ಗುರುವಾರ , ಆಗಸ್ಟ್ 11, 2022
23 °C

ಖೇಲ್‌ ರತ್ನ: ರಾಜೀವ್‌ ಗಾಂಧಿ ಬದಲು ಕ್ರೀಡಾಪಟು ಹೆಸರಿಡಲು ಬಬಿತಾ ಪೋಗಟ್‌ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರಾಷ್ಟ್ರದ ಅತ್ಯುನ್ನತ ಕ್ರೀಡಾ ಗೌರವ ಖೇಲ್‌ರತ್ನ ಪ್ರಶಸ್ತಿಗೆ ರಾಜೀವ್‌ ಗಾಂಧಿ ಅವರ ಹೆಸರು ಕೈಬಿಟ್ಟು ಕ್ರೀಡಾಪಟುವೊಬ್ಬರ ಹೆಸರಿಡಬೇಕು ಎಂದು  ಕುಸ್ತಿಪಟು ಹಾಗೂ ಭಾರತೀಯ ಜನತಾ ಪಕ್ಷದ (ಬಿಜೆಪಿ) ಸದಸ್ಯೆ ಬಬಿತಾ ಪೋಗಟ್‌ ಒತ್ತಾಯಿಸಿದ್ದಾರೆ.

ಈ ಕುರಿತು ಅವರು ಬುಧವಾರ ಹಿಂದಿಯಲ್ಲಿ ಟ್ವೀಟ್‌ ಮಾಡಿದ್ದಾರೆ. ವಿಡಿಯೊವೊಂದನ್ನೂ ಪೋಸ್ಟ್‌ ಮಾಡಿದ್ದಾರೆ. 

‘ಕ್ರೀಡೆಯಲ್ಲಿ ಸಾಧನೆ ಮಾಡಿದವರನ್ನು ಗೌರವಿಸುವ ಸಲುವಾಗಿ ಇರುವ ಪ್ರಶಸ್ತಿಗೆ ಒಲಿಂಪಿಕ್‌, ಏಷ್ಯಾ ಅಥವಾ ಕಾಮನ್‌ವೆಲ್ತ್‌ ಕೂಟಗಳಲ್ಲಿ ಹಲವು ಪದಕಗಳನ್ನು ಗೆದ್ದಿರುವ ಕ್ರೀಡಾಪಟುಗಳ ಹೆಸರೇ ಇರಬೇಕು‘ ಎಂದು ಅವರು ಪ್ರತಿಪಾದಿಸಿದ್ದಾರೆ.

‘ಮಾಜಿ ಪ್ರಧಾನಿ ಹೆಸರಿನ ಬದಲಾಗಿ ಖೇಲ್‌ರತ್ನ ಪ್ರಶಸ್ತಿಯು ಕ್ರೀಡಾಪಟುವೊಬ್ಬರ ಹೆಸರಿನಲ್ಲಿದ್ದರೆ ಅದನ್ನು ಸ್ವೀಕರಿಸಲು ಅಥ್ಲೀಟ್‌ಗಳು ಹೆಮ್ಮೆಪಡುತ್ತಾರೆ‘ ಎಂದು ಹರಿಯಾಣ ಕ್ರೀಡಾ ಇಲಾಖೆಯಲ್ಲಿ ಉಪ ನಿರ್ದೇಶಕಿಯೂ ಆಗಿರುವ ಬಬಿತಾ ಹೇಳಿದರು.

ಬಬಿತಾ ಅವರ ಸಹೋದರಿ ಕುಸ್ತಿಪಟು ವಿನೇಶಾ ಪೋಗಟ್‌ ಅವರು ಈ ಬಾರಿಯ ಖೇಲ್‌ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು