ಬುಧವಾರ, ಆಗಸ್ಟ್ 21, 2019
22 °C

ಬ್ಯಾಸ್ಕೆಟ್‌ಬಾಲ್‌: ಬೀಗಲ್ಸ್‌ ಶುಭಾರಂಭ

Published:
Updated:

ಬೆಂಗಳೂರು: ಬೀಗಲ್ಸ್‌ ಬ್ಯಾಸ್ಕೆಟ್‌ಬಾಲ್‌ ಕ್ಲಬ್‌ ತಂಡದವರು ಮೇಯರ್‌ ಕಪ್‌ ರಾಜ್ಯ ಮಟ್ಟದ ಆಹ್ವಾನಿತ ಬ್ಯಾಸ್ಕೆಟ್‌ಬಾಲ್‌ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ.

ಬಸವನಗುಡಿಯ ಎಂ.ಎನ್‌.ಕೃಷ್ಣರಾವ್‌ ಪಾರ್ಕ್‌ನಲ್ಲಿ ಮಂಗಳವಾರ ನಡೆದ ಪುರುಷರ ವಿಭಾಗದ ಪಂದ್ಯದಲ್ಲಿ ಬೀಗಲ್ಸ್‌ 51–41 ಪಾಯಿಂಟ್ಸ್‌ನಿಂದ ಜೆಎಸ್‌ಸಿ ಎದುರು ಗೆದ್ದಿತು.

ಇನ್ನೊಂದು ಪಂದ್ಯದಲ್ಲಿ ಡಿವೈಇಎಸ್‌ ಬೆಂಗಳೂರು 51–39ರಲ್ಲಿ ರಾಜಮಹಲ್‌ ಕ್ಲಬ್‌ ತಂಡವನ್ನು ಮಣಿಸಿತು.

ಮಹಿಳೆಯರ ವಿಭಾಗದ ಪಂದ್ಯದಲ್ಲಿ ಬೀಗಲ್ಸ್‌ 36–16ರಲ್ಲಿ ಜೆಎಸ್‌ಸಿ ತಂಡವನ್ನು ಪರಾಭವಗೊಳಿಸಿತು.

ಬಾಲಕರ ವಿಭಾಗದ ಪಂದ್ಯಗಳಲ್ಲಿ ಬೀಗಲ್ಸ್‌ 34–17ರಲ್ಲಿ ಪಟ್ಟಾಭಿರಾಮನಗರ ಕ್ಲಬ್‌ ಎದುರೂ, ವಿವೇಕ್ಸ್‌ ಕ್ಲಬ್‌ 36–21ರಲ್ಲಿ ಕೋರಮಂಗಲ ಕ್ಲಬ್‌ ಮೇಲೂ ವಿಜಯಿಯಾದವು.

ಬಾಲಕಿಯರ ವಿಭಾಗದ ಪಂದ್ಯದಲ್ಲಿ ಮೌಂಟ್ಸ್‌ ಕ್ಲಬ್‌ 36–4ರಲ್ಲಿ ಕೋರಮಂಗಲ ಕ್ಲಬ್‌ ಎದುರು ಗೆದ್ದಿತು.

Post Comments (+)