ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲೊಬ್ರೆಗಟ್‌ ಓಪನ್‌ ಟೂರ್ನಿ: ಆದಿತ್ಯ ಮಿತ್ತಲ್‌ ಭಾರತದ 77ನೇ ಜಿಎಂ

Last Updated 6 ಡಿಸೆಂಬರ್ 2022, 14:20 IST
ಅಕ್ಷರ ಗಾತ್ರ

ಚೆನ್ನೈ: ಮುಂಬೈನ ಆದಿತ್ಯ ಮಿತ್ತಲ್‌ ಅವರು ಭಾರತದ 77ನೇ ಚೆಸ್‌ ಗ್ರ್ಯಾಂಡ್‌ಮಾಸ್ಟರ್‌ ಎನಿಸಿಕೊಂಡರು. 16 ವರ್ಷದ ಅವರು ಸ್ಪೇನ್‌ನಲ್ಲಿ ನಡೆಯುತ್ತಿರುವ ಎಲೊಬ್ರೆಗಟ್‌ ಓಪನ್‌ ಟೂರ್ನಿಯ ವೇಳೆ ಈ ಸಾಧನೆ ಮಾಡಿದರು.

ಮೂರು ಜಿಂಎಂ ನಾರ್ಮ್‌ಗಳನ್ನು ಪಡೆದಿದ್ದ ಆದಿತ್ಯ, ಎಲೊಬ್ರೆಗಟ್‌ ಟೂರ್ನಿಯ ಆರನೇ ಸುತ್ತಿನ ಬಳಿಕ 2,500 ಎಲೊ ಪಾಯಿಂಟ್ಸ್‌ ಗಡಿ ತಲುಪಲು ಯಶಸ್ವಿಯಾದರು. ಆರನೇ ಸುತ್ತಿನಲ್ಲಿ ಅವರು ಸ್ಪೇನ್‌ನ ಅಗ್ರ ರ‍್ಯಾಂಕ್‌ನ ಆಟಗಾರ ಫ್ರಾನ್ಸಿಸ್ಕೊ ವಲೆಜೊ ಜತೆ ಡ್ರಾ ಸಾಧಿಸಿದರು.

ಚೆಸ್‌ನಲ್ಲಿ ಗ್ರ್ಯಾಂಡ್‌ಮಾಸ್ಟರ್‌ ಪಟ್ಟ ಲಭಿಸಬೇಕಾದರೆ, ಮೂರು ಜಿಎಂ ನಾರ್ಮ್‌ಗಳನ್ನು ಪಡೆಯುವ ಜತೆಯಲ್ಲೇ 2,500 ಎಲೊ ಪಾಯಿಂಟ್ಸ್‌ ಹೊಂದಬೇಕು.

ಮಿತ್ತಲ್‌ ತಮ್ಮ ಚೊಚ್ಚಲ ಜಿಎಂ ನಾರ್ಮ್‌ಅನ್ನು 2021ರ ಸರ್ಬಿಯಾ ಮಾಸ್ಟರ್ಸ್‌ ಟೂರ್ನಿಯ ವೇಳೆ ಗಳಿಸಿದ್ದರು. 2021ರ ಎಲೊಬ್ರೆಗಟ್‌ ಓಪನ್‌ ಟೂರ್ನಿಯಲ್ಲಿ ಎರಡನೇ ಜಿಎಂ ನಾರ್ಮ್‌ ಹಾಗೂ 2022ರ ಸರ್ಬಿಯಾ ಮಾಸ್ಟರ್ಸ್‌ನಲ್ಲಿ ಮೂರನೇ ಜಿಎಂ ನಾರ್ಮ್‌ ಪಡೆದುಕೊಂಡಿದ್ದರು.

ಮಿತ್ತಲ್‌ ಅವರು ಭರತ್‌ ಸುಬ್ರಮಣಿಯಂ, ರಾಹುಲ್‌ ಶ್ರೀವಾಸ್ತವ್, ವಿ. ಪ್ರಣವ್‌ ಮತ್ತು ಪ್ರಣವ್‌ ಆನಂದ್‌ ಬಳಿಕ 2022ರ ಸಾಲಿನಲ್ಲಿ ಗ್ರ್ಯಾಂಡ್‌ಮಾಸ್ಟರ್‌ ಪಟ್ಟ ಪಡೆದುಕೊಂಡ ಭಾರತದ ಐದನೇ ಚೆಸ್‌ಪಟು ಎನಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT