ಶುಕ್ರವಾರ, ಜುಲೈ 1, 2022
27 °C
ಆರ್ಚರಿ ವಿಶ್ವಚಾಂಪಿಯನ್‌ಷಿಪ್ಸ್: ಎಂಟರಘಟ್ಟಕ್ಕೆ ಜ್ಯೋತಿ ಸುರೇಖಾ

ಆರ್ಚರಿ ವಿಶ್ವಚಾಂಪಿಯನ್‌ಷಿಪ್ಸ್: ಕ್ವಾರ್ಟರ್‌ಫೈನಲ್‌ಗೆ ಅಭಿಷೇಕ್‌, ಅಂಕಿತಾ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಯಾಂಕ್ಟಮ್‌, ಅಮೆರಿಕ: ಭಾರತದ ಅಂಕಿತಾ ಭಕತ್‌, ಅಭಿಷೇಕ್ ವರ್ಮಾ ಮತ್ತು ಜ್ಯೋತಿ ಸುರೇಖಾ ಅವರು ವಿಶ್ವ ಆರ್ಚರಿ ಚಾಂಪಿಯನ್‌ಷಿಪ್‌ನಲ್ಲಿ ಕ್ವಾರ್ಟರ್‌ಫೈನಲ್‌ ತಲುಪುವುದರೊಂದಿಗೆ ಪದಕಗಳ ಭರವಸೆ ಮೂಡಿಸಿದ್ದಾರೆ.

ವೈಯಕ್ತಿಕ ರಿಕರ್ವ್ ವಿಭಾಗದಲ್ಲಿ ಸ್ಪರ್ಧಿಸಿದ್ದ ಅಂಕಿತಾ ಅವರು ಪ್ರೀಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ 29-28, 28-28, 27-27, 24-29, 29-28ರಿಂದ ಕೊರಿಯಾದ ಕಾಂಗ್‌ ಚೆ ಯೂಂಗ್ ಸವಾಲು ಮೀರಿದರು. ಕೊರಿಯಾ ಆಟಗಾರ್ತಿ ವಿಶ್ವ ಕ್ರಮಾಂಕದಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಅಲ್ಲದೆ ಟೋಕಿಯೊ ಒಲಿಂಪಿಕ್ಸ್‌ನ ತಂಡ ವಿಭಾಗದಲ್ಲಿ ಅವರು ಚಿನ್ನದ ಪದಕವನ್ನೂ ಗೆದ್ದಿದ್ದರು.

ವಿಶ್ವಕಪ್ ಚಿನ್ನದ ಪದಕ ವಿಜೇತ ಅಭಿಷೇಕ್ ವರ್ಮಾ 16ರ ಘಟ್ಟದ ಹಣಾಹಣಿಯಲ್ಲಿ 29-28, 30-27, 28-29, 30-29, 28-29ರಿಂದ ಸ್ಲೊವೇಕಿಯಾದ ಜೋಸೆಫ್‌ ಬೊಸೆನ್‌ಸ್ಕಿ ಅವರನ್ನು ಪರಾಭವಗೊಳಿಸಿದರು.

ಮುಂದಿನ ಪಂದ್ಯದಲ್ಲಿ ಅಭಿಷೇಕ್ ಅವರು ವಿಶ್ವದ ಅಗ್ರ ರ‍್ಯಾಂಕಿನ, ಅಮೆರಿಕದ ಮೈಕ್‌ ಶೋಲೆಸರ್‌ ಅವರ ಸವಾಲು ಎದುರಿಸಲಿದ್ದಾರೆ.

ಅದ್ಭುತ ಸಾಮರ್ಥ್ಯ ತೋರಿದ ಜ್ಯೋತಿ, ಪ್ರೀಕ್ವಾರ್ಟರ್‌ಫೈನಲ್ ಸೆಣಸಾಟದಲ್ಲಿ ಕೊರಿಯಾದ ಚೆವಾನ್ ಸೊ ಅವರನ್ನು ಮಣಿಸಿದರು. ಭಾರತದ ಆರ್ಚರಿಪ‍ಟುವಿಗೆ 30-29, 29-29, 28-30, 29-29, 26-29ರಿಂದ ಜಯ ಒಲಿಯಿತು.

ಮುಂದಿನ ಹಣಾಹಣಿಯಲ್ಲಿ ಜ್ಯೋತಿ ಕ್ರೊವೇಷ್ಯಾದ ಅಮಂಡಾ ಮ್ಲಿನಾರಿಚ್ ಅವರನ್ನು ಎದುರಿಸುವರು. ಮ್ಲಿನಾರಿಚ್ ಅವರು 21 ವರ್ಷದೊಳಗಿನವರ ವಿಭಾಗದಲ್ಲಿ ವಿಶ್ವ ಚಾಂಪಿಯನ್ ಆಗಿದ್ದಾರೆ.

ಮಹಿಳೆಯರ ಕಾಂಪೌಂಡ್‌ ಮತ್ತು ಮಿಶ್ರ ವಿಭಾಗದಲ್ಲಿ ಈಗಾಗಲೇ ಫೈನಲ್‌ ತಲುಪಿರುವ ಭಾರತದ ಆರ್ಚರಿ ಪಟುಗಳು ಪದಕಗಳನ್ನು ಖಚಿತಪಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು