ಮಂಗಳವಾರ, ಅಕ್ಟೋಬರ್ 26, 2021
24 °C

ವಿಶ್ವ ಕುಸ್ತಿ: ಅನ್ಶುಗೆ ಬೆಳ್ಳಿ; ಸರಿತಾಗೆ ಕಂಚು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಒಸ್ಲೊ, ನಾರ್ವೆ: ಅತ್ಯುತ್ತಮ ಸಾಮರ್ಥ್ಯ ತೋರಿದ ಭಾರತದ ಅನ್ಶು ಮಲಿಕ್ ಹಾಗೂ ಸರಿತಾ ಮೊರ್ ಅವರು ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕಗಳಿಗೆ ಮುತ್ತಿಟ್ಟಿದ್ದಾರೆ.

ಮಹಿಳೆಯರ 57 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಅನ್ಶು ಫೈನಲ್‌ನಲ್ಲಿ 1–4ರಿಂದ ಅಮೆರಿಕದ ಹೆಲೆನ್‌ ಲೂಯಿಸ್‌ ಮಾರೊಸ್ ಎದುರು ಸೋತರು.

ವಿಶ್ವ ಮಹಿಳಾ ಕುಸ್ತಿಯಲ್ಲಿ ಭಾರತಕ್ಕೆ ಬೆಳ್ಳಿ ಬಂದಿದ್ದು ಇದೇ ಮೊದಲು. ಈ ಹಿಂದೆ ಅಲ್ಕಾ ತೋಮರ್ (2006), ಗೀತಾ ಪೋಗಟ್‌ (2012), ಬಬಿತಾ ಪೋಗಟ್ (2012), ಪೂಜಾ ದಂಡಾ (2018) ಮತ್ತು ವಿನೇಶಾ ಪೋಗಟ್‌ (2019) ಕಂಚು ಗೆದ್ದುಕೊಂಡಿದ್ದರು.

59 ಕೆಜಿ ವಿಭಾಗದ ಕಂಚಿನ ಪದಕದ ಸುತ್ತಿನಲ್ಲಿ ಸರಿತಾ 8–2ರಿಂದ ಸ್ವೀಡನ್‌ನ ಸಾರಾ ಜೊಹಾನ್ನಾ ಲಿಂಡ್‌ಬರ್ಗ್‌ ಅವರನ್ನು ಚಿತ್ ಮಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು