ಬುಧವಾರ, ಆಗಸ್ಟ್ 4, 2021
24 °C

ವಾಲಿಬಾಲ್‌: ಭಾರತದ ಪುರುಷರ ತಂಡಕ್ಕೆ ಸೋಲು

ಪಿಟಿಐ Updated:

ಅಕ್ಷರ ಗಾತ್ರ : | |

ಜಕಾರ್ತ: ಭಾರತದ ಪುರುಷರ ವಾಲಿಬಾಲ್‌ ತಂಡವು 11ನೇ ಸ್ಥಾನಕ್ಕೆ ನಡೆದ ಮ್ಯಾನ್ಮಾರ್‌ ವಿರುದ್ದದ ಪಂದ್ಯದಲ್ಲಿ ಸೋಲು ಅನುಭವಿಸಿದೆ. 

ಗುರುವಾರ ನಡೆದ ಪಂದ್ಯದಲ್ಲಿ ಮ್ಯಾನ್ಮಾರ್‌, 2–3 ಸೆಟ್‌ಗಳಿಂದ ಭಾರತ ತಂಡವನ್ನು ಮಣಿಸಿತು.

ಭಾರತ ತಂಡವು 21–25ರಿಂದ ಮೊದಲ ಸೆಟ್‌ನಲ್ಲಿ ನಿರಾಸೆ ಅನುಭವಿಸಿತು. ಆದರೆ, ಎರಡನೇ ಸೆಟ್‌ನಲ್ಲಿ ತಿರುಗೇಟು ನೀಡಿತು. 25–18ರಿಂದ ಗೆದ್ದಿತು. ಮೂರನೇ ಸೆಟ್‌ನಲ್ಲಿ 27–25ರಿಂದ ಮ್ಯಾನ್ಮಾರ್‌ ತಂಡವು ಭಾರತದ ಆಟಗಾರರನ್ನು ಕಟ್ಟಿಹಾಕಿತು. ನಾಲ್ಕನೇ ಸೆಟ್‌ ಅನ್ನು ಭಾರತ 25–15ರಿಂದ ತನ್ನದಾಗಿಸಿಕೊಂಡಿತು.

ಆದರೆ, ನಿರ್ಣಾಯಕವಾಗಿದ್ದ ಕೊನೆಯ ಸೆಟ್‌ನಲ್ಲಿ ಭಾರತ ಎಡವಿತು. ಇದರಲ್ಲಿ ಮ್ಯಾನ್ಮಾರ್‌, 15–13ರಿಂದ ಭಾರತವನ್ನು ಸೋಲಿಸಿತು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು