ಶುಕ್ರವಾರ, ಏಪ್ರಿಲ್ 23, 2021
32 °C
ಏಷ್ಯನ್ ಪ್ಯಾರಾ ಕ್ರೀಡಾಕೂಟ: ಡಿಸ್ಕಸ್‌ ಥ್ರೋದಲ್ಲಿ ಭಾರತದ ಅಥ್ಲೀಟ್ ಸಾಧನೆ

ದೀಪಾ ಮಲಿಕ್‌ಗೆ ಕಂಚಿನ ಪದಕ

ಪಿಟಿಐ Updated:

ಅಕ್ಷರ ಗಾತ್ರ : | |

Deccan Herald

ಜಕಾರ್ತ: ಡಿಸ್ಕಸ್‌ ಥ್ರೋದಲ್ಲಿ ಕಂಚಿನ ಪದಕ ಗೆದ್ದ ಭಾರತದ ದೀಪಾ ಮಲಿಕ್‌ ಏಷ್ಯನ್ ಪ್ಯಾರಾ ಕ್ರೀಡಾಕೂಟದಲ್ಲಿ ವೈಯಕ್ತಿಕ ಎರಡನೇ ಪದಕ ತಮ್ಮದಾಗಿಸಿಕೊಂಡರು.

ಶುಕ್ರವಾರ ನಡೆದ ಎಫ್‌–51/52/53 ವಿಭಾಗದಲ್ಲಿ 9.67 ಮೀಟರ್ಸ್ ದೂರ ಎಸೆದು ಅವರು ತೃತೀಯ ಸ್ಥಾನ ಗೆದ್ದರು. ರಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ಗೆದ್ದಿದ್ದ ದೀಪಾ ಇಲ್ಲಿ ನಾಲ್ಕನೇ ಪ್ರಯತ್ನದಲ್ಲಿ ಪದಕ ಗೆಲ್ಲುವ ಅಂತರವನ್ನು ತಲುಪಿದರು. ಮಹಿಳೆಯರ ಜಾವೆಲಿನ್ ಥ್ರೋದಲ್ಲೂ ಅವರು ಕಂಚು ಗೆದ್ದಿದ್ದರು.

ಇರಾನ್‌ನ ಎಲ್ನಾಜ್ ದರಾಬಿಯನ್‌ ಅವರು ಏಷ್ಯನ್‌ ದಾಖಲೆ ಮುರಿಯುವ ಮೂಲಕ (10.71 ಮೀಟರ್ಸ್‌) ಚಿನ್ನ ಗೆದ್ದರೆ, ಬಹರೇನ್‌ನ ಫಾತಿಮಾ ನೆಧಾಮ್‌ (9.87 ಮೀಟರ್ಸ್‌) ಬೆಳ್ಳಿಯ ಪದಕ ಗೆದ್ದರು.

ಕಣದಲ್ಲಿದ್ದ ಭಾರತದ ಮತ್ತೊಬ್ಬ ಅಥ್ಲೀಟ್‌ ಏಕ್ತಾ ಭ್ಯಾನ್‌ (6.52 ಮೀಟರ್ಸ್‌) ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು