ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೈನಲ್‌ ಪ್ರವೇಶಿಸಿದ ಲಕ್ಷಿತ್‌, ನವನೀತ್‌

ಬೆಂಗಳೂರು ಓಪನ್‌ ಸ್ಕ್ವಾಷ್‌ ಟೂರ್ನಿ
Last Updated 22 ಜನವರಿ 2019, 19:47 IST
ಅಕ್ಷರ ಗಾತ್ರ

ಬೆಂಗಳೂರು: ಬಲಿಷ್ಠ ಆಟಗಾರನ ಎದುರು ದಿಟ್ಟ ಆಟ ಆಡಿದ ರಾಜಸ್ಥಾನದ ಲಕ್ಷಿತ್‌ ಬೊಹ್ರಾ ಮತ್ತು ತಮಿಳುನಾಡಿನ ಎಸ್‌. ನವನೀತ್ ಪ್ರಭು ಅವರು ಫೈವ್‌ ಸ್ಪೋರ್ಟ್ಸ್‌ ಸೆಂಚೂರಿ ಬೆಂಗಳೂರು ಓಪನ್‌ ಸ್ಕ್ವಾಷ್‌ ಟೂರ್ನಿಯಲ್ಲಿ 17 ವರ್ಷದೊಳಗಿನವರ ಬಾಲಕರ ವಿಭಾಗದ ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿದ್ದಾರೆ.

ಮಂಗಳವಾರ ನಡೆದ ಮೊದಲ ಸೆಮಿಫೈನಲ್‌ನಲ್ಲಿ ಲಕ್ಷಿತ್‌ 11–9, 8–11, 4–11, 12–10, 12–10ರಲ್ಲಿ ಹರಿಯಾಣದ ದಿದಾರ್‌ ಜೆ.ಜೆ.ರೆಬೆಲ್ಲೊ ಅವರನ್ನು ಪರಾಭವಗೊಳಿಸಿದರು. ರೆಬೆಲ್ಲೊ ಅವರು ಟೂರ್ನಿಯಲ್ಲಿ ಅಗ್ರಶ್ರೇಯಾಂಕ ಹೊಂದಿದ್ದರು.

ಇನ್ನೊಂದು ಪಂದ್ಯದಲ್ಲಿ ನವನೀತ್‌ 11–6, 11–5, 2–11, 9–11, 11–8ರಲ್ಲಿ ಮಧ್ಯಪ್ರದೇಶದ ಎರಡನೇ ಶ್ರೇಯಾಂಕದ ಆಟಗಾರ ಆರ್ಯನ್‌ ಖಾಂಡೇಲ್‌ವಾಲಾ ಅವರನ್ನು ಮಣಿಸಿದರು.

ಪುರುಷರ ಸೆಮಿಫೈನಲ್‌ ಪಂದ್ಯಗಳಲ್ಲಿ ಗೌರವ್‌ ನಾಂಡ್ರಜೋಗ್‌ 12–10, 11–8, 11–8ರಲ್ಲಿ ರಾಹುಲ್‌ ಬೈತಾ ಎದುರೂ; ಗುಹಾನ್‌ ಸೆಂಥಿಲ್‌ ಕುಮಾರ್‌ 11–9, 12–10, 11–4ರಲ್ಲಿ ವಿಕಾಸ್‌ ಮೆಹ್ರಾ ಮೇಲೂ ವಿಜಯಿಯಾದರು.

15 ವರ್ಷದೊಳಗಿನವರ ವಿಭಾಗದ ನಾಲ್ಕರ ಘಟ್ಟದ ಹೋರಾಟಗಳಲ್ಲಿ ಏಕಮ್‌ ಸಿಂಗ್‌ 11–5, 13–11, 9–11, 11–9ರಲ್ಲಿ ರೋಹನ್‌ ಆರ್ಯ ಗೊಂಡಿ ಎದುರೂ; ಕಬೀರ್‌ ಎಂ.ಡಿ.ರೆಬೆಲ್ಲೊ 11–9, 7–11, 11–2, 6–11, 11–8ರಲ್ಲಿ ಶರಣ್‌ ವಿರುದ್ಧವೂ ಗೆದ್ದರು.

13 ವರ್ಷದೊಳಗಿನವರ ವಿಭಾಗದ ಸೆಮಿಫೈನಲ್‌ ಪಂದ್ಯಗಳಲ್ಲಿ ಕೆ.ಎಸ್‌.ಅರಿಹಂತ್‌ 11–4, 11–5, 12–10ರಲ್ಲಿ ಆದಿತ್ಯ ಚಂದಾನಿ ಮೇಲೂ; ಅಯಾನ್‌ ವಜಿರಾಲಿ 11–9, 7–11, 11–9, 11–6ರಲ್ಲಿ ಅವಲೋಕಿತ್‌ ಸಿಂಗ್‌ ಎದುರೂ ವಿಜಯಿಯಾದರು.

11 ವರ್ಷದೊಳಗಿನವರ ವಿಭಾಗದ ನಾಲ್ಕರ ಘಟ್ಟದ ಪೈಪೋಟಿಗಳಲ್ಲಿ ಕರ್ನಾಟಕದ ರಾಹುಲ್‌ ಸಂಜಯ್‌ ಬಾಲಕೃಷ್ಣನ್‌ 11–6, 11–8, 11–3ರಲ್ಲಿ ಅಯಾನ್‌ ಕುಚಲ್‌ ಮೇಲೂ, ಆರ್ಯವೀರ್‌ ದಿವಾನ್‌ 9–11, 11–7, 11–8, 13–11ರಲ್ಲಿ ದರ್ಶಿಲ್‌ ಪರಸ್‌ ರಾಮ್‌ಪುರಿಯಾ ವಿರುದ್ಧವೂ ಗೆದ್ದರು.

ಫೈನಲ್‌ಗೆ ಆರಾಧನ: ಮಹಿಳಾ ವಿಭಾಗದಲ್ಲಿ ತಮಿಳುನಾಡಿನ ಆರಾಧನ ಕಸ್ತೂರಿರಾಜ್‌ ಫೈನಲ್‌ ಪ್ರವೇಶಿಸಿದರು.

ಸೆಮಿಫೈನಲ್‌ನಲ್ಲಿ ಆರಾಧನ 11–2, 11–2, 11–4ರಲ್ಲಿ ಕರ್ನಾಟಕದ ಸಲೋಮಿ ಜಯಭಾನು ಅವರನ್ನು ಮಣಿಸಿದರು.

ಇನ್ನೊಂದು ಪಂದ್ಯದಲ್ಲಿ ತಮಿಳುನಾಡಿನ ಲಕ್ಷ್ಯ ರಾಘವೇಂದ್ರನ್‌ 11–6, 11–6, 11–4ರಲ್ಲಿ ಕರ್ನಾಟಕದ ಮೆಖಾಲ ಶ್ರೀವಾಸ್ತವ ಅವರನ್ನು ಸೋಲಿಸಿದರು.

17 ವರ್ಷದೊಳಗಿನವರ ಸೆಮಿಫೈನಲ್‌ನಲ್ಲಿ ಮೇಘಾ ಭಾಟಿಯಾ 10–12, 11–6, 11–6, 11–6ರಲ್ಲಿ ಉದಿತಿ ಮಿಶ್ರಾ ಎದುರೂ; ಅವನಿ ನಗರ್‌ 3–11, 11–9, 14–12, 11–3ರಲ್ಲಿ ಆರ್ಯ ಓಗಲೆ ಮೇಲೂ ಜಯಿಸಿದರು.

15 ವರ್ಷದೊಳಗಿನವರ ವಿಭಾಗದ ಸೆಮಿಫೈನಲ್‌ನಲ್ಲಿ ಸಾನಿಯಾ ಜಗ್ಗಿ 8–11, 11–9, 11–4, 7–11, 12–10ರಲ್ಲಿ ಶಮೀನಾ ರಿಯಾಜ್‌ ಮೇಲೂ; ಆರ್‌.ಪೂಜಾ ಆರತಿ 11–5, 7–11, 11–2, 11–6ರಲ್ಲಿ ಅಕ್ಷಯ ಶ್ರೀ ವಿರುದ್ಧವೂ ಗೆದ್ದರು.

13 ವರ್ಷದೊಳಗಿನವರ ನಾಲ್ಕರ ಘಟ್ಟದ ಪೈಪೋಟಿಗಳಲ್ಲಿ ಖುಷ್ಬೂ 7–11, 8–11, 11–4, 12–10, 11–4ರಲ್ಲಿ ಇಪ್ಸಾ ಮಿಶ್ರಾ ಮೇಲೂ, ಅನಾಹತ್‌ ಸಿಂಗ್‌ 11–7, 11–7, 11–7ರಲ್ಲಿ ನಂದಿನಿ ಜೈನ್‌ ವಿರುದ್ಧವೂ ವಿಜಯಿಯಾದರು.

11 ವರ್ಷದೊಳಗಿನವರ ವಿಭಾಗದ ಸೆಮಿಫೈನಲ್‌ ಪಂದ್ಯಗಳಲ್ಲಿ ಪಿಯಾ ಸಿಂಗ್‌ 7–11, 11–7, 11–5, 11–8ರಲ್ಲಿ ವ್ಯೋಮಿಕಾ ಖಂಡೇವಾಲ್‌ ಎದುರೂ, ಅನಿಕಾ ದುಬೇ 2–11, 4–11, 12–10, 11–4, 11–6ರಲ್ಲಿ ಅನನ್ಯ ನಾರಾಯಣನ್‌ ಮೇಲೂ ಗೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT