ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿನ್ನದ ಮೇಲೆ ಅಥ್ಲೀಟ್‌ಗಳ ಕಣ್ಣು

14ನೇ ಆವೃತ್ತಿಯ ಬೆಂಗಳೂರು ವಿಶ್ವ 10ಕೆ ಇಂದು
Last Updated 14 ಮೇ 2022, 12:39 IST
ಅಕ್ಷರ ಗಾತ್ರ

ಬೆಂಗಳೂರು: ಎರಡು ವರ್ಷಗಳ ‘ಕೋವಿಡ್‌ ಬ್ರೇಕ್‌‘ ನಂತರ ಉದ್ಯಾನನಗರಿಗೆ ‘ಮ್ಯಾರಥ್ಯಾನ್ ಹಬ್ಬ‘ ಮತ್ತೆ ಮರಳಿದೆ. ಕಂಠೀರವ ಕ್ರೀಡಾಂಗಣದ ಹೊಸ ಸಿಂಥೆಟಿಕ್‌ ಟ್ರ್ಯಾಕ್‌ನಲ್ಲಿ ವಿಶ್ವ 10ಕೆ ಕಲರವ ಭಾನುವಾರ ಕೇಳಿಸಲಿದೆ.

ಟಾಟಾ ಕನ್ಸಲ್ಟನ್ಸಿ ಸರ್ವಿಸಸ್‌ ಪ್ರಾಯೋಜಕತ್ವದಲ್ಲಿ ನಡೆಯಲಿರುವ 10 ಕಿ.ಮೀ, 5 ಕಿ.ಮೀ. ವಿಭಾಗದ ಓಟಗಳಿಗೆ ಪ್ರಪಂಚದ ಪ್ರಮುಖ ದೂರ ಅಂತರದ ಅಥ್ಲೀಟ್‌ಗಳುಸಾಕ್ಷಿಯಾಗಲಿದ್ದಾರೆ.

ಎಲ್ಲ ವಿಭಾಗಗಳ ಸ್ಪರ್ಧೆಗಳಿಗೆ 19 ಸಾವಿರಕ್ಕಿಂತ ಹೆಚ್ಚಿನ ಸ್ಪರ್ಧಿಗಳು ನೋಂದಾಯಿಸಿಕೊಂಡಿದ್ದಾರೆ.

2019ರಲ್ಲಿ ಕೊನೆಯ ಬಾರಿ ಸ್ಪರ್ಧೆ ನಡೆದಿತ್ತು. ಕೋವಿಡ್‌ ಕಾರಣದಿಂದಾಗಿ ಎರಡು ವರ್ಷ (2020 ಮತ್ತು 2021) ಆನ್‌ಲೈನ್ ಮೂಲಕ ನೋಂದಾಯಿಸಿಕೊಂಡ ಸ್ಪರ್ಧಿಗಳು ತಾವಿದ್ದ ಸ್ಥಳದಿಂದಲೇ ಪಾಲ್ಗೊಂಡಿದ್ದರು.

ಬೆಂಗಳೂರು 10ಕೆಹಾಲಿ ಪುರುಷರ ವಿಭಾಗದ ಚಾಂಪಿಯನ್‌ ಇಥಿಯೋಪಿಯಾದ ಅಂಡಮಾಕ್‌ ಬೆಲಿಹು ಈ ಬಾರಿಯೂ ಚಿನ್ನದ ಪದಕ ಜಯಿಸುವ ಪ್ರಮುಖ ಸ್ಪರ್ಧಿ ಎನಿಸಿದ್ದಾರೆ. ದೆಹಲಿ ಹಾಫ್‌ ಮ್ಯಾರಥಾನ್‌ಅನ್ನು ಎರಡು ಬಾರಿ ಜಯಿಸಿರುವ ಅವರಿಗೆ ತಮ್ಮದೇ ದೇಶದ ಮುಖ್ತಾರ್ ಇದ್ರಿಸ್‌ ಪ್ರಮುಖ ಸವಾಲಾಗುವ ನಿರೀಕ್ಷೆಯಿದೆ. 2017 ಮತ್ತು 2019ರ ವಿಶ್ವ ಚಾಂಪಿಯನ್‌ಷಿಪ್‌ನ 5000 ಮೀಟರ್ಸ್ ವಿಭಾಗದಲ್ಲಿ ಪ್ರಶಸ್ತಿ ಹಿರಿಮೆ ಅವರದು. ಕೀನ್ಯಾದ ಕಿಬಿವೊಟ್‌ ಕ್ಯಾಂಡಿ ಇವರಿಬ್ಬರನ್ನು ಮೀರಿಸುವ ಛಲದಲ್ಲಿದ್ದಾರೆ.

ಕೆನ್ಯಾದ ಹೆಲೆನ್ ಒಬಿರಿ ಮತ್ತು ಇರೇನ್ ಚೆಪ್ಟಾಯ್‌ ಮಹಿಳಾ ವಿಭಾಗದಲ್ಲಿ ಚಿನ್ನದ ಪದಕದ ಮೇಲೆ ಕಣ್ಣಿಟ್ಟಿದ್ದಾರೆ.

ಭಾರತದ ಎಲೀಟ್‌ ಪುರುಷರ ವಿಭಾಗದಲ್ಲಿ ಶ್ರೀನು ಭುಗಾತಾ, ಕರ್ನಾಟಕದ ಎ.ಬಿ. ಬೆಳ್ಳಿಯಪ್ಪ ಮತ್ತು ಕಾರ್ತಿಕ್‌ಕುಮಾರ್‌ ಪ್ರಮುಖ ಸ್ಪರ್ಧಿಗಳು ಎನಿಸಿದ್ದಾರೆ. ಮಹಿಳೆಯರ ವಿಭಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT