ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಡಬಲ್ಸ್‌ ತಂಡಗಳ ಶುಭಾರಂಭ

Last Updated 16 ಜುಲೈ 2019, 18:40 IST
ಅಕ್ಷರ ಗಾತ್ರ

ಜಕಾರ್ತಾ: ಭಾರತದ ಎರಡು ಡಬಲ್ಸ್‌ ತಂಡಗಳು, ಮಂಗಳವಾರ ಆರಂಭವಾದ ಇಂಡೊನೇಷ್ಯಾ ಓಪನ್‌ ಸೂಪರ್‌ 1000 ಬ್ಯಾಡ್ಮಿಂಟನ್‌ ಟೂರ್ನಿಯ ಎರಡನೇ ಸುತ್ತಿಗೆ ಮುನ್ನಡೆದವು.

ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ ಮತ್ತು ಚಿರಾಗ್‌ ಶೆಟ್ಟಿ 21–19, 18–21, 21–19 ರಿಂದ ಮಲೇಷಿಯಾದ ಗೊಹ್‌ ತ್ಸೆ ಫಿ– ನೂರ್‌ ಇಝುದ್ದೀನ್‌ ಜೋಡಿಯನ್ನು ಸೋಲಿಸಿದರು. ವಿಶ್ವ ಕ್ರಮಾಂಕದಲ್ಲಿ 20ನೇ ಸ್ಥಾನದಲ್ಲಿರುವ ಭಾರತದ ಜೋಡಿ ಕಳೆದ ಮೇ ತಿಂಗಳಲ್ಲಿ ಬ್ರೆಜಿಲ್‌ ಇಂಟರ್‌ನ್ಯಾಷನಲ್‌ ಚಾಲೆಂಜ್‌ ಗೆದ್ದುಕೊಂಡಿತ್ತು. ಇವರ ಮುಂದಿನ ಸುತ್ತಿನ ಎದುರಾಳಿ ಅಗ್ರ ಶ್ರೇಯಾಂಕದ ಮಾರ್ಕಸ್‌ ಫೆರ್ನಾಲ್ಡಿ ಗಿಡಿಯೊನ್‌– ಕೆಲ್ವಿನ್‌ ಸಂಜಯ ಸುಕಮುಲ್ಜೊ .

ಮಿಶ್ರ ಡಬಲ್ಸ್‌ನಲ್ಲಿ ಪ್ರಣವ್‌ ಜೆರಿ ಜೋಪ್ರಾ ಮತ್ತು ಎನ್‌.ಸಿಕ್ಕಿ ರೆಡ್ಡಿ 25–23, 26–21, 21–19ರಲ್ಲಿ ನೆದರ್ಲೆಂಡ್ಸ್‌ನ ರಾಬಿನ್ ತಬೆಲಿಂಗ್‌– ಸೆಲೆನಾ ಪೀಕ್‌ ವಿರುದ್ಧ 63 ನಿಮಿಷಗಳಲ್ಲಿ ಜಯಗಳಿಸಿದರು. ಈ ಜೋಡಿ ಮುಂದಿನ ಪಂದ್ಯದಲ್ಲಿ ಅಗ್ರ ಶ್ರೇಯಾಂಕದ ಝೆಂಗ್‌ ಸಿ ವೀ ಮತ್ತು ಹುವಾಂಗ್‌ ಯಾ ಕ್ವಿಯೋಂಗ್‌ (ಚೀನಾ) ಎದುರು ಆಡಲಿದೆ.

ಅಶ್ವಿನಿ ಪೊನ್ನಪ್ಪ– ಎನ್‌.ಸಿಕ್ಕಿ ರೆಡ್ಡಿ ಮಹಿಳಾ ಡಬಲ್ಸ್‌ ಮೊದಲ ಸುತ್ತಿನಲ್ಲಿ ವಿವಿಯನ್‌ ಹೂ ಮತ್ತು ಯಾಪ್‌ ಚೆಂಗ್‌ವೆನ್‌ (ಚೀನಾ) ಅವರಿಗೆ 20–22, 22–20, 20–22ರಲ್ಲಿ ಮಣಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT