ಬೆಂಗಳೂರು: ಬೇಸಿಗೆ ರೇಸ್ಗಳನ್ನು ರದ್ದುಗೊಳಿಸಿರುವ ಬೆಂಗಳೂರು ಟರ್ಫ್ ಕ್ಲಬ್ (ಬಿಟಿಸಿ) ಜನರಿಂದ ಸಂಗ್ರಹಿಸಿರುವ ಪ್ರವೇಶ ಶುಲ್ಕವನ್ನು ಮರುಪಾವತಿ ಮಾಡಿದೆ.

ಈ ಅವಧಿಯಲ್ಲಿ ನಡೆಯಬೇಕಿದ್ದ ದ ಫಿಲ್ಲೀಸ್ ಚಾಂಪಿಯನ್ಷಿಪ್ ಸ್ಟೇಕ್ಸ್ (ಗ್ರೇಡ್ 1), ದ ಕೋಲ್ಟ್ಸ್ ಚಾಂಪಿಯನ್ಷಿಪ್ ಸ್ಟೇಕ್ಸ್ (ಗ್ರೇಡ್ 1), ದ ಕಿಂಗ್ಫಿಷರ್ ಅಲ್ಟ್ರಾ ಡರ್ಬಿ ಬೆಂಗಳೂರು (ಗ್ರೇಡ್ 1) ರೇಸ್ಗಳ ಪ್ರವೇಶ ಹಣವನ್ನು ಮರುಪಾವತಿಸಲಾಗಿದೆ ಎಂದು ಜಂಟಿ ಕಾರ್ಯದರ್ಶಿ ಕೆ.ಎಲ್. ನಾಗೇಶಬಾಬು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಟ್ರೇನರ್ಗಳ ತಪಾಸಣೆ: ಹೋದ ವಾರ ಬಿಟಿಸಿಯ ಪಶುವೈದ್ಯ ಮತ್ತು ಟ್ರೇನರ್ಗೆ ಕೊರೊನಾ ವೈರಸ್ಸೋಂಕು ದೃಢಪಟ್ಟಿತ್ತು. ಆದ್ದರಿಂದ ಕ್ಲಬ್ನ ಎಲ್ಲ ಟ್ರೇನರ್ಗಳನ್ನು ತಪಾಸಣೆಗೊಳಪಡಿಸಲಾಗಿದೆ. ವರದಿ ಬರುವವರೆಗೂ ಎಲ್ಲರಿಗೂ ಪ್ರತ್ಯೇಕವಾಸಕ್ಕೆ ಕಳುಹಿಸಲಾಗಿದೆ. ಕ್ಲಬ್ ಆವರಣ, ಕುದುರೆಗಳ ವಾಸಸ್ಥಳಗಳಲ್ಲಿ ಸೋಂಕು ನಿವಾರಣೆ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.