ಶನಿವಾರ, ಸೆಪ್ಟೆಂಬರ್ 19, 2020
23 °C

ಗಾಲ್ಫ್: ಕ್ವಾರ್ಟರ್ ಫೈನಲ್‌ಗೆ ಅಮನ್ ಗುಪ್ತಾ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಆರೆಗಾನ್ (ಅಮೆರಿಕ): ತಮ್ಮ ಅಮೋಘ ಪ್ರದರ್ಶನವನ್ನು ಮುಂದುವರಿಸಿರುವ ಅಮನ್ ಗುಪ್ತಾ ಅವರು ಅಮೆರಿಕ ವೃತ್ತಿಪರ ಗಾಲ್ಫ್‌ನಲ್ಲಿ ಶುಕ್ರವಾರದ ಎರಡೂ ಪಂದ್ಯಗಳನ್ನು ಗೆದ್ದು ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇರಿಸಿದರು. 21 ವರ್ಷದ ಅಮನ್ ದಿನದ ತಮ್ಮ ಮೊದಲ ಪಂದ್ಯದಲ್ಲಿ ಜೊನಾಥನ್ ಯಾವುನ್ ಮತ್ತು 16ರ ಸುತ್ತಿನ ಪಂದ್ಯದಲ್ಲಿ ಸ್ಯಾಮ್ ಬೆನೆಟ್ ಅವರನ್ನು ಮಣಿಸಿದರು.

2017ರಲ್ಲಿ ನಡೆದಿದ್ದ ಅಮೆರಿಕ ಜೂನಿಯರ್ ಅಮೆಚೂರ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದ ಅವರು ಕಳೆದ ಬಾರಿ ಯುಎಸ್ ಅಮೆಚೂರ್‌ನಲ್ಲಿ ಕಣಕ್ಕೆ ಇಳಿದಿದ್ದರು. ಈ ಬಾರಿ ಎಂಟರ ಘಟ್ಟದ ಪಂದ್ಯದಲ್ಲಿ ಅವರು 43ನೇ ಕ್ರಮಾಂಕದ ಮೈಕೆಲ್ ತೊರ್ಬೊನ್ಸೆನ್ ಅವರನ್ನು ಎದುರಿಸುವರು. 18 ವರ್ಷದ ಮೈಕೆಲ್ ಕಳೆದ ಬಾರಿ ಪೆಬ್ಲೆ ಬೀಚ್ ಟೂರ್ನಿಯಲ್ಲಿ ಉತ್ತಮ ಸಾಮರ್ಥ್ಯ ತೋರಿ ಅಮೆರಿಕ ಓಪನ್‌ಗೆ ಪ್ರವೇಶ ಪಡೆದಿದ್ದರು. ಈ ಮೂಲಕ ಎರಡನೇ ವಿಶ್ವಯುದ್ಧದ ನಂತರ ಅಮೆರಿಕ ಓಪನ್‌ಗೆ ಪ್ರವೇಶಿಸಿದ ಅತಿ ಕಿರಿಯ ಆಟಗಾರ ಎನಿಸಿದ್ದರು.

ಈ ಟೂರ್ನಿಯಲ್ಲೂ ಗೆದ್ದರೆ ಅವರು ಮತ್ತೊಂದು ದಾಖಲೆಯನ್ನು ತಮ್ಮದಾಗಿಸಿಕೊಳ್ಳಲಿದ್ದಾರೆ. ಟೈಗರ್ ವುಡ್ ನಂತರ ಯು.ಎಸ್‌.ಜೂನಿಯರ್ ಮತ್ತು ಯು.ಎಸ್‌ ಅಮೆಚೂರ್ ಟೂರ್ನಿಗಳ ಪ್ರಶಸ್ತಿ ಗೆದ್ದ ಎರಡನೇ ಆಟಗಾರ ಎನಿಸಲಿದ್ದಾರೆ.

‘ಇಂದಿನ ಸಾಧನೆ ಖುಷಿ ನೀಡಿದೆ. ನಾಳೆ ಪ್ರಮುಖ ಪಂದ್ಯವನ್ನು ಆಡಲಿದ್ದೇನೆ. ಅದಕ್ಕಾಗಿ ಮಾನಸಿಕವಾಗಿ ಸಜ್ಜಾಗುತ್ತಿದ್ದೇನೆ. ಸಾಮರ್ಥ್ಯವನ್ನು ಸಂಪೂರ್ಣವಾಗಿ ಹೊರಗೆಡವಲು ಸಾಧ್ಯವಾದರೆ ನಾಳಿನ ಪಂದ್ಯದಲ್ಲಿ ಗೆಲುವು ಖಚಿತ. ಒಕ್ಲಹೋಮಾ ವಿಶ್ವವಿದ್ಯಾಲಯದ ಕೋಚ್ ಅಲನ್ ಬ್ರಾಟನ್ ನನಗೆ ತರಬೇತಿ ನೀಡುತ್ತಿದ್ದು ಅತ್ಯುತ್ತಮ ಸಲಹೆಗಳನ್ನು ನೀಡಿದ್ದಾರೆ’ ಎಂದು ವಿಶ್ವ ಕ್ರಮಾಂಕದಲ್ಲಿ 500ನೇ ಸ್ಥಾನದಲ್ಲಿರುವ ಅಮನ್ ಗುಪ್ತಾ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು