ತರಬೇತಿ ಕೋರ್ಸ್‌ಗೆ ಸೇರಿದ ಅಖಿಲ್‌ ಕುಮಾರ್‌

7

ತರಬೇತಿ ಕೋರ್ಸ್‌ಗೆ ಸೇರಿದ ಅಖಿಲ್‌ ಕುಮಾರ್‌

Published:
Updated:
ಅಖಿಲ್‌ ಕುಮಾರ್‌

ನವದೆಹಲಿ: ಭಾರತದ ಬಾಕ್ಸಿಂಗ್‌ ಕ್ರೀಡೆಯ ರಾಷ್ಟ್ರೀಯ ವೀಕ್ಷಕರಾಗಿರುವ ಬಾಕ್ಸರ್‌ ಅಖಿಲ್‌ ಕುಮಾರ್‌ ಅವರು ತರಬೇತುದಾರರಾಗಲು ಉತ್ಸಾಹ ತೋರಿದ್ದಾರೆ. ಇದಕ್ಕಾಗಿ ಅವರು ಒಂದು ವರ್ಷದ ಕೋರ್ಸ್‌ ಪಡೆಯಲಿದ್ದಾರೆ.

ಒಂದು ವರ್ಷದ ಡಿಪ್ಲೊಮಾ ಕೋರ್ಸ್‌ಗಾಗಿ ಅಖಿಲ್‌ ಕುಮಾರ್‌ ಪಟಿಯಾಲಾದಲ್ಲಿರುವ ರಾಷ್ಟ್ರೀಯ ಕ್ರೀಡಾ ಸಂಸ್ಥೆ (ಎನ್‌ಐಎಸ್‌)ಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ. ಇದೇ ಬುಧ ವಾರದಿಂದ ಕೋರ್ಸ್‌ ಪ್ರಾರಂಭವಾಗಲಿದೆ.

2006ರಲ್ಲಿ ನಡೆದ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಚಿನ್ನದ ಸಾಧನೆ ಮಾಡಿದ್ದ ಅಖಿಲ್‌ ಕುಮಾರ್‌ ಅವರು ಸದ್ಯ ಹರಿಯಾಣದಲ್ಲಿ ಉಪ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 

‘ಬಾಕ್ಸಿಂಗ್‌ ಆಡುತ್ತಿದ್ದಾಗಲೂ ನಾನು ಹಲವು ಕಿರಿಯರಿಗೆ ತರಬೇತಿ ನೀಡಿದ್ದೇನೆ. ಈ ಕೋರ್ಸ್‌ ಮಾಡುವುದರಿಂದ ತರಬೇತುದಾರನಾಗುವ ಅಧಿಕೃತ ಮಾನ್ಯತೆ ಸಿಗುತ್ತದೆ. ಇದಕ್ಕೆ ಅವಕಾಶ ಮಾಡಿಕೊಟ್ಟ ಹರಿಯಾಣದ ಪೊಲೀಸ್‌ ಮಹಾನಿರ್ದೇಶಕರಾದ (ಡಿಜಿಪಿ) ಬಲ್ಜಿತ್‌ ಸಿಂಗ್‌ ಸಂಧು ಅವರಿಗೆ ಆಭಾರಿಯಾಗಿದ್ದೇನೆ’ ಎಂದು ಅಖಿಲ್‌ ಕುಮಾರ್‌ ಹೇಳಿದ್ದಾರೆ. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !