ಬುಧವಾರ, ಏಪ್ರಿಲ್ 1, 2020
19 °C

ಕುಸ್ತಿ: ಪಾಕ್ ಪೈಲ್ವಾನರಿಗೆ ವೀಸಾ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಇದೇ ಮಂಗಳವಾರದಿಂದ ಇಲ್ಲಿ ನಡೆಯಲಿರುವ ಏಷ್ಯನ್ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಪಾಕಿಸ್ತಾನ ಕುಸ್ತಿಪಟುಗಳು ಸ್ಪರ್ಧಿಸುವುದು ಖಚಿತವಾಗಿದೆ. ಆದರೆ ಕೊರೊನಾ ವೈರಸ್‌ ಸೋಂಕು ಇರುವ ಚೀನಾ ದೇಶದ ಸ್ಪರ್ಧಿಗಳು ಬರುವುದು ಸೋಮವಾರ ದೃಢವಾಗಲಿದೆ.

‘ಪಾಕಿಸ್ತಾನ ತಂಡದ ಎಲ್ಲರಿಗೂ ಶನಿವಾರ ವೀಸಾ ಮಂಜೂರಾಗಿದೆ. ಶುಕ್ರವಾರ ನಾನು ಕ್ರೀಡಾ ಸಚಿವಾಲಯದ ಕಾರ್ಯದರ್ಶಿ ರಾಧೇಶ್ಯಾಮ್ ಜುಲಾನಿಯಾ ಅವರನ್ನು ಭೇಟಿಯಾಗಿದ್ದೆ. ಅವರು ಗೃಹ ಕಾರ್ಯದರ್ಶಿಯೊಂದಿಗೆ ಚರ್ಚಿಸಿ ವೀಸಾ ಮಂಜೂರು ಮಾಡಿಸಿದ್ದಾರೆ. ಈ ವಿಷಯದಲ್ಲಿ ಭಾರತ ಒಲಿಂಪಿಕ್ ಸಂಸ್ಥೆ ಅಧ್ಯಕ್ಷ ನರೀಂದರ್ ಬಾತ್ರಾ ಕೂಡ ಪ್ರಮುಖ ಪಾತ್ರ ವಹಿಸಿದ್ದಾರೆ’ ಎಂದು ಭಾರತ ಕುಸ್ತಿ ಫೆಡರೇಷನ್ ಕಾರ್ಯದರ್ಶಿ ವಿನೋದ್ ತೋಮರ್ ತಿಳಿಸಿದ್ದಾರೆ.

ಪಾಕಿಸ್ತಾನದ ಮೊಹಮ್ಮದ್ ಬಿಲಾಲ್ (57 ಕೆ.ಜಿ), ಅಬ್ದುಲ್ ರೆಹಮಾನ್ (74 ಕೆ.ಜಿ), ತಯಬ್ ರಝಾ (97 ಕೆ.ಜಿ) ಮತ್ತು ಜಮಾನ್ ಅನ್ವರ್ (125 ಕೆ.ಜಿ.) ಅವರು ಸ್ಪರ್ಧಿಸುವರು.

ಕೊರೊನಾ ವೈರಸ್‌ ಸೋಂಕು ಪರೀಕ್ಷೆಯ ನಂತರವೇ ಚೀನಾ ತಂಡಕ್ಕೆ ವೀಸಾ ನೀಡುವ ಕುರಿತು ನಿರ್ಧಾರವಾಗಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು