ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಕ್ಸಿಂಗ್‌: ಸೆಮಿಗೆ ಸತೀಶ್‌ ಕುಮಾರ್‌

Last Updated 24 ಫೆಬ್ರುವರಿ 2019, 17:29 IST
ಅಕ್ಷರ ಗಾತ್ರ

ನವದೆಹಲಿ: ನಿಖರ ಮತ್ತು ವೇಗದ ಪಂಚ್‌ಗಳ ಮೂಲಕ ಎದುರಾಳಿಯನ್ನು ಕಂಗೆಡಿಸಿದ ಭಾರತದ ಸತೀಶ್‌ ಕುಮಾರ್‌, ಇರಾನ್‌ನ ಚಾಬಹರ್‌ನಲ್ಲಿ ನಡೆಯುತ್ತಿರುವ ಮ್ಯಾಕ್ರನ್‌ ಕಪ್‌ ಬಾಕ್ಸಿಂಗ್‌ ಟೂರ್ನಿಯಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದಾರೆ.

ಭಾನುವಾರ ನಡೆದ ಪುರುಷರ +91 ಕೆ.ಜಿ.ವಿಭಾಗದ ಕ್ವಾರ್ಟರ್‌ ಫೈನಲ್‌ ಹಣಾಹಣಿಯಲ್ಲಿ ಸತೀಶ್‌ 5–0 ಪಾಯಿಂಟ್ಸ್‌ನಿಂದ ತುರ್ಕಮೆನಿಸ್ತಾನದ ಬೇಕಿ ಟಾಯ್‌ಚೀವ್‌ ಅವರನ್ನು ಮಣಿಸಿದರು.

ಏಷ್ಯನ್‌ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದ ಸಾಧನೆ ಮಾಡಿರುವ ಸತೀಶ್‌, ಮುಂದಿನ ಸುತ್ತಿನಲ್ಲಿ ಎಮನ್‌ ರಂಜಾನ್‌ ಎದುರು ಸೆಣಸಲಿದ್ದಾರೆ.

75 ಕೆ.ಜಿ. ವಿಭಾಗದಲ್ಲಿ ಕಣದಲ್ಲಿರುವ ಮಂಜೀತ್‌ ಸಿಂಗ್‌ ಪಂಗಲ್‌ ಕೂಡಾ ನಾಲ್ಕರ ಘಟ್ಟಕ್ಕೆ ಲಗ್ಗೆ ಇಟ್ಟರು.ಕ್ವಾರ್ಟರ್‌ ಫೈನಲ್‌ನಲ್ಲಿ ಮಂಜೀತ್‌ 5–0ರಲ್ಲಿ ಇರಾಕ್‌ನ ಅಮೀರ್‌ ಮೊಹಸೇನ್‌ ಅವರನ್ನು ಸೋಲಿಸಿದರು.91 ಕೆ.ಜಿ. ವಿಭಾಗದ ಎಂಟರ ಘಟ್ಟದ ಪೈಪೋಟಿಯಲ್ಲಿ ಸಂಜೀತ್‌, ಹಂಗರಿಯ ಆ್ಯಡಮ್‌ ಹಮೋರಿ ಎದುರು ಗೆದ್ದರು.

52 ಕೆ.ಜಿ. ವಿಭಾಗದ ಕ್ವಾರ್ಟರ್‌ ಫೈನಲ್‌ನಲ್ಲಿ ಲಲಿತ್‌ ಪ್ರಸಾದ್‌ 5–0ರಲ್ಲಿ ಮೆಹದಿ ಹಬೀಬಿ ಅವರನ್ನು ಪರಾಭವಗೊಳಿಸಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟರು.49 ಕೆ.ಜಿ. ವಿಭಾಗದ ಕ್ವಾರ್ಟರ್‌ ಫೈನಲ್‌ ಹಣಾಹಣಿಯಲ್ಲಿ ದೀಪಕ್‌ ಅವರು ಬೀಗಿ ಮಿರ್‌ ಎದುರು ವಿಜಯಿಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT