ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವನಿ ಲೇಖರಾಗೆ ಶ್ರೇಷ್ಠ ಪದಾರ್ಪಣೆ ಕ್ರೀಡಾಪಟು ಗೌರವ

Last Updated 16 ಡಿಸೆಂಬರ್ 2021, 16:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಭಾರತದ ಅವನಿ ಲೇಖರಾಗೆ ‘ಶ್ರೇಷ್ಠ ಪದಾರ್ಪಣೆ ಕ್ರೀಡಾಪಟು’ ಪ್ರಶಸ್ತಿ ಗೆದ್ದಿದ್ದಾರೆ.

2021ರ ಪ್ಯಾರಾಲಿಂಪಿಕ್ ಪ್ರಶಸ್ತಿಯ ಮಹಿಳಾ ವಿಭಾಗದಲ್ಲಿ ಭಾರತದ ಶೂಟರ್ ಅವನಿ ಈ ಗೌರವ ಗಳಿಸಿದರು. ಜೈಪುರದ 20 ವರ್ಷದ ಅವನಿ ಒಂಬತ್ತು ವರ್ಷಗಳ ಹಿಂದೆ ಕಾರು ಅಪಘಾತದದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ಬೆನ್ನುಹುರಿಗೆ ಬಿದ್ದ ಪೆಟ್ಟಿನಿಂದಾಗಿ ಅಂಗವೈಕಲ್ಯ ಅನುಭವಿಸಬೇಕಾಯಿತು. ಆದರೆ ಇದನ್ನು ಸವಾಲಾಗಿ ಸ್ವೀಕರಿಸಿದ ಅವರು ಮಹಿಳೆಯರ ಶೂಟಿಂಗ್‌ನಲ್ಲಿ ಛಾಪು ಮೂಡಿಸಿದರು. ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಮಹಿಳೆಯ 10 ಮೀಟರ್ಸ್ ಏರ್ ರೈಫಲ್ ಸ್ಟ್ಯಾಂಡಿಂಗ್ ಎಸ್‌ಎಚ್‌ ಒನ್ ವಿಭಾಗದಲ್ಲಿ ಚಿನ್ನದ ಪದಕ ಜಯಿಸಿದ್ದರು.

ಇದೇ ಸಂದರ್ಭದಲ್ಲಿ ಅವರು ವಿಶ್ವದಾಖಲೆಯನ್ನೂ ನಿರ್ಮಿಸಿದ್ದರು. 50 ಮೀ ರೈಫಲ್ ತ್ರಿ ಪೊಸಿಷನ್‌ ಸ್ಟ್ಯಾಂಡಿಂಗ್‌ ಎಸ್‌ಎಚ್‌ ಒನ್ ನಲ್ಲಿ ಕಂಚು ಕೂಡ ಜಯಿಸಿದ್ದರು. ಭಾಗವಹಿಸಿದ ಮೊದಲ ಪ್ಯಾರಾಲಿಂಪಿಕ್ಸ್‌ನಲ್ಲಿೆರಡು ಪದಕ ಗೆದ್ದ ಭಾರತದ ಮೊದಲ ಮಹಿಳಾ ಅಥ್ಲೀಟ್ ಅವರಾಗಿದ್ದಾರೆ. ಈಚೆಗಷ್ಟೇ ಅವರಿಗೆ ಭಾರತ ಸರ್ಕಾರವು ಮೇಜರ್ ಧ್ಯಾನಚಂದ್ ಖೇಲ್ ರತ್ನ ಪ್ರಶಸ್ತಿ ಪ್ರದಾನ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT