ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಾಟಾ ಸ್ಟೀಲ್‌ ಚೆಸ್‌: ಆನಂದ್‌ಗೆ ಮೊದಲ ಜಯ

ಅನೀಶ್‌ ಗಿರಿ ಅವರಿಗೆ ಸೋಲುಣಿಸಿದ ಇರಾನ್‌ನ ಅಲಿರೇಜಾ
Last Updated 17 ಜನವರಿ 2020, 20:00 IST
ಅಕ್ಷರ ಗಾತ್ರ

ಈಂಡ್‌ಹೊವೆನ್‌, ದಿ ನೆದರ್ಲೆಂಡ್ಸ್‌ : ಭಾರತದ ವಿಶ್ವನಾಥನ್‌ ಆನಂದ್‌, ಟಾಟಾ ಸ್ಟೀಲ್‌ ಮಾಸ್ಟರ್ಸ್ ಚೆಸ್‌ ಟೂರ್ನಿಯ ಐದನೇ ಸುತ್ತಿನಲ್ಲಿ ಶುಕ್ರವಾರ ಆಮೆರಿಕದ ಜೆಫ್ರಿ ಕ್ಸಿಯೊಂಗ್ ಅವರನ್ನು ಸೋಲಿಸಿದರು. ಇದು ಟೂರ್ನಿಯಲ್ಲಿ ಮಾಜಿ ವಿಶ್ವ ಚಾಂಪಿಯನ್‌ಗೆ ಮೊದಲ ಜಯವೆನಿಸಿತು.

‘‌ಚೆಸ್‌ ಆನ್‌ ಟೂರ್‌’ ಭಾಗವಾಗಿ ಟೂರ್ನಿಯನ್ನು ವಿಜ್ಕ್‌ ಆನ್‌ಝಿಯಿಂದ ಈಂಡ್‌ಹೊವೆನ್‌ ಫುಟ್‌ಬಾಲ್‌ ಕ್ರೀಡಾಂಗಣಕ್ಕೆ ಸ್ಥಳಾಂತರಿಸಲಾಗಿತ್ತು. ದಿನದ ಮಟ್ಟಿಗೆ ಆಗಿದ್ದ ಈ ಸ್ಥಳಾಂತರ ಆನಂದ್‌ ಅವರಿಗಂತೂ ಶುಭದಾಯಕ ಎನಿಸಿತು. ಇದಕ್ಕೆ ಮೊದಲು ಅವರು ಮೂರು ಪಂದ್ಯಗಳನ್ನು ‘ಡ್ರಾ’ ಮಾಡಿಕೊಂಡಿದ್ದು, ಒಂದನ್ನು ಸೋತಿದ್ದರು.

ಈ ಗೆಲುವಿನೊಡನೆ ಆನಂದ್‌, 2.5 ಪಾಯಿಂಟ್‌ಗಳೊಡನೆ ಆರನೇ ಸ್ಥಾನ ಹಂಚಿಕೊಂಡಿದ್ದಾರೆ. ಐದನೇ ಸುತ್ತಿನಲ್ಲಿ ಕೆಲವು ನಾವಿನ್ಯದ ನಡೆಗಳನ್ನು ಇಟ್ಟ ಆನಂದ್‌ ಆಕ್ರಮಕಾರಿಯಂತೆ ಕಂಡರು.

ಇರಾನ್‌ನ ಫಿರೋಜ ಆಲಿರೇಜಾದಿನದ ಅಚ್ಚರಿಯ ಫಲಿತಾಂಶವೊಂದರಲ್ಲಿ ಹಾಲೆಂಡ್‌ನ ಅನಿಶ್‌ ಗಿರಿ ಅವರನ್ನು ಸೋಲಿಸಿದರು. ಅಲಿರೇಜಾ ಈಗ 3.5 ಪಾಯಿಂಟ್ಸ್‌ ಪಡೆದಿದ್ದು ಅಮೆರಿಕದ ವೆಸ್ಲಿ ಸೊ ಜೊತೆ ಅಗ್ರಸ್ಥಾನ ಹಂಚಿಕೊಂಡಿದ್ದಾರೆ.

ತಲಾ ಮೂರು ಪಾಯಿಂಟ್ಸ್‌ ಗಳಿಸಿರುವ ವ್ಲಾಡಿಸ್ಲಾವ್‌ ಆರ್ಟೆಮೀವ್ (ರಷ್ಯಾ), ಫ್ಯಾಬಿಯಾನೊ ಕರುವಾನ (ಅಮೆರಿಕ) ಮತ್ತು ಜೋರ್ಡೆನ್‌ ವಾನ್‌ ಫೊರೀಸ್ಟ್‌ (ಹಾಲೆಂಡ್‌) ಎರಡನೇ ಸ್ಥಾನದಲ್ಲಿದ್ದಾರೆ. ರಷ್ಯದ ಡೇನಿಯಲ್‌ ಡುಬೊವ್ (2.5) ಜೊತೆ ಡ್ರಾ ಮಾಡಿಕೊಂಡ ವಿಶ್ವ ಚಾಂಪಿಯನ್‌ ಮ್ಯಾಗ್ನಸ್‌ ಕಾರ್ಲ್‌ಸನ್‌ (ನಾರ್ವೆ) ಒಟ್ಟು 2.5 ಅಂಕ ಪಡೆದಿದ್ದಾರೆ.

ಚಾಲೆಂಜರ್ಸ್‌ ವಿಭಾಗದಲ್ಲಿ ಭಾರತದ ಸೂರ್ಯಶೇಖರ ಗಂಗೂಲಿ ಐದನೇ ಸುತ್ತಿನ ನಂತರ 3.5 ಪಾಯಿಂಟ್ಸ್ ಸಂಗ್ರಹಿಸಿ ಅಗ್ರಸ್ಥಾನ ಹಂಚಿಕೊಂಡಿದ್ದಾರೆ. ಆದರೆ ಭಾರತದ ಇನ್ನೊಬ್ಬ ಆಟಗಾರ ನಿಹಾಲ್‌ ಸರೀನ್‌ (2.5), ಹಾಲೆಂಡ್‌ನ ಲ್ಯೂಕಾಸ್‌ ವಾನ್‌ ಫಾರಿಸ್ಟ್‌ (3) ಎದುರು ಸೋಲನುಭವಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT