ಶನಿವಾರ, ಜೂನ್ 25, 2022
25 °C

ಬಹರೇನ್ ಪ್ಯಾರಾ ಬ್ಯಾಡ್ಮಿಂಟನ್: ಭಗತ್‌ಗೆ ಚಿನ್ನ ಡಬಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಪ್ಯಾರಾಲಿಂಪಿಕ್ಸ್ ಚಾಂಪಿಯನ್ ಪ್ರಮೋದ್ ಭಗತ್ ಶನಿವಾರ ಮನಾಮದಲ್ಲಿ ನಡೆದ ಬಹರೇನ್ ಪ್ಯಾರಾ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಎರಡು ಚಿನ್ನದ ಪದಕಗಳನ್ನು ಗಳಿಸಿದರು.

ಭಗತ್ ಅವರು ಪುರುಷರ ಎಸ್‌ಎಲ್‌3 ಸಿಂಗಲ್ಸ್‌ ಫೈನಲ್‌ನಲ್ಲಿ ಡೇನೀಲ್ ಬೆಥೆಲ್  ಅವರಿಂದ ವಾಕ್‌ ಓವರ್ ಪಡೆದರು. ಇದರಿಂದಾಗಿ ನಿರಾಯಾಸವಾಗಿ ಚಿನ್ನಕ್ಕೆ ಕೊರಳೊಡ್ಡಿದರು.

ಮಿಶ್ರ ಡಬಲ್ಸ್‌ನಲ್ಲಿ ಭಗತ್ ಅವರು ಮನೀಷಾ ರಾಮದಾಸ್ ಅವರೊಂದಿಗೆ 21–14, 21–11ರಿಂದ ಥಾಯ್ಲೆಂಡ್‌ನ ಸಿರಿಪಾಂಗ್ ಟೀಮಾರಾಮ್ ಮತ್ತು ಸೇನಸುಪಾ ಸಿರಿಪಾಂಗ್ ಟೀಮಾರಮ್ ವಿರುದ್ಧ ಜಯಿಸಿದರು. 

ಭಾರತದ ತರುಣ್ ಧಿಲ್ಲೋನ್ 21–9, 21–9ರಿಂದ ಪುರುಷರ ಸಿಂಗಲ್ಸ್‌ ಎಸ್‌ಎಲ್‌ 4 ಫೈನಲ್‌ನಲ್ಲಿ ಕೊರಿಯಾದ ಶಿನ್ ಕಿಯಾಂಗ್ ವ್ಯಾನ್ ವಿರುದ್ಧ ಗೆದ್ದರು ಚಿನ್ನದ ಪದಕ ಗಳಿಸಿದರು. 

ಮಹಿಳೆಯರ ಸಿಂಗಲ್ಸ್‌ನ ಎಸ್‌ಎಲ್ 3 ವಿಭಾಗದಲ್ಲಿ ಮನದೀಪ್ ಕೌರ್ 5–21, 17–21ರಿಂದ ಹಲಿಮ್ ಯಿಲದಿಜ್ ವಿರುದ್ಧ ಸೋತರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು