ಶನಿವಾರ, ಮಾರ್ಚ್ 25, 2023
22 °C

ವಿಶ್ವ ಪುರುಷರ ಬಾಕ್ಸಿಂಗ್ ಚಾಂಪಿಯನ್‌ಷಿಪ್‌: ಕ್ವಾರ್ಟರ್‌ಫೈನಲ್‌ಗೆ ಶಿವ ಥಾಪಾ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಬೆಲ್‌ಗ್ರೇಡ್‌: ಐದು ಬಾರಿಯ ಏಷ್ಯನ್ ಪದಕ ವಿಜೇತ, ಭಾರತದ ಶಿವ ಥಾಪಾ ಅವರು ವಿಶ್ವ ಪುರುಷರ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಎಂಟರಘಟ್ಟಕ್ಕೆ ತಲುಪಿದ್ದಾರೆ. ಇದರೊಂದಿಗೆ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಎರಡು ಪದಕ ಜಯಿಸಿದ ಭಾರತದ ಮೊದಲ ಪುರುಷ ಬಾಕ್ಸರ್ ಎನಿಸಿಕೊಳ್ಳಲು ಇನ್ನೊಂದೇ ಹೆಜ್ಜೆ ಸನಿಹದಲ್ಲಿದ್ದಾರೆ.

ಅಸ್ಸಾಂನ 27 ವರ್ಷದ ಶಿವ (63.5 ಕೆಜಿ ವಿಭಾಗ) ಇಲ್ಲಿ ನಡೆಯುತ್ತಿರುವ ಟೂರ್ನಿಯ ಪ್ರೀಕ್ವಾರ್ಟರ್‌ಫೈನಲ್‌ ಹಣಾಹಣಿಯಲ್ಲಿ ಸೋಮವಾರ ರಾತ್ರಿ 4–1ರಿಂದ ಫ್ರಾನ್ಸ್‌ನ ಲೂನೆಸ್‌ ಹಮ್ರೊಯಿ ಅವರನ್ನು ಪರಾಭವಗೊಳಿಸಿದರು. ಇಲ್ಲಿ ಸೆಮಿಫೈನಲ್ ತಲುಪಿದರೆ ಭಾರತದ ಬಾಕ್ಸರ್‌ಗೆ ಪದಕ ಖಚಿತವಾಗಲಿದೆ.

ದೋಹಾದಲ್ಲಿ ನಡೆದ 2015ರ ಆವೃತ್ತಿಯಲ್ಲಿ ಶಿವ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದರು.

ಹಮ್ರೊಯಿ ಎದುರು ಹೋದ ವರ್ಷ ಫ್ರಾನ್ಸ್‌ನಲ್ಲಿ ನಡೆದ ಅಲೆಕ್ಸಿಸ್‌ ವ್ಯಾಸ್ಟಿನ್ ಸ್ಮಾರಕ ಟೂರ್ನಿಯಲ್ಲಿ ಶಿವ ಸೋಲನುಭವಿಸಿದ್ದರು. ಇಲ್ಲಿ ಅದಕ್ಕೆ ಮುಯ್ಯಿ ತೀರಿಸಿಕೊಂಡಂತಾಗಿದೆ.

ಚಾಂಪಿಯನ್‌ಷಿಪ್‌ನಲ್ಲಿ ಶಿವ ಅವರು ಸೋಮವಾರ ಜಯ ಗಳಿಸಿದ ಭಾರತದ ಏಕೈಕ ಬಾಕ್ಸರ್ ಎನಿಸಿಕೊಂಡರು. ಸ್ಪರ್ಧೆಯಲ್ಲಿದ್ದ ಏಷ್ಯನ್ ಬೆಳ್ಳಿ ಪದಕ ವಿಜೇತ ದೀಪಕ್ ಭೋರಿಯಾ (51 ಕೆಜಿ) ಸೇರಿದಂತೆ ನಾಲ್ವರು ಬಾಕ್ಸರ್‌ಗಳು ನಿರಾಸೆ ಅನುಭವಿಸಿದರು.

ಎಂಟರ ಘಟ್ಟದ ಹಣಾಹಣಿಯಲ್ಲಿ ಶಿವ ಅವರಿಗೆ ಟರ್ಕಿಯ ಕರೀಮ್ ಒಯಿಜ್‌ಮೆನ್ ಸವಾಲು ಎದುರಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು