ಶುಕ್ರವಾರ, ನವೆಂಬರ್ 22, 2019
26 °C

ಬ್ಯಾಸ್ಕೆಟ್‌ಬಾಲ್‌ ವಿಶ್ವಕಪ್‌: ಅಮೆರಿಕಕ್ಕೆ ಏಳನೇ ಸ್ಥಾನ

Published:
Updated:

ಬೀಜಿಂಗ್ : ಪೋಲೆಂಡ್‌ ತಂಡವನ್ನು 87–74ರಲ್ಲಿ ಮಣಿಸಿದ ಅಮೆರಿಕ, ವಿಶ್ವಕಪ್ ಬ್ಯಾಸ್ಕೆಟ್‌ಬಾಲ್ ಟೂರ್ನಿಯಲ್ಲಿ ಏಳನೇ ಸ್ಥಾನ ಗಳಿಸಿತು. ಇದು ವಿಶ್ವಕಪ್ ಇತಿಹಾಸದಲ್ಲೇ ಅಮೆರಿಕ ತಂಡದ ಅತ್ಯಂತ ಕಳಪೆ ಪ್ರದರ್ಶನವಾಗಿದೆ.

7 ಮತ್ತು 8ನೇ ಸ್ಥಾನ ನಿರ್ಧರಿಸುವ ಪಂದ್ಯದ ಆರಂಭದಿಂದಲೇ ಅಮೋಘ ಆಟವಾಡಿದ ಅಮೆರಿಕ ಮೊದಲಾರ್ಧದಲ್ಲಿ 8 ಬಾರಿ ಮೂರು ಪಾಯಿಂಟ್‌ಗಳನ್ನು ಗಳಿಸುವುದರೊಂದಿಗೆ 17 ಪಾಯಿಂಟ್‌ಗಳ ಮುನ್ನಡೆ ಸಾಧಿಸಿತು. 

ದ್ವಿತೀಯಾರ್ಧದಲ್ಲಿ ಪೋಲೆಂಡ್ ಪ್ರತಿರೋಧ ತೋರಿದರೂ ಅಮೆರಿಕದ ಆಟಗಾರರನ್ನು ನಿಯಂತ್ರಿಸಲು ಆಗಲಿಲ್ಲ. ಕೆಂಬಾ ವಾಕರ್‌, ಜೇಸನ್ ಟಾಟುಮ್ ಮತ್ತು ಮಾರ್ಕಸ್ ಸ್ಮಾರ್ಟ್‌ ಅವರು ಅಮೆರಿಕ ಪರ ಮಿಂಚಿದರು.

ಪ್ರತಿಕ್ರಿಯಿಸಿ (+)