂರ್ನಿಯ ಆರಂಭದಲ್ಲಿ ಸ್ಪೇನ್‌ನ ನೂರಿಯಾ ಇಟುರಿಯೊಜ್‌ ಹಾಗೂ ಜರ್ಮನಿಯ ಆಲಿವಿಯಾ ಕೋವನ್‌ ಅವರ ಜೊತೆ ಪೈಪೋಟಿ ನಡೆಸಲಿದ್ದಾರೆ. ಆಸ್ತಾ ಅವರು ಅಸ್ಟ್ರಿಯದ ಸಾರಾ ಸೋಬರ್‌ ಹಾಗೂ ಸ್ವೀಡನ್‌ನ ಇಸಾಬೆಲ್ಲಾ ಡೀಲರ್ಟ್‌ ಅವರು ಇರುವ ತಂಡದಲ್ಲಿ ಆಡಲಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು