ಚೆಸ್‌: ಆನಂದ್‌ಗೆ ಮೂರು ಪಾಯಿಂಟ್ಸ್‌

7

ಚೆಸ್‌: ಆನಂದ್‌ಗೆ ಮೂರು ಪಾಯಿಂಟ್ಸ್‌

Published:
Updated:

ಸೇಂಟ್‌ ಲೂಯಿಸ್‌: ಭಾರತದ ಗ್ರ್ಯಾಂಡ್ ಮಾಸ್ಟರ್‌ ವಿಶ್ವನಾಥನ್‌ ಆನಂದ್‌ ಅವರು ಸೇಂಟ್‌ ಲೂಯಿಸ್‌ ರ‍್ಯಾಪಿಡ್‌ ಹಾಗೂ ಬ್ಲಿಟ್ಜ್‌ ಚೆಸ್‌ ಟೂರ್ನಿಯ ಮೊದಲ ದಿನದ ಅಂತ್ಯಕ್ಕೆ ಮೂರು ಪಾಯಿಂಟ್ಸ್‌ ಗಳಿಸಿದ್ದಾರೆ. 

ಭಾನುವಾರ ನಡೆದ ಮೊದಲ ಸುತ್ತಿನಲ್ಲಿ ಅವರು ಅಮೆರಿಕದ ಹಿಕಾರು ನಕಮುರಾ ಅವರನ್ನು ಮಣಿಸಿದರು. ಆದರೆ, ಎರಡನೇ ಸುತ್ತಿನಲ್ಲಿ ಫ್ರಾನ್ಸ್‌ನ ಮ್ಯಾಕ್ಸಿಮ್‌ ವಾಚಿಯರ್‌ ಲಾಗ್ರೇವ್‌ ಅವರ ಎದುರು ಸೋತರು. ರಷ್ಯಾದ ಸರ್ಜಿ ಕರ್ಜಾಕಿನ್‌ ವಿರುದ್ಧದ ಮೂರನೇ ಸುತ್ತಿನ ಪಂದ್ಯವನ್ನು ಆನಂದ್‌ ಡ್ರಾ ಮಾಡಿಕೊಂಡರು. ಇದರೊಂದಿಗೆ ಅವರು ಮೂರು ಪಾಯಿಂಟ್ಸ್‌ ಪಡೆದರು. 

ಆಡಿದ ಮೂರು ಪಂದ್ಯಗಳನ್ನು ಗೆದ್ದ ಅಮೆರಿಕದ ಫೆಬಿಯಾನೊ ಕರುವಾನಾ ಅವರು ಆರು ಪಾಯಿಂಟ್ಸ್‌ ಗಳಿಸಿದ್ದಾರೆ. 

 

 

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !